ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದಿಂದ ಚಿನ್ನದ ಪದಕವನ್ನು ಪಡೆಯುವ ಮೂಲಕ ವಿದ್ಯಾಧಿದೇವತೆ ಶೃಂಗೇರಿಯ ನೆಲೆವೀಡಿಗೆ ಇನ್ನೊಂದು ಗರಿಮೆಯನ್ನು ತಂದುಕೊಟ್ಟಿದ್ದಾರೆ ಶೃಂಗೇರಿಯ ನಿವಾಸಿ ಮೇಘರಾಜ್.
ಇದನ್ನೂ ಓದಿ : ಅತಿಯಾದ ಪರಿಸರ ಮಾಲಿನ್ಯ, ತುಂಗಾ ನದಿ ನೀರು ಕುಡಿಯಲು ಯೋಗ್ಯವಲ್ಲ !
ಮೈಸೂರು ಮುಕ್ತ ವಿಶ್ವವಿದ್ಯಾನಿಲಯ ಮುಕ್ತ ಗಂಗೋತ್ರಿಯು ಶೃಂಗೇರಿ ನಿವಾಸಿ ಮೇಘಾನಂದ್ ಅವರಿಗೆ ಈ ಬಾರಿಯ 17 ನೆ ವಾರ್ಷಿಕ ಘಟಿಕೋತ್ಸವದಂದು ಚಿನ್ನದ ಪದಕವನ್ನು ನೀಡಿ ಗೌರವಿಸಿದೆ. BLibee Science (Bachelor of Librarian Information Science ) ಈ ವಿಭಾಗದಲ್ಲಿ ಚಿನ್ನದ ಪದಕವನ್ನು ಪಡೆದುಕೊಳ್ಳುವ ಮೂಲಕ ಮಲೆನಾಡಿನ ಅದರಲ್ಲೂ ವಿಶೇಷವಾಗಿ ಶಾರದೆಯ ನೆಲೆವೀಡು ಶೃಂಗೇರಿಯ ಹೆಸರನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ.
ಅಭ್ಯರ್ಥಿಗಳು ಈ ಕೆಳಕಂಡ ಲಿಂಕ್ ಮೂಲಕ ರಿಜಿಸ್ಟರ್ ಆಗಬಹುದು
https://forms.gle/PvypXpJerzDzsrfE9
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದ ಹನುಮಂತನಗರ ನಿವಾಸಿ ಮೇಘಾನಂದ ಅವರು ಪ್ರಸ್ತುತ ಶೃಂಗೇರಿಯ ಜೆಸಿಬಿಎಂ ಕಾಲೇಜಿನಲ್ಲಿ ಹೆಡ್ ಲೈಬ್ರರಿಯನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶೃಂಗೇರಿಯ ಮೆಣಸೆ ಸರ್ಕಾರಿ ಕಾಲೇಜಿನಲ್ಲಿ ಬಿ.ಕಾಂ ಪದವಿಯನ್ನು ಪಡೆದು, ನಂತರದಲ್ಲಿ ಕುವೆಂಪು ಯೂನಿವರ್ಸಿಟಿಯಲ್ಲಿ ವಿದ್ಯಾಭ್ಯಾಸ ಮುಂದುವರೆಸಿ ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ Phd ಅಧ್ಯಯನ ನಡೆಸುತ್ತಿದ್ದಾರೆ. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ 200 ಕ್ಕೂ ಅಧಿಕ ಕಾನ್ಫರೆನ್ಸ್ ಗಳಲ್ಲಿ ಭಾಗಿಯಾಗಿ ಸರ್ಟಿಫಿಕೇಟ್ ಗಳನ್ನೂ ಸಹ ಮೇಘಾನಂದ ಸಿ ಅವರು ಪಡೆದಿದ್ದಾರೆ.
