ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಹಿರಿಯರು ಹಾಗೂ ಕಾಫಿ ಮಂಡಳಿಯ ಅಧ್ಯಕ್ಷರಾಗಿದ್ದ ಚಿರಪರಿಚಿತ ವ್ಯಕ್ತಿ ಎಂ.ಎಸ್ ಬೋಜೆಗೌಡ ಅವರು ಇಂದು  ಹೆಜ್ಜೇನು ದಾಳಿಗೆ  ನಿಧನ ಹೊಂದಿದರು. 

ಇದನ್ನೂ ಓದಿ : ಹರಿಹರಪುರ ಶ್ರೀ ಮಠದಲ್ಲಿ 13ನೇ ದಿನದ ಐತಿಹಾಸಿಕ ಮಹಾಕುಂಭಾಭಿಷೇಕ ಮಹೋತ್ಸವ

ಕಾಫಿ ಮಂಡಳಿಯ ಅಧ್ಯಕ್ಷರು ಹಾಗೂ ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದ ಮತ್ತು ಅನೇಕರಿಗೆ ಸಹಾಯ ಹಸ್ತ ಚಾಚಿದ್ದ ಚಿಕ್ಕಮಗಳೂರಿನ ಚಿರಪರಿಚಿತ ವ್ಯಕ್ತಿ ಮೂಗ್ತಿಹಳ್ಳಿ ಎಂ.ಎಸ್ ಬೋಜೆಗೌಡ ಅವರು ಇಂದು ಹೆಜ್ಜೇನು ದಾಳಿಗೆ ತುತ್ತಾಗಿ ಕೊನೆಯುಸಿರೆಳೆದಿದ್ದಾರೆ. ಕಾಫಿನಾಡು ಚಿಕ್ಕಮಗಳೂರಿನ ಅರಶಿನ ಗುಪ್ಪೆ ಸಮೀಪವಿರುವ ಕೃಷ್ಣಗಿರಿ ಕಾಫಿ ಎಸ್ಟೇಟ್ ನಲ್ಲಿ ಆಕಸ್ಮಿಕವಾಗಿ ಹಿಂಡು ಹಿಂಡಾಗಿ ಹೆಜ್ಜೇನುಗಳ ಬೋಜೆಗೌಡ ಅವರ ಮೇಲೆ ದಾಳಿ ನಡೆಸಿದ್ದವು. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ದಾಳಿಯ ತೀವ್ರತೆಗೆ ಅವರು ಅಸುನೀಗಿದ್ದಾರೆ, ಎರಡು ಬಾರಿ ಕಾಫಿ ಮಂಡಳಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಅವರ ಅಧ್ಯಕ್ಷಗಿರಿ ಮಾರ್ಚ್ ತಿಂಗಳ ಕೊನೆಯಲ್ಲಿ ಮುಗಿದಿತ್ತು. ಅವರು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾಗಿಯೂ ನೇಮಕಗೊಂಡು ಕಾರ್ಯ ನಿರ್ವಹಿಸಿದ್ದರು.


ಸಮಾಜದಲ್ಲಿ ಎಲ್ಲರೊಂದಿಗೆ ಸ್ನೇಹ ಹಾಗೂ ಪ್ರೀತಿಯಿಂದಿದ್ದು ಕಷ್ಟದಲ್ಲಿರುವವರಿಗೆ ಸದಾ ಸಹಾಯ ಮಾಡುತ್ತಿದ್ದ ವ್ಯಕ್ತಿಯ ಸಾವು ಕುಟುಂಬವರ್ಗದಲ್ಲಿ, ಬಂಧುಗಳಲ್ಲಿ ಹಾಗೂ ಸ್ನೇಹಿತರಲ್ಲಿ ಬೇಸರ ಉಂಟುಮಾಡಿದೆ. ಮೃತರು ಅಪಾರ ಸಂಖ್ಯೆಯ ಬಂಧುಗಳನ್ನು ಹಾಗೂ ಸ್ನೇಹಿತರನ್ನು ಅಗಲಿದ್ದಾರೆ.


ಶ್ರೀ ಕ್ಷೇತ್ರ ಹೊರನಾಡಿನಲ್ಲಿ ಸಾಮೂಹಿಕ ವಿವಾಹ ; ಅರ್ಜಿ ಸಲ್ಲಿಕೆಗೆ ಮೇ 16 ಕೊನೆಯ ದಿನಾಂಕ 

ಹೊರನಾಡು : ಮಲೆನಾಡಿನ ತಪ್ಪಲಿನಲ್ಲಿರುವ ಪವಿತ್ರ ಧಾರ್ಮಿಕ ಕ್ಷೇತ್ರವಾದ ಶ್ರೀ ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಸಾಮೂಹಿಕ ವಿವಾಹದ ನೋಂದಣಿ ಆರಂಭವಾಗಿದೆ.


ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಶ್ರೀ ಅನ್ನಪೂರ್ಣೇಶ್ವರಿ ದೇವಿಯ ಕ್ಷೇತ್ರವಾದ ಹೊರನಾಡಿನಲ್ಲಿ ಈ ಬಾರಿಯ 50 ಜೋಡಿಗೆ ಸಾಮೂಹಿಕ ವಿವಾಹ ನಡೆಸಲು ದೇವಸ್ಥಾನ ಮಂಡಳಿಯು ಅವಕಾಶ ಕಲ್ಪಿಸಿದೆ. ಈ ನಿಟ್ಟಿನಲ್ಲಿ ಮೊದಲು ನೊಂದಾಯಿಸುವ 50 ಜೋಡಿಗೆ ಸಾಮೂಹಿಕ ವಿವಾಹ ನಡೆಸಲು ನಿರ್ಧರಿಸಲಾಗಿದ್ದು ವಿವಾಹವಾಗಲಿಚ್ಚಿಸುವ ವಧು-ವರರು ಸೂಕ್ತ ದಾಖಲೆಗಳೊಂದಿಗೆ ತಮ್ಮ ಅರ್ಜಿಯನ್ನು ಮೇ 12ನೇ ತಾರೀಖಿನ ಒಳಗೆ ಸಲ್ಲಿಸಬೇಕೆಂದು ಸೂಚಿಸಿದೆ.


ದಾನ ಧರ್ಮಗಳಿಗೆ ಹೆಸರಾಗಿರುವ ಪವಿತ್ರ ಕ್ಷೇತ್ರವು ಕಳೆದ ಅನೇಕ ವರ್ಷಗಳಿಂದ ಸಾಮೂಹಿಕ ವಿವಾಹವನ್ನು ನಡೆಸಿಕೊಂಡು ಬರುತ್ತಿದ್ದು ಸಮಾಜದ ಉನ್ನತಿಗೆ ತನ್ನದೇ ಆದ ರೀತಿಯಲ್ಲಿ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಅರ್ಹರು ಸೂಕ್ತ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಮೊಬೈಲ್ ನಂಬರ್ ನ್ನು ಸಂಪರ್ಕಿಸಿ  9448282410 / 9448282424