ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಸಲುವಾಗಿ ಹಾಗೂ ಅವರ ಕೌಶಲ್ಯವನ್ನು ವೃದ್ಧಿಸುವ ಸಲುವಾಗಿ ಹಿಂದೂ ಸೇವಾ ಪ್ರತಿಷ್ಠಾನದ ವತಿಯಿಂದ ಉಚಿತ ಎಂಬ್ರಾಯ್ಡರಿ ತರಬೇತಿ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮ ಶೃಂಗೇರಿಯಲ್ಲಿ ನಡೆಯಿತು. 

ಇದನ್ನೂ ಓದಿ : ಸಹಕಾರ ಸಾರಿಗೆ ಸಂಸ್ಥೆಯನ್ನು ಪುನಾರಾರಂಭಿಸುವಂತೆ ಮುಖ್ಯಮಂತ್ರಿಗಳಿಗೆ ಮಜ್ದೂರ್ ಸಂಘ ಹಾಗೂ ಸಾರಿಗೆ ಕಾರ್ಮಿಕರಿಂದ ಮನವಿ

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮೆಣಸೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಿಂದೂ ಸೇವಾ ಪ್ರತಿಷ್ಠಾನ ಶೃಂಗೇರಿ ತಾಲೂಕು ಇವರ ವತಿಯಿಂದ ನಡೆದ ಉಚಿತ ಎಂಬ್ರಾಯ್ಡರಿ ತರಬೇತಿ ಕೇಂದ್ರ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ಮಹಿಳೆಯರ ಸ್ವಾವಲಂಬನೆಯ ದೃಷ್ಟಿಯಿಂದ ಹಿಂದೂ ಸೇವಾ ಪ್ರತಿಷ್ಠಾನ ಈ ಹಿಂದಿನಿಂದಲೂ ಕೂಡ ವಿವಿಧ ತರಬೇತಿಗಳನ್ನು ನೀಡುತ್ತಾ ಬಂದಿದ್ದು ಅಂತೆಯೇ ಈ ಬಾರಿ ಮಹಿಳೆಯರ ಸ್ವಾವಲಂಬನೆಯ ಜೊತೆಗೆ ಅತ್ಯುತ್ತಮ ಕೌಶಲ್ಯಗಳನ್ನು ವೃದ್ಧಿಸುವ ಸಲುವಾಗಿ ಹಾಗೂ ವೈಯುಕ್ತಿಕ ಹಾಗೂ ಸಮಾಜದ ನೆಲೆಗಟ್ಟಿನಲ್ಲಿ ಅವರನ್ನು ಸದೃಢವಾಗಿಸುವ ಸಲುವಾಗಿ ಹಿಂದೂ ಸೇವಾ ಪ್ರತಿಷ್ಠಾನ ಎಂಬ್ರಾಯ್ಡರಿ ತರಬೇತಿ ಆರಂಭಿಸಿದೆ ಎಂಬುದಾಗಿ ಸಂಘಟಕರು ತಿಳಿಸಿದರು. ಮಹಿಳೆಯರು ಸ್ವಾವಲಂಬಿ ಜೀವನದ ಜೊತೆಗೆ ಸಮಾಜದ ಒಳಿತಿಗಾಗಿ ಹೆಜ್ಜೆಯಿಡುವುದು ಹಿಂದೂ ಸೇವಾ ಪ್ರತಿಷ್ಠಾನದ ಆಶಯವಾಗಿದೆ ಎಂದು ತಿಳಿಸಿದರು. 



ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ವ್ಯವಸ್ಥಾ ಪ್ರಮುಖರಾದ ಶ್ರೀ ಕೃಷ್ಣಮೂರ್ತಿ, ಹಿರಿಯರಾದ RI ಕೃಷ್ಣಪ್ಪನವರು, ಮಹಾಬಲ ಬೀಡೆಯವರು, ತಾಲೂಕು ಸಂಯೋಜಕರಾದ ನೂತನ ಸೂರ್ಯ, ಅನಿರುಧ್ ಕೊರಡಕಲ್, ಸುಮಂಗಲ ಕಲ್ಕಟ್ಟೆ, ಹಿರಿಯ ಸ್ವಯಂಸೇವಕರಾದ  ಎ.ಎಸ್ ನಯನ, ಸನಾತನ ಸುನೀಲ್ ಖಾಂಡ್ಯ ಉಪಸ್ಥಿತರಿದ್ದರು.

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಹೆಸರಿಡಲು ನಿರ್ಧಾರ.

ಶಿವಮೊಗ್ಗದ ಸೋಗಾನೆ ಸಮೀಪದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಹೆಸರು ಇಡಲು ನಿರ್ಧರಿಸಿರುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ‌ ಹೇಳಿದ್ದಾರೆ.



ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯಾರ ಹೆಸರಿಡಬೇಕು ಎಂದು ಚರ್ಚೆಗೆ ಬಂದಾಗ ಬಹಳಷ್ಟು ಹೆಸರು ಮುನ್ನಲೆಗೆ ಬಂದಿದ್ದವು. ಮೊದಲ ರಾಷ್ಟ್ರಕವಿ ಕುವೆಂಪು, ಕಡಿದಾಳ್ ಮಂಜಪ್ಪ, ಬಂಗಾರಪ್ಪ ಸೇರಿದಂತೆ ಇನ್ನೂ ಅನೇಕರ ಹೆಸರುಗಳು ಕೇಳಿಬಂದಿದ್ದವು. 