ಬಾಲ್ಯದಿಂದಲೂ ಕೂಡ ನನಗೆ ಓದಿನಲ್ಲಿ ಹೆಚ್ಚಿನ ಆಸಕ್ತಿಯಿತ್ತು, ಈ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಮಹದಾಸೆಯಿತ್ತು, ಶ್ರದ್ಧೆ ಹಾಗೂ ಪರಿಶ್ರಮದಿಂದ ಆಸಕ್ತಿಯಿಟ್ಟು ವಿದ್ಯಾಭ್ಯಾಸ ನಡೆಸಿದ್ದೇನೆ ಅದರ ಪ್ರತಿಫಲನನಗಿಂದು ದೊರಕಿದೆ. ನನ್ನ ಪೋಷಕರು ಸಹೋದರ ಸಹೋದರಿಯರು ಹಾಗೂ ಗ್ರಾಮಸ್ಥರು ಈ ಸಾಧನೆಗೆ ಹೆಚ್ಚಿನ ಸಹಕಾರ ನೀಡಿದ್ದಾರೆ ಅವರೆಲ್ಲರ ಆಶೀರ್ವಾದದಿಂದ ಈ ಸಾಧನೆ ಸಾಧ್ಯವಾಗಿದೆ - ಮೇಘಾನಂದ ಸಿ, ಚಿನ್ನದ ಪದಕ ಪುರಸ್ಕೃತ
ಈ ಹಿಂದೆ ಆಳ್ವಾಸ್ ಹಾಗೂ ಎಕ್ಸ್ಪರ್ಟ್ ಕಾಲೇಜಿನ ಲೈಬ್ರರಿಗಳಲ್ಲಿ ಲೈಬ್ರರಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮೇಘಾನಂದ ಅವರು ಪ್ರಸ್ತುತ ತಮ್ಮ ಊರಿನಲ್ಲೇ ಲೈಬ್ರರಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶೃಂಗೇರಿಯಲ್ಲಿ ಸಂಭ್ರಮಾಚರಣೆ :
ಮೇಘಾನಂದ ಅವರು ಚಿನ್ನದ ಪದಕವನ್ನುಗಳಿಸಿದ ಸಲುವಾಗಿ ಅವರ ಸ್ನೇಹಿತರು ಆತ್ಮೀಯರು ಹಾಗೂ ಹಿತೈಷಿಗಳು ಸೇರಿ ಶೃಂಗೇರಿಯ ಸ್ವಾಗತ ಮಂಟಪದಿಂದ ಹನುಮಂತ ನಗರದಲ್ಲಿರುವ ಅವರ ಮನೆಯವರೆಗೆ ಬೈಕ್ ರ್ಯಾಲಿ ನಡೆಸಿದ್ದಾರೆ. ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ್ದಾರೆ. ಸ್ಥಳೀಯರು, ಹಿರಿಯರು ಅವರನ್ನು ಆಶೀರ್ವದಿಸಿ ಇನ್ನೂ ಹೆಚ್ಚಿನ ಸಾಧನೆ ಮಾಡುವಂತೆ ಹಾರೈಸಿದ್ದಾರೆ.
ಚಿನ್ನದ ಪದಕವನ್ನು ಪಡೆಯುವ ಮೂಲಕ ಮಲೆನಾಡಿನ ಕೀರ್ತಿಯನ್ನು ಇನ್ನಷ್ಟು ಹೆಚ್ಚಾಗುವಂತೆ ಮಾಡಿದ ಶ್ರೇಯಸ್ಸು ಮೇಘಾನಂದ ಅವರಿಗೆ ಸಲ್ಲುತ್ತದೆ. ಈ ರೀತಿಯ ಸಾಧನೆಗಳನ್ನು ಮಾಡುತ್ತಾ ಇನ್ನಷ್ಟು ಜನರಿಗೆ ಅವರು ಮಾದರಿಯಾಗಲಿ ಎಂದು ಹಾರೈಸೋಣ.





0 Comments