ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಜೋರಾದ ಗಾಳಿ ಮಳೆಗೆ ಮನೆಯ ಮೇಲೆ ಮರ ಬಿದ್ದು ಮನೆ ಭಾಗಶಃ ಹಾನಿಗೀಡಾದ ಘಟನೆ ಶೃಂಗೇರಿಯಲ್ಲಿ ಸಂಭವಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮೆಣಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂಚೇಬೈಲು ಸಮೀಪದ ಗಿಣಿಕಲ್ ಊರು ಗದ್ದೆಮನೆ ಯಶೋಧಾ ಎಂಬುವವರ ಮನೆಯ ಮೇಲೆ ಸುರಿದಗಾಳಿ ಮಳೆಗೆ ಮರ ಬಿದ್ದು ಮನೆ ಹಾಗೂ ಸಾಕಷ್ಟು ವಸ್ತುಗಳು ಹಾನಿಗೀಡಾಗಿದೆ.
ಇದನ್ನೂ ಓದಿ : ಜಯಪುರ : ಭೀಕರ ರಸ್ತೆ ಅಪಘಾತ ; ಓರ್ವ ಮಹಿಳೆ ಸಾವು ಇನ್ನೋರ್ವ ವ್ಯಕ್ತಿಯ ಸ್ಥಿತಿ ಗಂಭೀರ
ಮಳೆಗೆ ಮನೆ ಕಳೆದುಕೊಂಡು ನಲುಗಿರುವ ಕುಟುಂಬಸ್ಥರು ಸರ್ಕಾರದ ಪರಿಹಾರಕ್ಕಾಗಿ ಕೋರಿದ್ದಾರೆ. ಮನೆಯ ನೀರಿನ ಸಿಂಟೆಕ್ಸ್, ಮನೆಯ ಹಂಚಿನ ಮಾಡು, ಕೊಟ್ಟಿಗೆ ಸೇರಿದಂತೆ ಬಹುತೇಕ ಮನೆಯ ಎಲ್ಲಾ ಕೊಠಡಿಗಳು ಹಾನಿಯಾಗಿದ್ದು ಮನೆಯಲ್ಲಿದ್ದ ವಸ್ತುಗಳು ಕೂಡ ನಾಶವಾಗಿದೆ. ಎರಡು ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ನಾಶವಾಗಿದೆ ಎಂದು ಅಂದಾಜಿಸಲಾಗಿದೆ. ಅತೀ ಶೀಘ್ರವಾಗಿ ಪರಿಹಾರ ಒದಗಿಸಬೇಕೆಂದು ಕುಟುಂಬಸ್ಥರು ಕೋರಿದ್ದಾರೆ.
ಮಲೆನಾಡು ಭಾಗದಲ್ಲಿ ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಗಾಳಿ ಮಳೆಗೆ ಅಲ್ಲಲ್ಲಿ ಕೆಲ ಅವಘಡಗಳು ಸಂಭವಿಸುತ್ತಿದೆ. ನಿನ್ನೆ ಸುರಿದ ಮಳೆಗೆ ಶೃಂಗೇರಿಯಿಂದ ಜಯಪುರ, ಬಾಳೆಹೊನ್ನೂರು, ಚಿಕ್ಕಮಗಳೂರು ಸಂಪರ್ಕಿಸುವ ರಸ್ತೆಯಾದ ಮುಂಡಗೋಡು ತಿರುವಿನಲ್ಲಿ ಕೂಡ ಬೃಹದಾಕಾರದ ಮರವೊಂದು ಉರುಳಿದ ಪರಿಣಾಮ ಒಂದು ಗಂಟೆಗೂ ಅಧಿಕ ಸಮಯ ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ನಂತರದಲ್ಲಿ ಸ್ಥಳೀಯರ ಹಾಗೂ ಸಿಬ್ಬಂದಿಗಳು ನಡೆಸಿದ ಮರ ತೆರವು ಕಾರ್ಯಾಚರಣೆಯಿಂದ ರಸ್ತೆ ಸಂಪರ್ಕ ಸಾಧ್ಯವಾಯಿತು. ಇತ್ತೀಚಿನ ದಿನಗಳಲ್ಲಿ ಸುರಿಯುತ್ತಿರುವ ಮಳೆ ಒಂದಿಲ್ಲೊಂದು ಸಮಸ್ಯೆಗಳನ್ನು ಮಲೆನಾಡಿನ ಜನರಿಗೆ ತಂದೊಡ್ಡಿದೆ.
ನರಸಿಂಹರಾಜಪುರದಲ್ಲೂ ಕೂಡ ಮಳೆಯಿಂದಾಗಿ ಸಮಸ್ಯೆಯುಂಟಾಗಿದ್ದು ಭಾರೀ ಗಾಳಿ ಮಳೆಗೆ ಮರ ಹಾಗೂ ವಿದ್ಯುತ್ ಕಂಬ ಧರೆಗುರುಳಿದೆ. ನರಸಿಂಹರಾಜಪುರ ತಾಲೂಕು ಪಂಚಾಯತ್ ಆವರಣದಲ್ಲಿನ ವಾಹನ ಶೆಡ್ ಮುಂಭಾಗದಲ್ಲಿ ತೆಂಗಿನ ಮರ ಉರುಳಿದೆ. ಗಾಳಿಯ ತೀವ್ರತೆಗೆ ಸಂತೆಯ ಅಂಗಡಿಗಳಿಗೂ ಸಮಸ್ಯೆ ಉಂಟಾಗಿದ್ದು ಅಂಗಡಿಯ ಸಾಮಾಗ್ರಿಗಳನ್ನು ಉಳಿಸಿಕೊಳ್ಳಲು ಜನರು ಸಂಕಷ್ಟ ಎದುರಿಸಿದರು.
ಎನ್.ಆರ್.ಪುರ ತಾಲೂಕಿನಾದ್ಯಂತ ಸುರಿದ ಮಳೆಯಿಂದಾಗಿ 10 ವಿದ್ಯುತ್ ಕಂಬ ಧರೆಗುರುಳಿದ್ದು ಜನರಿಗೆ ವಿದ್ಯುತ್ ಸಮಸ್ಯೆ ಎದುರಾಗಿತ್ತು.
.jpeg)
.jpeg)

0 Comments