ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಮೂರು ವರ್ಷಗಳಿಂದ ನಿರಂತರವಾಗಿ ಪರಿಹಾರಕ್ಕಾಗಿ ಅಲೆದು ಅಲೆದು ಸಾಕಾಗಿರುವ ಮಲೆಮನೆ ಗ್ರಾಮದ ವಾಸಿಗಳು ಇದೀಗ ಸಾಮೂಹಿಕ ಆತ್ಮಹತ್ಯೆಯ ನಿರ್ಧಾರ ಕೈಗೊಂಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಲೆಮನೆ ಗ್ರಾಮದ ಸುತ್ತಮುತ್ತ 2019 ನೆ ಇಸವಿಯ ಆಗಸ್ಟ್ ತಿಂಗಳಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ 5 ಮನೆಗಳು ಸಂಪೂರ್ಣ ಕೊಚ್ಚಿ ಹೋಗಿದ್ದವು ಹಾಗೂ ಆ ಜನರ ಬದುಕಿನ ಆಧಾರವಾಗಿದ್ದ ತೋಟ ಗದ್ದೆಗಳು ನಾಶವಾಗಿದ್ದವು. ಆ ಸಂದರ್ಭದಲ್ಲಿ ಕರ್ನಾಟಕದ ಅಂದಿನ ಮುಖ್ಯಮಂತ್ರಿಗಳಾಗಿದ್ದ ಬಿಎಸ್ ಯಡಿಯೂರಪ್ಪ ಅವರು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಿ ಅವರ ಸಮಸ್ಯೆಗಳಿಗೆ ತಕ್ಷಣ ಪರಿಹಾರ ನೀಡುವ ಭರವಸೆ ಕೊಟ್ಟಿದ್ದರು. ಆದರೆ ಆ ಭರವಸೆಯ ಕೇವಲ ಭರವಸೆಯಾಗಿಯೇ ಉಳಿದಿದೆ ಜನರು ಅಂದಿನಿಂದ ಸ್ವತಂತ್ರವಾಗಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ ನಮಗೆ ಬದುಕಲು ಆಗುತ್ತಿಲ್ಲ ಆದಕಾರಣ ಸಾಮೂಹಿಕವಾಗಿ ಮಲೆಮನೆ ಗ್ರಾಮದ ಐದು ಸಂತ್ರಸ್ತ ಕುಟುಂಬಗಳು ಆತ್ಮಹತ್ಯೆ ಮಾಡಿಕೊಳ್ಳಲು ಅನುಮತಿ ಕೊಡಬೇಕೆಂದು ರಾಷ್ಟ್ರಪತಿಗಳನ್ನು ಕೋರಿದ್ದಾರೆ.
ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಈ ಕುರಿತು ಗಮನ ಹರಿಸಿ ಅಧಿಕಾರಿಗಳಲ್ಲಿ ತಮ್ಮ ಸಮಸ್ಯೆಯನ್ನು ಬಗೆಹರಿಸುವಂತೆ ಸೂಕ್ತ ಪರಿಹಾರಕ್ಕಾಗಿ ಕೋರಿ ಕಚೇರಿಯಿಂದ ಕಚೇರಿಗೆ ಅಲೆದರೂ ಕೂಡ ಯಾವುದೇ ಪ್ರಯೋಜನಗಳಾಗಿಲ್ಲ. ನಮಗೆ ದೊರೆಯಬೇಕಾದ ಯಾವುದೇ ಪರಿಹಾರ ಇದುವರೆಗೂ ದೊರೆತಿಲ್ಲ ಎಲ್ಲಾ ಜನಪ್ರತಿನಿಧಿಗಳು ಕೇವಲ ಆಶ್ವಾಸನೆ ನೀಡುತ್ತಾರೆ ಹೊರತು ನಮ್ಮಲ್ಲಿ ಯಾರಿಗೂ ಕೂಡ ಪರಿಹಾರ ಲಭಿಸಿಲ್ಲ ಆದಕಾರಣ ಆತ್ಮಹತ್ಯೆಯೇ ನಮಗೆ ಕೊನೆಯ ದಾರಿಯೆಂದು ಸಂತ್ರಸ್ತರು ಬೇಸರದಿಂದ ತಿಳಿಸಿದ್ದಾರೆ.
ಅಭ್ಯರ್ಥಿಗಳು ಈ ಕೆಳಕಂಡ ಲಿಂಕ್ ಮೂಲಕ ರಿಜಿಸ್ಟರ್ ಆಗಬಹುದು
https://forms.gle/PvypXpJerzDzsrfE9
ಪರ್ಯಾಯವಾಗಿ ನಮ್ಮೆಲ್ಲರಿಗೂ ಬೇರೆ ವ್ಯವಸ್ಥೆ ಮಾಡಿ ಬದುಕಲು ಸೂಕ್ತ ಸೌಲಭ್ಯ ನೀಡುವುದಾಗಿ ತಿಳಿಸಿದ್ದ ಅಂದಿನ ಮುಖ್ಯಮಂತ್ರಿಗಳ ಮಾತು ಇಂದಿಗೂ ಹುಸಿಯಾಗಿರುವುದು ಅತ್ಯಂತ ಬೇಸರದ ವಿಷಯವಾಗಿದೆ ಎಂದು ಸಂತ್ರಸ್ತರು ತಿಳಿಸಿದ್ದಾರೆ ಹಾಗೂ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಸಮಸ್ಯೆಗಳನ್ನು ಎದುರಿಸುತ್ತಿದ್ದು ಬದುಕಲು ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಂತ್ರಸ್ತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಈ ಕುರಿತು ಸರ್ಕಾರವನ್ನು ಆಗ್ರಹಿಸಿರುವ ಅವರು ಮಲೆಮನೆ ಗ್ರಾಮದ ಸಂತ್ರಸ್ತ ಕುಟುಂಬದ ಸದಸ್ಯರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನಿಶ್ಚಯಿಸಿದ್ದು ಇದಕ್ಕೆ ರಾಷ್ಟ್ರಪತಿಗಳು ಒಪ್ಪಿಗೆ ನೀಡಬೇಕು. ಸಾಧ್ಯವಾದರೆ ಸೂಕ್ತ ಪರಿಹಾರ ನೀಡಲು ಪ್ರಯತ್ನಿಸಿ ಇಲ್ಲದಿದ್ದಲ್ಲಿ ನಮಗೆ ಸಾವೇ ಗತಿ ಎಂದು ಪತ್ರ ಮುಖೇನ ಕೋರಿದ್ದಾರೆ.





0 Comments