ಶಿವಮೊಗ್ಗ ಸಹ್ಯಾದ್ರಿ ತಪ್ಪಲಿನಲ್ಲಿ ಇರುವುದರಿಂದ ಸಹ್ಯಾದ್ರಿ ವಿಮಾನ ನಿಲ್ದಾಣ ಎಂಬ ಹೆಸರನ್ನು ಇಡುವಂತೆ ಸಹ ಕೂಗು ಕೇಳಿತ್ತು. ಇದೆಲ್ಲದರ ಜೊತೆಗೆ ಯಡಿಯೂರಪ್ಪನವರ ಹೆಸರು ಇಡಬೇಕೆಂಬ ಕೂಗು ಸಹ ಕೇಳಿಬಂದಿತ್ತು. ಈ ಗೊಂದಲಕ್ಕೆ ಸಿಎಂ ಇದೀಗ ಸಿಎಂ ಬಸವರಾಜ ಬೊಮ್ಮಾಯಿ ತೆರೆ ಎಳೆದಿದ್ದಾರೆ.



ಆದರೆ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆ, ಟ್ರೋಲ್ ಮಾಡಲಾಗುತ್ತಿದ್ದು ಈ ಹಿಂದೆ ಕಾಂಗ್ರೆಸ್ ಹಲವು ಯೋಜನೆಗಳಿಗೆ ತಮ್ಮ ನಾಯಕರ ಹೆಸರುಗಳನ್ನು ಇಟ್ಟಿದ್ದರು, ಕಾಂಗ್ರೆಸ್ ವ್ಯಕ್ಯಿಪೂಜೆ ಮಾಡುತ್ತದೆ ಎಂದು ಬಿಜೆಪಿ ಸಾಕಷ್ಟು ಟೀಕೆ ಮಾಡಿಕೊಂಡೇ ಬಂದಿತ್ತು. ಆದರೆ ಇದೀಗ ಯಡಿಯೂರಪ್ಪ ಹೆಸರನ್ನು ಏರ್ಪೋರ್ಟ್ ಗೆ ಇಡುವುದು ವ್ಯಕ್ತಿಪೂಜೆ ಅಲ್ಲವೇ ಎಂದು ಟೀಕೆ ವ್ಯಕ್ತವಾಗುತ್ತಿದೆ.

ಅದರಲ್ಲಿ ಕೆಲವು: ಯಡಿಯೂರಪ್ಪ ಹೆಸರನ್ನು ಅವರು ಇದ್ದ ಜೈಲಿಗೆ ಇಡಿ: ಯಡಿಯೂರಪ್ಪ ಹೆಸರನ್ನು ಅವರು ಭ್ರಷ್ಟಾಚಾರದ ಆರೋಪದ ಮೇಲೆ ಬಂಧನವಾದಾಗ ಇದ್ದ ಜೈಲಿಗೆ ಇಡುವುದು ಸೂಕ್ತ, ಏರ್ಪೋರ್ಟ್ ಗೆ ಬೇಡ ಎಂಬ ಟ್ರೋಲ್ ಮಾಡಲಾಗಿದೆ.

ಅಪ್ಪ ಮಕ್ಕಳ ಹೆಸರನ್ನು ಒಂದೊಂದಕ್ಕೆ ಇಡಿ: ಏರ್ಪೋರ್ಟ್ ಗೆ ಯಡಿಯೂರಪ್ಪ, ಬಸ್ ನಿಲ್ದಾಣಕ್ಕೆ ಈಶ್ವರಪ್ಪ, ರೈಲ್ವೇ ಸ್ಟೇಷನ್ ಗೆ ಯಡಿಯೂರಪ್ಪ ಮಗ ವಿಜಯೇಂದ್ರ ಹಾಗೂ ಈಶ್ವರಪ್ಪ ಮಗ ಕಾಂತೇಶ್ ಹೆಸರಿಡಿ

ಎಲ್ಲರೂ ಕಳ್ಳರು ಹಾಗಾಗಿ ಯಾರೂ ಪ್ರಶ್ನೆ ಮಾಡುವುದಿಲ್ಲ:  ಶಿವಮೊಗ್ಗ ವಿಮಾನ ನಿಲ್ದಾಣದ ಹೆಸರಿನ ಬಗ್ಗೆ ಯಾವುದೇ ರಾಜಕಾರಣಿಗಳು ಯಡಿಯೂರಪ್ಪನ ನವರ ಹೆಸರು ಇಡಬಾರದು ಎಂದು ಹೋರಾಟ ಮಾಡುವುದಿಲ್ಲ ಯಾಕೆ ಗೊತ್ತಾ ಎಲ್ಲಾ ರಾಜಕಾರಣಿಗಳು ಒಂದೇ ಕರ್ನಾಟಕದ ಕಳ್ಳರು ಅದಕ್ಕೆ.

ಸಮರ್ಥನೆ: ಯಡಿಯೂರಪ್ಪ ಏರ್ ಪೋರ್ಟ್, ಕಾಂಗ್ರೆಸ್ ನವ್ರು ಮಾಡಿದ್ರೆ ಚಮಚ. ನಾವು ಮಾಡೋದೆಲ್ಲ ಸಾಚಾ.(ಈ ತರ ಸಮರ್ಥನೆ ಮಾಡೋಕೆ ಬರೋರು ಲುಚ್ಛಗಳು) ಇನ್ನೂ ಅನೇಕ ಟೀಕೆ ಹಾಗೂ ಟ್ರೋಲ್ ವ್ಯಕ್ತವಾಗುತ್ತಿದೆ