ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಅಣ್ಣಪ್ಪ ಸ್ವಾಮಿ ದೇವಾಲಯದಿಂದ ಹಣ ಕದಿಯುವ ವೇಳೆ ಸ್ಥಳೀಯರ ಕೈಗೆ ಕಳ್ಳನೋರ್ವ ಸಿಕ್ಕಿಬಿದ್ದು ಧರ್ಮದೇಟು ತಿಂದ ಘಟನೆ ನಡೆದಿದೆ. 

ಇದನ್ನೂ ಓದಿ : ಬಾಳೆಹೊನ್ನೂರು : ಅಕ್ರಮವಾಗಿ ಗೋವನ್ನು ಕಡಿದು ಸಂಗ್ರಹಿಸಿದ್ದ ಒಂದು ಕ್ವಿಂಟಾಲ್ ಗೋಮಾಂಸವನ್ನು ವಶಕ್ಕೆ ಪಡೆದ ಪೊಲೀಸರು | ಪೊಲೀಸರನ್ನು ತಳ್ಳಾಡಿ ಎಸ್ಕೇಪ್ ಆದ ಕಿಡಿಗೇಡಿಗಳು

ಚಿಕ್ಕಮಗಳೂರು ಹಾಗೂ ದಕ್ಷಿಣಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್ ನಲ್ಲಿರುವ ಶ್ರೀ ಅಣ್ಣಪ್ಪ ಸ್ವಾಮಿ ದೇಗುಲದಲ್ಲಿದ್ದ ಕಾಣಿಕೆ ಹುಂಡಿಯಿಂದ ಹಣ ಕದಿಯುವಾಗ ಬೇಲೂರು ಮೂಲದ ವ್ಯಕ್ತಿ ಸಿಕ್ಕಿಬಿದ್ದಿದ್ದು ಆತನಿಗೆ ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ. 


ಈ ದಾರಿಯಲ್ಲಿ ಸಾಗುವ ಅನೇಕರು ವಾಹನ ನಿಲ್ಲಿಸಿ ದೇವರಿಗೆ ಕಾಣಿಕೆ ರೂಪದಲ್ಲಿ ಹಣವನ್ನು ಕಾಣಿಕೆ ಹುಂಡಿಗೆ ಹಾಕಿ ತೆರಳುತ್ತಾರೆ, ಅಪಾರವಾದ ಭಕ್ತಿಯನ್ನು ಅಣ್ಣಪ್ಪ ಸ್ವಾಮಿಯ ಮೇಲೆ ಹೊಂದಿರುವ ಭಕ್ತರು ಕಳ್ಳ ನಡೆಸಿರುವ ಈ ಕೃತ್ಯವನ್ನು ಕಂಡು ಸಿಟ್ಟಾಗಿ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. 

ಆದರೆ ಈ ಕುರಿತು ವೀಡಿಯೋ ಮುಖಾಂತರ ಮಾತನಾಡಿರುವ ಹಲ್ಲೆಗೊಳಗಾದ ವ್ಯಕ್ತಿ ಮೊದಲಿಗೆ ಹುಂಡಿಗೆ ಒಂದಷ್ಟು ಹಣ ಹಾಕಿದ್ದೆ ನಂತರದಲ್ಲಿ ಇನ್ನೊಂದಷ್ಟು ಹಣವನ್ನು ಹಾಕಲೆಂದು ಕೈಯಲ್ಲಿ ಹಿಡಿದುಕೊಂಡಿದ್ದೆ ಆದರೆ ಇದನ್ನು ಸ್ಥಳೀಯರು ತಪ್ಪಾಗಿ ಅರ್ಥೈಸಿಕೊಂಡು ಹೊಡೆದಿದ್ದಾರೆ ಎಂದಿದ್ದಾನೆ ಹಾಗೂ ಯುವಕರ ಬಳಿ ಹೋಗಲಿ ಬಿಡಿ ನನ್ನದೇ ತಪ್ಪು ಎಂದು ಒಪ್ಪಿಕೊಂಡಿದ್ದಾನೆ. ನಾಲ್ಕು ಬಾರಿಸಿದ ಯುವಕರು ಮುಂದಿನ ದಿನಗಳಲ್ಲಿ ಈ ರೀತಿಯ ಕಳ್ಳತನ ನಡೆಸದೇ ಉತ್ತಮವಾಗಿ ಬಾಳುವಂತೆ ಆತನಿಗೆ ತಿಳಿಸಿದ್ದಾರೆ.


ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಏಳು ಜನ ಪೊಲೀಸರ ಬಲೆಗೆ

ಚಿಕ್ಕಮಗಳೂರು : ಅಕ್ರಮವಾಗಿ ಜೂಜಾಟದಲ್ಲಿ ತೊಡಗಿದ್ದ ಆರೋಪಿಗಳನ್ನು ಚಿಕ್ಕಮಗಳೂರು ಜಿಲ್ಲೆಯ ಪೊಲೀಸರು ವಿವಿಧೆಡೆಗಳಲ್ಲಿ ದಾಳಿ ನಡೆಸಿ ವಶಕ್ಕೆ ಪಡೆದಿರುವ ಘಟನೆ ವರದಿಯಾಗಿದೆ. 

ಚಿಕ್ಕಮಗಳೂರು ನಗರ ಹಾಗೂ ತರೀಕೆರೆ ಪಟ್ಟಣದ ವಿವಿಧ ಕಡೆಗಳಲ್ಲಿ ಪ್ರತ್ಯೇಕ ದಾಳಿ ನಡೆಸಿದ ಪೊಲೀಸ್ ತಂಡಗಳು ಜೂಜಾಟದಲ್ಲಿ ತೊಡಗಿದ್ದ ಏಳು ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಟ್ಕಾ ಜೂಜಾಟದಲ್ಲಿ ಭಾಗಿಯಾಗಿದ್ದ ಈ ಆರೋಪಿಗಳಿಂದ 84,350 ರೂಪಾಯಿ ನಗದನ್ನು ಹಾಗೂ ಏಳು ಜನರನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಆರು ಪ್ರಕರಣಗಳನ್ನು ದಾಖಲು ಮಾಡಿದ್ದಾರೆ.  


ಈ ಕುರಿತು ಎಚ್ಚರಿಕೆ ನೀಡಿರುವ ಅಧಿಕಾರಿಗಳು ಅಕ್ರಮವಾಗಿ ಸಾರ್ವಜನಿಕರು ಇಂತಹ ಹಣ ಕಳೆದುಕೊಳ್ಳುವ ಜೂಜಾಟದಲ್ಲಿ ಭಾಗಿಯಾಗಿ ಜೂಜಾಟ ನಡೆಸಿದಲ್ಲಿ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು. ಹಾಗೂ ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡುವುದಾಗಿ ತಿಳಿಸಿದ್ದಾರೆ. 

ಈ ದಾಳಿಯಲ್ಲಿ ಭಾಗಿಯಾಗಿ ಆರೋಪಿಗಳನ್ನು ಹಾಗೂ ಅವರ ಬಳಿಯಿದ್ದ ಹಣವನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದ ಪೊಲೀಸ್ ತಂಡವನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.