ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಜಿಲ್ಲಾಡಳಿತ ಜಿಲ್ಲಾಪಂಚಾಯತ್ ಚಿಕ್ಕಮಗಳೂರು ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಾಳೆ ಬೃಹತ್ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಚಿಕ್ಕಮಗಳೂರಿನ ಎಐಟಿ ಕಾಲೇಜಿನಲ್ಲಿ ಆಯೋಜನೆಗೊಂಡಿದೆ.
ಇದನ್ನೂ ಓದಿ : ಲೇಔಟ್ ನಿರ್ಮಾಣ ಸಂಬಂಧ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿ
ಜನರ ಆರೋಗ್ಯವನ್ನು ಸಧೃಡವಾಗಿಡುವ ದೃಷ್ಟಿಯಿಂದ ಹಾಗೂ ಅವರ ಆರೋಗ್ಯದ ಸಮಸ್ಯೆಗಳಿಗೆ ಪರಿಹಾರ ನೀಡುವ ಸಲುವಾಗಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಚಿಕ್ಕಮಗಳೂರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ, ಒಕ್ಕಲಿಗರ ದಂತವೈದ್ಯ ಕಾಲೇಜು ಬೆಂಗಳೂರು, ಕಿದ್ವಾಯಿ ಸ್ಮಾರಕ ಗ್ರಂಥಿ ಆಸ್ಪತ್ರೆ ಬೆಂಗಳೂರು, ಬಿ. ಜಿ.ಎಸ್ ಅಪೋಲೋ ಆಸ್ಪತ್ರೆ ಮೈಸೂರು, ಏನಾಪೋಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಮಂಗಳೂರು, ರಾಷ್ಟ್ರೀಯ ಸೇವಾ ಯೋಜನೆ, ಸರ್ಕಾರಿ ನೌಕರರ ಸಂಘ ಚಿಕ್ಕಮಗಳೂರು, ನಿಮ್ಹಾನ್ಸ್ ಬೆಂಗಳೂರು, ಜಯದೇವ ಹೃದ್ರೋಗ ಬೆಂಗಳೂರು ಮತ್ತು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ ಬಾಲಗಂಗಾಧರನಾಥ ನಗರ, ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆ ಇವರ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ದಿನಾಂಕ 10 ಏಪ್ರಿಲ್ 2022 ರ ಭಾನುವಾರದಂದು (ನಾಳೆ) ಚಿಕ್ಕಮಗಳೂರಿನ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಆಯೋಜನೆಗೊಂಡಿದೆ.
ಈ ಶಿಬಿರವು ಭಾನುವಾರ ಬೆಳಿಗ್ಗೆ 9-00 ರಿಂದ ಸಂಜೆ 4-00 ಗಂಟೆವರೆಗೆ ನಡೆಯಲಿದ್ದು, ಈ ಶಿಬಿರದಲ್ಲಿ 600ಕ್ಕೂ ಹೆಚ್ಚು ನುರಿತ ವೈದ್ಯರು ಲಭ್ಯವಿದ್ದು ರೋಗಿಗಳ ವಿವಿಧ ಬಗೆಯ ಕಾಯಿಲೆಗಳನ್ನು ತಪಾಸಣೆ ಮಾಡಿ ಸೂಕ್ತವಾದ ಚಿಕಿತ್ಸೆನೀಡುತ್ತಾರೆ.
ಈ ಆರೋಗ್ಯ ಶಿಬಿರದಲ್ಲಿ ಮುಖ್ಯವಾಗಿ ಈ ಕೆಳಗಿನ ಸಮಸ್ಯೆಗಳಿಗೆ ಹೆಚ್ಚಿನ ಆದ್ಯತೆ ನೀಡಿ ಪರಿಹಾರ ಕಂಡು ಕೊಡಲಾಗುವುದು :
