ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಬೈಕ್ ಚಾಲನೆ ಮಾಡುತ್ತಿರುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಯುವಕನೋರ್ವ ಕೆರೆಗೆ ಬಿದ್ದು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. 



ಚಿಕ್ಕಮಗಳೂರು ಜಿಲ್ಲೆಯ ಹೊನ್ನೆಮಕ್ಕಿ ನಿವಾಸಿ ಶಿವು ಎಂಬಾತ ತನ್ನ ಗೆಳೆಯನೊಂದಿಗೆ ಚಲನಚಿತ್ರ ನೋಡಲು ಭದ್ರಾವತಿಯ ಚಿತ್ರಮಂದಿರಕ್ಕೆ ತೆರಳಿ ವಾಪಸ್ ಬರುವಾಗ ನಿಯಂತ್ರಣ ತಪ್ಪಿ ಭದ್ರಾವತಿ ಉಂಬಳೆಬೈಲು ನಡುವಿನ ರಸ್ತೆ ಸಮೀಪದ ಕೆರೆಗೆ ಬೈಕ್ ಬಿದ್ದ ಪರಿಣಾಮ ಬೈಕಿನಲ್ಲಿದ್ದ ಶಿವು ಸ್ಥಳದಲ್ಲೇ ಮೃತಪಟ್ಟಿದ್ದು ಇನ್ನೋರ್ವ ಗೆಳೆಯನ ಸ್ಥಿತಿ ಗಂಭೀರವಾಗಿದೆ. ಆತನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ನೀರಿಗೆ ಬಿದ್ದ ಸಂದರ್ಭದಲ್ಲಿ ಇಬ್ಬರೂ ಕೂಗಾಟ ನಡೆಸುತ್ತಿರುವುದನ್ನು ಕೇಳಿದ ಸ್ಥಳೀಯರು ಕೂಡಲೇ ಅವರ ರಕ್ಷಣೆಗೆ ದಾವಿಸಿದ್ದಾರೆ ಆದರೆ ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ ಶಿವು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಹಾಗೂ ಇನ್ನೋರ್ವ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ.



ಕೊಪ್ಪದ ಯುವಕ ಮೃತಪಟ್ಟ ಸುದ್ದಿಯನ್ನು ತಿಳಿದ ಸಂಬಂಧಿಕರು ಹಾಗೂ ಗೆಳೆಯರು ಅತೀವ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.