ಚಿಕ್ಕಮಗಳೂರು :(ನ್ಯೂಸ್ ಮಲ್ನಾಡ್ ವರದಿ) ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಮಳೆಗೆ ಮರ ಬಿದ್ದು ಆಲ್ದೂರು - ಬಾಳೆಹೊನ್ನೂರು ಮಾರ್ಗದ ರಸ್ತೆ ಸಂಚಾರ ಕೆಲ ಸಮಯ ಅಸ್ತವ್ಯಸ್ತಗೊಂಡಿತು.

ಇದನ್ನೂ ಓದಿ : ಪ್ರಗತಿಪರ ಚಿಂತನೆ ಹೊಂದಿರುವ ಸರ್ವಧರ್ಮೀಯ ಸಮಾನ ಮನಸ್ಕರಿಂದ ನಾಳೆ ಯುಗಾದಿ ಹಬ್ಬದ ಆಚರಣೆ

ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಹಾಗೂ ಬಾಳೆಹೊನ್ನೂರು ಸಂಪರ್ಕಿಸುವ ಮಾರ್ಗಮಧ್ಯೆ ಭಾರೀ ಗಾಳಿಮಳೆಯಿಂದಾಗಿ ಮರ ಬಿದ್ದಿದ್ದು ವಾಹನ ಸಂಚಾರಕ್ಕೆ ಅಡ್ಡಿಉಂಟಾಗಿತ್ತು. ಈ ಭಾಗದಲ್ಲಿ ಉತ್ತಮ ಮಳೆಯಾಗಿದ್ದು ಮಳೆಯಿಂದಾಗಿ ಕೆಲ ಕಾಲ ರಸ್ತೆ ಸಂಚಾರಕ್ಕೆ ಸಮಸ್ಯೆ ಉಂಟಾಯಿತು. 

ನಂತರದಲ್ಲಿ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಮರದ ತೆರವು ಕಾರ್ಯಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಮಲೆನಾಡು ಭಾಗದಲ್ಲಿ ಉಂಟಾದ ಮಳೆ ತೋಟಗಳಿಗೆ ನೀರುಂಟುಮಾಡಿದ್ದು ಕೃಷಿಕರಿಗೆ ಒಂದೆಡೆ ಖುಷಿ ತಂದರೆ ಮರಬಿದ್ದು ಕೆಲಸಮಯ ರಸ್ತೆ ತಡೆ ಉಂಟಾದಾಗ ಕೆಲ ಸಮಯ ದಾರಿಹೋಕರು ಪ್ರಯಾಸಪಟ್ಟರು.