ಹೃದ್ರೋಗ, ವೈದ್ಯಕೀಯ ಚಿಕಿತ್ಸಾ, ಕಿವಿ, ಮೂಗು, ಗಂಟಲು ಸಂಬಂಧಿತ ತೊಂದರೆಗಳು, ನರರೋಗ,ಶಸ್ತ್ರ ಚಿಕಿತ್ಸೆ, ಮಕ್ಕಳ ಚಿಕಿತ್ಸೆ, ಮೂತ್ರ ಪಿಂಡ, ಗರ್ಭಿಣಿ ಮತ್ತು ಸ್ತ್ರಿ ರೋಗ, ಕಣ್ಣಿನ ಪರೀಕ್ಷೆ, ಮಧುಮೇಹ, ಕೀಲು ಮೂಳೆ, ಚರ್ಮರೋಗ, ಪಿತ್ತ ಜನಕಾಂಗ, ದಂತ ವೈದ್ಯ, ಮಾನಸಿಕ ರೋಗ, ಕ್ಯಾನ್ಸರ್ ತಪಾಸಣೆ, ಪ್ಲಾಸ್ಟಿಕ್ ಸರ್ಜರಿ,ಸಮುದಾಯ ಆರೋಗ್ಯ ವಿಭಾಗ ಸೇರಿದಂತೆ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಉಚಿತ ವೈದ್ಯಕೀಯ ತಪಾಸಣೆಗಳನ್ನು ನಡೆಸಿ ತಜ್ಞ ವೈದ್ಯರಿಂದ ಚಿಕಿತ್ಸೆಯನ್ನು ನೀಡಿ ಅಗತ್ಯವಿದ್ದಲ್ಲಿ ಬೇರೆ ಆಸ್ಪತ್ರೆಗಳಿಗೆ ತೆರಳಲು ಗುರುತಿನ ಚೀಟಿಯನ್ನು ನೀಡಿ ಆಸ್ಪತ್ರೆ ವಾಹನದ ಮೂಲಕ ಕರೆತಂದು ಹೆಚ್ಚಿನ ಚಿಕಿತ್ಸೆ ನೀಡಿ ಪುನಃ ವಾಪಸ್ಸು ಅವರ ಸ್ಥಳಗಳಿಗೆ ಮರುಳಿಸಲಾಗುವುದು ಎಂದು ಈ ಆರೋಗ್ಯ ತಪಾಸಣಾ ಶಿಬಿರದ ಸಂಘಟಕರು ತಿಳಿಸಿದ್ದಾರೆ.
ಸ್ತ್ರೀ ಸಂಬಂಧಿತ ರೋಗಗಳಾದ ಬಿಳಿಸೆರಗು, ಬಂಜೆತನ, ಗರ್ಭಕೋಶದ ತೊಂದರೆ ಇನ್ನಿತರ ಸ್ತ್ರೀ -ರೋಗಗಳಿಗೆ ನುರಿತ ವೈದ್ಯರಿಂದ ಚಿಕಿತ್ಸೆ ಲಭ್ಯವಿದ್ದು ಆರೋಗ್ಯ ಸಂಬಂಧಿತ ಸಮಸ್ಯೆ ಹೊಂದಿರುವವರು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದ್ದಾರೆ.
ಶಿಬಿರದಲ್ಲಿ ಉಚಿತವಾಗಿ ಇಕೋ, ಇ. ಸಿ. ಜಿ, ಅಲ್ಟ್ರಾಸೌಂಡ್, ಮ್ಯಾಮೋಗ್ರಫಿ, ರಕ್ತ ಮತ್ತು ಮೂತ್ರ ಪರೀಕ್ಷೆ ಮಾಡಿ ಉಚಿತ ಔಷಧಿಯ ವ್ಯವಸ್ಥೆಯಿದ್ದು, ರಕ್ತದಾನ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕೆಂದು ಜನರನ್ನು ಕೋರಿದ್ದಾರೆ.
ಶಿಬಿರದಲ್ಲಿ ಭಾಗವಹಿಸಲು ಆರೋಗ್ಯ ಕಾರ್ಯಕರ್ತರಲ್ಲಿ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿಗಳಲ್ಲಿ ಮೊದಲೇ ನೋಂದಾಯಿಸಿ ಸಮಯಕ್ಕೆ ಸರಿಯಾಗಿ ಬಂದು ಔಷಧ ಪಡೆಯುವಂತೆ ಸಂಘಕರು ಮನವಿ ಮಾಡಿದ್ದಾರೆ. ಅರ್ಹರು ಈ ಆರೋಗ್ಯ ಶಿಬಿರದ ಪ್ರಯೋಜನವನ್ನು ಪಡೆದುಕೊಂಡು ಔಷಧಿ ಪಡೆದು ರೋಗದಿಂದ ಗುಣಮುಕ್ತರಾಗುವಂತೆ ಶಾಸಕರಾದ ಸಿ.ಟಿ ರವಿ ಅವರು ಚಿಕ್ಕಮಗಳೂರಿನ ಜನತೆಯನ್ನು ಕೋರಿದ್ದಾರೆ.

.jpeg)

.jpeg)

0 Comments