ಹಾಸನ : (ನ್ಯೂಸ್ ಮಲ್ನಾಡ್ ವರದಿ) ಹಾಸನದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.

ಇದನ್ನೂ ಓದಿ : ಅಕ್ರಮ ಗೋಮಾಂಸ ಸಾಗಾಟ ನಡೆಸುತ್ತಿದ್ದ ಇಬ್ಬರು ಅಸ್ಸಾಂ ಕಾರ್ಮಿಕರು ಪೊಲೀಸರ ವಶಕ್ಕೆ

ಹಾಸನ ನಗರದ ಕೊಂಕನಘಟ್ಟ ಸಂಕಲಾಪುರ ರಸ್ತೆಯ ರಾಜು ಎಂಬುವವರ ಹಿತ್ತಲ ಗದ್ದೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಈ ಕುರಿತು ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಈ ಸಂಬಂಧ ತನಿಖೆ ಆರಂಭಿಸಿದ್ದಾರೆ.

ಮೃತ ವ್ಯಕ್ತಿಯು 30 ರಿಂದ 35 ವರ್ಷ ಪ್ರಾಯದೊಳಗಿನವರಾಗಿದ್ದು 160 ಸೆಂ.ಮೀ ಎತ್ತರವಿದ್ದಾರೆ. ಈ ವ್ಯಕ್ತಿಯ ಕುರಿತು ಮಾಹಿತಿ ಹೊಂದಿರುವವರು ಪೊಲೀಸ್ ಅಧೀಕ್ಷಕರಿಗೆ ಮಾಹಿತಿ ನೀಡಬಹುದು. 

ಮೃತ ವ್ಯಕ್ತಿಯ ಶರೀರವನ್ನು ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ಇಡಲಾಗಿದ್ದು ಪೊಲೀಸರು ಈ ಸಂಬಂಧ ಹೆಚ್ಚಿನ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. ಈ ವ್ಯಕ್ತಿಯ ಸಾವಿಗೆ ನಿಖರ ಕಾರಣಗಳೇನು ಎಂದು ಸಂಪೂರ್ಣ ತನಿಖೆಯ ನಂತರವಷ್ಟೇ ತಿಳಿಯಬೇಕಿದೆ.