ಭದ್ರಾವತಿ : (ನ್ಯೂಸ್ ಮಲ್ನಾಡ್ ವರದಿ) ಬೈಕ್ ಅಪಘಾತದಲ್ಲಿ ವ್ಯಕ್ತಿಯೋರ್ವರು ದಾರುಣವಾಗಿ ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು ಜಾತ್ರೆಗೆಂದು ತಂಗಿಯ ಮನೆಗೆ ಹೋಗಿ ಬರುತ್ತಿದ್ದ ಅಣ್ಣ ಬೈಕ್ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ.
ದಿಗ್ಗೇನ ಹಳ್ಳಿಯಲ್ಲಿರುವ ಅವರ ತಂಗಿಯ ಮನೆಗೆ ಜಾತ್ರೆಗೆಂದು ತೆರಳಿದ್ದ ಮಹೇಶ್ ತಂಗಿಗೆ ಮಡಿಲಕ್ಕಿ ನೀಡಿ, ಜಾತ್ರೆಯನ್ನು ಮುಗಿಸಿಕೊಂಡು ವಾಪಸ್ ಬರುವ ಸಂದರ್ಭದಲ್ಲಿ ಆನವೇರಿ ಸಮೀಪ ಬೈಕಿನಿಂದ ಬಿದ್ದು ಮೃತಪಟ್ಟಿದ್ದಾರೆ. ಮೃತರನ್ನು ಕನಸಿನಕಟ್ಟೆ ನಿವಾಸಿ ಮಹೇಶ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ : ತಿಮಿಂಗಿಲ ಮೀನಿನ ವಾಂತಿ ಸಾಗಾಟ ನಡೆಸುತ್ತಿದ್ದ ಆರೋಪಿಗಳು ಪೊಲೀಸರ ಬಲೆಗೆ ; 50 ಲಕ್ಷ ಮೌಲ್ಯದ ತಿಮಿಂಗಿಲ ವಾಂತಿ ವಶಕ್ಕೆ
ಕೆಲಸದ ನಿಮಿತ್ತ ತುರ್ತಾಗಿ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ, ಅಣ್ಣನನ್ನು ಕಳೆದುಕೊಂಡ ತಂಗಿ, ಆತನ ಕುಟುಂಬವರ್ಗ ಗೆಳೆಯರು ಹಾಗೂ ಪರಿವಾರದವರು ಈ ಕುರಿತು ಬೇಸರ ವ್ಯಕ್ತಪಡಿಸಿದ್ದು ಸ್ಥಳೀಯರು ಕುಟುಂಬವರ್ಗದವರಿಗೆ ಸಾಂತ್ವಾನ ಹೇಳಿ ಧೈರ್ಯ ತುಂಬುತ್ತಿದ್ದಾರೆ.

.jpeg)
.jpeg)

0 Comments