ಕೊಟ್ಟಿಗೆಹಾರ: (ನ್ಯೂಸ್ ಮಲ್ನಾಡ್ ವರದಿ) ‘ಜಿ’ ಸೀರೀಸ್ ಹೊಂದಿರುವ ಸರ್ಕಾರದ ವಾಹನಗಳನ್ನು ಹೊರತುಪಡಿಸಿ ಬೇರೆ ಯಾವುದೇ ವಾಹನಗಳಿಗೂ ನೇಮ್ ಬೋರ್ಡ್ ಹಾಕಿಕೊಳ್ಳುವಂತಿಲ್ಲ ಎಂದು ಹೈಕೋರ್ಟ್ ಆದೇಶವಿದ್ಧರೂ ಈ ರೀತಿ ನೇಮ್ ಬೋರ್ಡ್ ಹಾಕಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಆದರೆ ಇಲ್ಲೋರ್ವ ಗ್ರಾಮ ಪಂಚಾಯಿತಿ ಅಧ್ಯಕ್ಷರು ನೇಮ್ ಬೋರ್ಡ್ ಗೆ ಸರ್ಕಾರದ ಅಧಿಕೃತ ಲಾಂಛನವನ್ನೂ ಬಳಸಿರುವುದು ಈಗ ಕ್ಯಾಮರಾ ಕಣ್ಣಿಗೆ ಬಿದ್ದಿದೆ.
ಇದನ್ನೂ ಓದಿ : ಕೊಪ್ಪ : ಮಧ್ಯರಾತ್ರಿ ಮನೆಯಿಂದ ನಾಪತ್ತೆಯಾದ 23 ವರ್ಷ ಪ್ರಾಯದ ವಿವಾಹಿತೆ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಇಂದು ಬೆಳಗ್ಗೆ ಇನ್ನೋವಾ ಕಾರ್ ಒಂದು ಕಾಣಿಸಿಕೊಂಡಿದ್ದು, ಸರ್ಕಾರದ ಲೋಗೋ ಬಳಸಿದ ಅಧ್ಯಕ್ಷರು ಪ್ರವಾಸಕ್ಕೆಂದು ಸ್ನೇಹಿತರ ಜೊತೆ ಬಂದಿದ್ದಾರೆ. ಹುಣಸೂರು ತಾಲೂಕಿನ ಹಳೇಬೀಡು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಹೆಚ್ ಆರ್ ಮಹೇಶ್ ಅವರು ತಮ್ಮ ಸ್ವಂತ ಕಾರ್ (KA-09-MF-8976) ಗೆ ‘ಗ್ರಾಮ ಪಂಚಾಯಿತಿ ಅಧ್ಯಕ್ಷರು - ಹಳೇಬೀಡು, ಹುಣಸೂರು ತಾಲೂಕು’ ಎಂದು ಸರ್ಕಾರದ ಅಧಿಕೃತ ಲೋಗೋ ಜೊತೆಗೆ ಬರೆಸಿಕೊಂಡಿದ್ದಾರೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಾಹನಗಳನ್ನು ಹೊರತುಪಡಿಸಿ ಬೇರಾವುದೇ ವಾಹನಗಳಿಗೂ ಈ ರೀತಿಯ ಸರ್ಕಾರದ ಚಿಹ್ನೆಗಳನ್ನು ಬಳಸುವಂತಿಲ್ಲ. ಆದರೆ ಈ ರೀತಿ ತಾನು ಆ ಗ್ರಾಮ ಪಂಚಾಯಿತಿ ಅಧ್ಯಕ್ಷ, ಈ ಬೀದಿಯ ಉಪಾಧ್ಯಕ್ಷ ಎಂದು ಬೋರ್ಡ್ ಹಾಕಿಕೊಂಡು ಸ್ನೇಹಿತರ ಜೊತೆಯಲ್ಲಿ ರೆಸಾರ್ಟ್, ಹೋಂ ಸ್ಟೇಗಳಲ್ಲಿ ತಮ್ಮ ಖಾಸಗಿ ಜೀವನ ಎಂಜಾಯ್ ಮಾಡುತ್ತಿರುವ ಇಂತವರ ವಿರುದ್ಧ ಸಂಬಂಧ ಪಟ್ಟ ಇಲಾಖೆ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ಹೈಕೋರ್ಟ್ ಆದೇಶವೇನು?
ಜಿ’ ಅಕ್ಷರದೊಂದಿಗೆ ವಿಶೇಷವಾಗಿ (ಗವರ್ನ್‌ಮೆಂಟ್) ನೋಂದಣಿ ಮಾಡಿದ ಸರ್ಕಾರದ ವಾಹನಗಳು ಹೊರತುಪಡಿಸಿ, ಸರ್ಕಾರದ ಅಧೀನ ಸಂಸ್ಥೆಗಳು/ಏಜೆನ್ಸಿಗಳು ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ), ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮತ್ತು ಕರ್ನಾಟಕ ವಸತಿ ಮಂಡಳಿ(ಕೆಎಚ್‌ಬಿ), ಕರ್ನಾಟಕ ರಾಜ್ಯ ಹಣಕಾಸು ನಿಗಮ(ಕೆಎಫ್‌ಎಸ್‌ಸಿ), ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್(ಎಂಎಸ್‌ಐಎಲ್), ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ(ಕೆಪಿಟಿಸಿಎಲ್), ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತ (ಬೆಸ್ಕಾಂ) ದಂತಹ ಶಾಸನಬದ್ಧ ಸಂಸ್ಥೆಗಳ ವಾಹನಗಳ ನಂಬರ್ ಪ್ಲೇಟ್ ಮೇಲೆ ರಾಜ್ಯ ಸರ್ಕಾರದ ಲಾಂಛನ, ಹುದ್ದೆ ಮತ್ತು ಕರ್ನಾಟಕ ಸರ್ಕಾರ ಅಥವಾ ಗವರ್ನ್‌ಮೆಂಟ್ ಆಫ್ ಕರ್ನಾಟಕ ಎಂಬ ಪದ ಬಳಕೆ ಮಾಡಬಾರದು ಎಂದು ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ತನು ಕೊಟ್ಟಿಗೆಹಾರ, ವರದಿಗಾರರು
.jpeg)

.jpeg)
.jpeg)

0 Comments