ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ತಮಗೆ ತಮ್ಮ ಕುಟುಂಬಕ್ಕೆ ಉಂಟಾದ ಸಮಸ್ಯೆಯನ್ನು ಪರಿಹಾರ ಮಾಡುವಂತೆ ದೇವರಲ್ಲಿ ಹರಕೆ ಹೊತ್ತು ಸಮಸ್ಯೆಗಳಿಗೆ ಪರಿಹಾರ ಹೊಂದುವುದು ಸಾಮಾನ್ಯ ಆದರೆ ಗ್ರಾಮಸ್ಥರು ಒಗ್ಗೂಡಿ ಅರಣ್ಯಕ್ಕೆ ಬೆಂಕಿ ಕುವವರ ಜೀವನ ನಾಶವಾಗಲಿ ಎಂದು ವಿಶಿಷ್ಟವಾಗಿ ದೇವರಿಗೆ ಹರಕೆ ಹೊತ್ತು ಆ ಕುರಿತಾದ ಬ್ಯಾನರ್ ಒಂದನ್ನು ಹಾಕಿರುವ ಘಟನೆ ನಡೆದಿದೆ. 

ಇದನ್ನೂ ಓದಿ : 15 ವರ್ಷಗಳಿಂದ ಆಸ್ಪತ್ರೆ ಕಾಮಗಾರಿ ಪ್ರಗತಿಯಲ್ಲಿದೆ, ನಿಧಾನವಾಗಿ ಚಲಿಸಿ ! ಮುಖ್ಯಮಂತ್ರಿಗೆ ಶುಭಕೋರಿ ಬ್ಯಾನರ್ ಹಾಕಿದ ಶೃಂಗೇರಿ ಜನ

ಚಿಕ್ಕಮಗಳೂರು ಜಿಲ್ಲೆಯ ಸಿಂದಿಗೆರೆ ಮೀಸಲು ಅರಣ್ಯ ಪ್ರದೇಶ ಭಾಗದಲ್ಲಿ  ಆಗಾಗ ಬೆಂಕಿ  ಅವಘಡ ಸಂಭವಿಸುತ್ತಿದ್ದು ಈ ಅವಘಡಕ್ಕೆ ಕೆಲ ದುಷ್ಕರ್ಮಿಗಳು ಬೇಕೆಂದೇ ಬೆಂಕಿ ಹಚ್ಚುತ್ತಿರುವುದೇ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಕುರಿತು ತಿಳಿಸಿರುವ ಅವರು ಅರಣ್ಯ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಆದರೆ ಬೇಕುಬೇಕೆಂದೇ ಕಿಡಿಗೇಡಿಗಳು ಕಾಡಿಗೆ ಬೆಂಕಿ ಹಚ್ಚಿ ಅರಣ್ಯ ನಾಶ ಮಾಡುತ್ತಿರುವುದು ಅತ್ಯಂತ ದುರದೃಷ್ಟಕರವಾಗಿದೆ ಈ ನಿಟ್ಟಿನಲ್ಲಿ ಊರಿನವರೆಲ್ಲ ನಿಶ್ಚಯಿಸಿ ಈ ನಿರ್ಧಾರಕ್ಕೆ ಬಂದಿರುವುದಾಗಿ  ತಿಳಿಸಿದ್ದಾರೆ.  


ಈ ಕುರಿತು ಪ್ರಸಿದ್ಧ ದೇವಿಯಾದ ಪುರದಮ್ಮ ಹಾಗೂ ಶ್ರೀ ರೇವಣಸಿದ್ದೇಶ್ವರ ದೇವರಲ್ಲಿ ಹರಕೆ ಹೊತ್ತ ಗ್ರಾಮಸ್ಥರು ಅರಣ್ಯಕ್ಕೆ ಬೆಂಕಿಯಿಡುತ್ತಿರುವವರ ಜೀವನ ಸರ್ವನಾಶವಾಗಬೇಕು ಎಂದು ಪ್ರಾರ್ಥಿಸಿ ಈ ಕುರಿತಾಗಿ ಸಿಂದಿಗೆರೆ ಗ್ರಾಮ ಹಾಗೂ ಅರಣ್ಯದಲ್ಲಿ ಬ್ಯಾನರ್ ಅಳವಡಿಸಿದ್ದಾರೆ.  ಈ ಬ್ಯಾನರ್ ಅಳವಡಿಕೆಯ ನಂತರದಲ್ಲಿ ಅರಣ್ಯಕ್ಕೆ ಬೆಂಕಿ ಬೀಳುತ್ತಿರುವುದು ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ. 

ಪರಿಸರವನ್ನು, ಮರ ಗಿಡಗಳನ್ನು ಬೆಳೆಸಬೇಕಾದವರೇ ಬೇಕುಬೇಕೆಂದು ಅರಣ್ಯ ನಾಶ ಮಾಡುತ್ತಿರುವುದು ಅತ್ಯಂತ ಹೇಯ ಕೃತ್ಯವಾಗಿದ್ದು ಮುಂಬರುವ ದಿನಗಳಲ್ಲಿ ಈ ರೀತಿಯ ಕೆಟ್ಟ ಕೃತ್ಯಗಳು ನಿಲ್ಲಬೇಕಿದೆ ಎಂದು ಗ್ರಾಮಸ್ಥರು ಕೋರಿದ್ದಾರೆ.


ಕಡೂರು : ಅಪರಿಚಿತ ಪುರುಷನ ಶವ ಪತ್ತೆ ; ಕೊಲೆಮಾಡಿರುವ ಶಂಕೆ

ಕಡೂರು : 35 ವರ್ಷ ಪ್ರಾಯದ ವ್ಯಕ್ತಿಯ ಶವವೊಂದು ರೈಲ್ವೇ ಟ್ರಾಕ್ ಬಳಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. 

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೇವನೂರು ಸಮೀಪದ ತಿಪ್ಪಗೊಂಡನಹಳ್ಳಿ ರೈಲ್ವೆ ಟ್ರ್ಯಾಕ್ ಬಳಿ ಅನುಮಾನಾಸ್ಪದ ರೀತಿಯಲ್ಲಿ 35 ವರ್ಷ ಪ್ರಾಯದ ಪುರುಷನ ಶವ ಪತ್ತೆಯಾಗಿದೆ. 


ಈ ಶವ ಪತ್ತೆಯಾದ ಸ್ಥಳಕ್ಕೆ ಸಖರಾಯಪಟ್ಟಣ ಪಿಎಸ್ಐ ಹರೀಶ್ ಧಾವಿಸಿ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಶವವನ್ನುಜಿಲ್ಲಾಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಈ ಸಂಬಂಧ ಹೆಚ್ಚಿನ ತನಿಖೆಯ ಅವಶ್ಯಕತೆಯಿದ್ದು ಮೇಲ್ನೋಟಕ್ಕೆ ನೋಡಿದಾಗ ಕೊಲೆ ಎಂಬ ಅನುಮಾನ ವ್ಯಕ್ತವಾಗಿದೆ, ಪೊಲೀಸರ ಸಂಪೂರ್ಣ ತನಿಖೆಯ ನಂತರವಷ್ಟೇ ಈ ಕುರಿತು ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.