ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಕೊಪ್ಪ ತಾಲೂಕಿನ ವಿನಾಯಕಪುರ - ಬಿಲಗದ್ದೆ, ಶ್ರೀ ಯಕ್ಷಗಾನ ಕಲಾಭಿಮಾನಿ ಬಳಗದಿಂದ ಶ್ರೀ ಕೃಪಾಪೋಷಿತ ಯಕ್ಷಗಾನ ಮಂಡಳಿ ಹಟ್ಟಿಯಂಗಡಿ ಮೇಳದವರಿಂದ ದೀಪ ದರ್ಪಣ ಎಂಬ ಪ್ರಸಂಗವನ್ನು ಯಕ್ಷಗಾನ-ಬಯಲಾಟ ನಡೆಯಲಿದೆ.

ಇದನ್ನೂ ಓದಿ : ಶೃಂಗೇರಿ : ಪ್ರಥಮ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿ ನಾಪತ್ತೆ

ಗಂಡುಮೆಟ್ಟಿದ ಕಲೆಯಾದ ಯಕ್ಷಗಾನಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಹಾಗೂ ಸಮಾಜವನ್ನು ಒಗ್ಗೂಡಿಸುವ ದೃಷ್ಟಿಯಿಂದ ಈ ಯಕ್ಷಗಾನದ ಆಯೋಜನೆ ಮಾಡಿರುವುದಾಗಿ ಸಂಘಟಕರು ತಿಳಿಸಿದ್ದಾರೆ. ನಾಳೆ ದಿನಾಂಕ 30.04.2022ರ ಶನಿವಾರದಂದು ವಿನಾಯಕಪುರದಲ್ಲಿ ವಿದ್ಯುದ್ದೀಪಾಲಂಕೃತ ಗೊಂಡಿರುವ ಭವ್ಯ ರಂಗಮಂಟಪದಲ್ಲಿ ಶ್ರೀ ಕೃಪಾಪೋಷಿತ ಯಕ್ಷಗಾನ ಮಂಡಳಿ ಹಟ್ಟಿಯಂಗಡಿ ಇವರ ‘ದೀಪ ದರ್ಪಣ’ ಎಂಬ ಕಥಾಭಾಗವನ್ನು ಬಯಲಾಟ ನಡೆಯಲಿದೆ.

ಅಭ್ಯರ್ಥಿಗಳು ಈ ಕೆಳಕಂಡ ಲಿಂಕ್ ಮೂಲಕ ರಿಜಿಸ್ಟರ್ ಆಗಬಹುದು : https://forms.gle/PvypXpJerzDzsrfE9

ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು, ಕಲೆಗಾರರನ್ನು ಗೌರವಿಸುವುದು, ಊರನ್ನು ಸ್ವಚ್ಛ ಹಾಗೂ ಸುಂದರವಾಗಿಡುವುದು, ಭಕ್ತಿ ಭಾವಗಳಿಂದ ಅದ್ಧೂರಿಯಾಗಿ ನಡೆಯುವ ಗಣಪತಿಯ  ಮೆರವಣಿಗೆಯ ಮೂಲಕ ಧಾರ್ಮಿಕ ನಂಬಿಕೆಗಳನ್ನು ಎತ್ತಿ ಹಿಡಿಯುವುದು, ಗಣ್ಯರನ್ನು ಸನ್ಮಾನಿಸುವುದು ಸೇರಿದಂತೆ ಅನೇಕ ಆಶಯಗಳನ್ನು ಹೊಂದಿದ್ದು ಸರ್ವರೂ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಆಸ್ಪದ ನೀಡಬೇಕೆಂದು ಕೋರಿದ್ದಾರೆ. 

ಆಯೋಜನೆಗೊಂಡಿರುವ ಯಕ್ಷಗಾನವು ಮುಖ್ಯವಾಗಿ ಸಮಾಜದ ಎಲ್ಲಾ ವರ್ಗದ ಜನರನ್ನು ಒಗ್ಗೂಡಿಸುವ ಸಲುವಾಗಿ ಗ್ರಾಮಸ್ಥರು ಹಾಗೂ ಯಕ್ಷಗಾನ ಕಲಾಭಿಮಾನಿಗಳು ಆಯೋಜನೆ ಮಾಡಿದ್ದು ರಾತ್ರಿ 09.30ಕ್ಕೆ ಆರಂಭಗೊಳ್ಳುವ ಈ ಯಕ್ಷಗಾನದಲ್ಲಿ ಸರ್ವರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ತಿಳಿಸಿದ್ದಾರೆ.