ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಸಚಿನ್ ಕುಂಚೂರು ಮತ್ತು ಸುನಿಲ್ ನಾರ್ವೆ ಅವರ ಸ್ಮರಣಾರ್ಥವಾಗಿ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟ ಇಂದು ನಾರ್ವೆಯಲ್ಲಿ ನಡೆಯಿತು. 

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ನಾರ್ವೆಯಲ್ಲಿ ಕಳೆದ ಕೆಲ ತಿಂಗಳ ಹಿಂದೆ ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಸಚಿನ್ ಕುಂಚೂರು ಅವರ ಸ್ಮರಣಾರ್ಥ ಹಾಗೂ ಸುನಿಲ್ ನಾರ್ವೆ ಇವರ ನೆನಪಿಗಾಗಿ ಅನೂಪ್ ಕುಮಾರ್ ನಾರ್ವೆ ಸಾರಥ್ಯದಲ್ಲಿ ರಾಜ್ಯ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ನಡೆಯಿತು.

ಅಭ್ಯರ್ಥಿಗಳು ಈ ಕೆಳಕಂಡ ಲಿಂಕ್ ಮೂಲಕ ಉದ್ಯೋಗ ಮೇಳಕ್ಕೆ ರಿಜಿಸ್ಟರ್ ಆಗಬಹುದು :

https://forms.gle/PvypXpJerzDzsrfE9

ಈ ಪಂದ್ಯಾವಳಿಯ ಉದ್ಘಾಟನೆಯನ್ನು ಮಾಜಿ ಶಾಸಕರು ಹಾಗೂ ಹಾಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾದ ಡಿ.ಎನ್ ಜೀವರಾಜ್ ಉದ್ಘಾಟಿಸಿದರು. ನಂತರ ರಾಜ್ಯ ಸರ್ಕಾರ ನೀಡುವ ಸಹಕಾರ ರತ್ನ ಪ್ರಶಸ್ತಿ ಪಡೆದ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಸ್.ಎನ್ ರಾಮಸ್ವಾಮಿ ಅವರನ್ನು ಈ ವೇದಿಕೆಯಲ್ಲಿ ಸನ್ಮಾನಿಸಲಾಯಿತು. 

ನಂತರ ನಡೆದ ಪಂದ್ಯಾಟದಲ್ಲಿ ಪ್ರಿಯಾಂಕ್ ಫ್ರೆಂಡ್ಸ್‌ ಪ್ರಥಮ ಸ್ಥಾನದೊಂದಿಗೆ 25 ಸಾವಿರ ನಗದನ್ನು ತನ್ನದಾಗಿಸಿಕೊಂಡಿತು. ದ್ವೀತಿಯ ಸ್ಥಾನವನ್ನು ಸಾನಿಧ್ಯಾ ಫ್ರೆಂಡ್ಸ್ ,ತೃತೀಯ ಸ್ಥಾನವನ್ನು ಮಾಗುಂಡಿ ,ಚತುರ್ಥ ಸ್ಥಾನವನ್ನು ಸಂಚಲನ ನ್ಯೂಸ್ ತಂಡವು ಪಡೆಯಿತು.

ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಸತೀಶ್ ಅದ್ದಡ ,ಪುಣ್ಯಪಾಲ್ ,ಅನಿಲ್ ನಾರ್ವೆ ,ಅಜಿತ್ ಬಿಕ್ಕಳಿ ಹಾಗೂ ಗೆಳೆಯರ ಬಳಗದ ಎಲ್ಲಾ ಸದಸ್ಯರು, ಸ್ಥಳೀಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.