ಹಾಸನ : (ನ್ಯೂಸ್ ಮಲ್ನಾಡ್ ವರದಿ) ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಉರುಳಿದ ಪರಿಣಾಮ ಕಾರಿಗೆ ಬೆಂಕಿತಗುಲಿ ಕಾರು ಹೊತ್ತಿ ಉರಿದ ದುರ್ಘಟನೆ ನಡೆದಿದೆ. 

ಇದನ್ನೂ ಓದಿ : ಹರಿಹರಪುರ : ಮೈಮೇಲೆ ವಾಹನ ಹರಿದು ನರಳಾಡಿ ಸಾವನ್ನಪ್ಪಿದ ಹೆಬ್ಬಾವು

ಹಾಸನದ ಹೊರ ವಲಯವಾದ ಕೆಂಚೆಟ್ಟಳ್ಳಿ ಬಳಿ ಈ ಘಟನೆ ಸಂಭವಿಸಿದ್ದು, ಕಾರ್ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕಾರು ಪಲ್ಟಿಯಾಗಿ ಬಿದ್ದು ತದನಂತರದಲ್ಲಿ ಕಾರಿಗೆ ಬೆಂಕಿ ತಗುಲಿದೆ. ಈ ಘಟನೆಯಲ್ಲಿ ಕಾರ್ ಚಾಲನೆ ಮಾಡುತ್ತಿದ್ದ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಉಂಟಾಗದೇ ಚಾಲಕ ಸುರಕ್ಷಿತವಾಗಿದ್ದಾನೆ.

ಈ ಅವಘಡ ಸಂಭವಿಸುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಚಾಲಕನನ್ನು ಹೊರಕರೆದು ತಂದು ಅಲ್ಲೇ ಸಮೀಪದಲ್ಲಿದ್ದ ನೀರಿನ ಟ್ಯಾಂಕರ್ ನ ಸಹಾಯದಿಂದ ಬೆಂಕಿಯನ್ನು ನಂದಿಸುವ ಕಾರ್ಯ ಮಾಡಿದ್ದಾರೆ. 

ಸ್ಥಳೀಯರು ಕೂಡಲೇ ಧಾವಿಸಿ ಕಾರಿಗೆ ತಗುಲಿದ್ದ ಬೆಂಕಿಯನ್ನು ಕೆಡಿಸದೇ ಹೋದಲ್ಲಿ ಬೆಂಕಿಯ ತೀವ್ರತೆ ಹೆಚ್ಚಾಗಿ ಸಂಪೂರ್ಣ ಕಾರ್ ಸುಟ್ಟು ಭಸ್ಮವಾಗುತ್ತಿತ್ತು. ಸ್ಥಳೀಯರ ಚುರುಕು ಅಗ್ನಿಶಮನದಿಂದಾಗಿ ಸಂಭವಿಸುತ್ತಿದ್ದ ದೊಡ್ಡ ಅಪಾಯವೊಂದು ನಿಯಂತ್ರಣಕ್ಕೆ ಬಂದಿದೆ. ಕಾರಿನ ಚಾಲಕ ಸಣ್ಣ ಪುಟ್ಟ ಗಾಯಗಳಿಗೀಡಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.