ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಹಿಜಾಬ್ ಪರ ಬ್ಯಾಟ್ ಬೀಸಿದ ಅಲ್ ಖೈದಾ ಸಂಘಟನೆಯ ಮುಖ್ಯಸ್ಥನ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : ಗ್ರಾಮ ಪಂಚಾಯತ್ ಅಧ್ಯಕ್ಷನ ಶೋಕಿ! ಸ್ವಂತ ಕಾರಿಗೆ ಕರ್ನಾಟಕ ಸರ್ಕಾರದ ಲಾಂಛನ ಹೊಂದಿದ ಬೋರ್ಡ್
ಕಾಂಗ್ರೆಸ್ ಪಕ್ಷದ ಕೆಲ ನಾಯಕರು ಪಂಚರಾಜ್ಯಗಳ ಚುನಾವಣಾ ಸೋಲಿನಿಂದ ಹತಾಶರಾಗಿ ಸುಖಾ ಸುಮ್ಮನೆ ಬಿಜೆಪಿ ಪಕ್ಷದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಉತ್ತರ ಪ್ರದೇಶದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 399 ಸ್ಥಾನಗಳಲ್ಲಿ ಸ್ಪರ್ದೆ ಮಾಡಿ 379 ರಲ್ಲಿ ಠೇವಣಿ ಕಳೆದುಕೊಂಡು ಬುದ್ದಿ ಭ್ರಮಣೆ ಆಗಿರುವಂತೆ ಕಾಂಗ್ರೆಸ್ ವರ್ತನೆ ಮಾಡುತ್ತಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘ ದೇಶಭಕ್ತರ ಸಂಘಟನೆ ಅಂತಹ ಸಂಘಟನೆಯ ಜೊತೆಗೆ ಬಾಂಬ್ ನ ಮೇಲೆ ಭಯೋತ್ಪಾದನೆಯ ಮೇಲೆ ನಂಬಿಕೆಯಿಟ್ಟು ಜನರ ಮೇಲೆ ದಬ್ಬಾಳಿಕೆ ನಡೆಸುವ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಯನ್ನು ದೇಶಭಕ್ತ ಆರ್.ಎಸ್.ಎಸ್ ನೊಂದಿಗೆ ಬುದ್ದಿ ಇದ್ದವರು ಯಾರೂ ಹೋಲಿಕೆ ಮಾಡುವುದಿಲ್ಲ ಎಂದು ಟಾಂಗ್ ನೀಡಿದ್ದಾರೆ.
ಹೋಲಿಕೆಯನ್ನು ಕಾಂಗ್ರೆಸ್ ಹಾಗೂ ಅಲ್ ಖೈದಾ ಜೊತೆಗೆ ಮಾಡಬೇಕು ಅವೆರಡಕ್ಕೂ ಹೋಲಿಕೆಯಿದೆ. ಸುತ್ರದಾರಿ ಅಲ್ ಖೈದಾನೋ ಪಾತ್ರಧಾರಿ ಕಾಂಗ್ರೆಸ್ಸ್ ಪಕ್ಷವೋ ಎಂದು ತಿಳಿದಿಲ್ಲ ಅದು ಇನ್ನಷ್ಟೇ ಗೊತ್ತಾಗಬೇಕಿದೆ ಎಲ್ಲೆಡೆ ಸರ್ಕಾರ ಕಳೆದುಕೊಂಡ ಭರದಲ್ಲಿ ಈ ರೀತಿಯಾಗಿ ಅವರ ಮಾತುಗಳು ಕೇಳಿ ಬರುತ್ತಿದೆ ಎಂದು ಕುಟುಕಿದರು.
ತನು ಕೊಟ್ಟಿಗೆಹಾರ, ವರದಿಗಾರರು


.jpeg)
.jpeg)

0 Comments