ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಮಲೆನಾಡು ಭಾಗದ ಯುವಕ ಯುವತಿಯರಿಗೆ ಉದ್ಯೋಗ ಸೃಷ್ಟಿಸುವ ಸಲುವಾಗಿ ಅಮ್ಮ ಫೌಂಡೇಶನ್ ಅಧ್ಯಕ್ಷರಾದ ಶ್ರೀ ಸುಧಾಕರ್ ಎಸ್ ಶೆಟ್ಟಿ ಅವರು ಬೃಹತ್ ಉದ್ಯೋಗ ಮೇಳವನ್ನು 08.05.2022 ರ ಭಾನುವಾರದಂದು ಆಯೋಜನೆ ಮಾಡಿದ್ದಾರೆ. ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವವರಿಗೆ ಪೂರಕವಾಗುವಂತೆ ತರಬೇತಿ ಶಿಬಿರದ ಆಯೋಜನೆಯನ್ನು ಮಾಡಿದ್ದಾರೆ. 

ಇದನ್ನೂ ಓದಿ : ಕೊಪ್ಪ : ಆಕಸ್ಮಿಕ ವಿದ್ಯುತ್ ಅವಘಡ ; ಓರ್ವ ವ್ಯಕ್ತಿಯ ದುರ್ಮರಣ

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲೂಕುಗಳ ಯುವಕ ಯುವತಿಯರಿಗೆ ಉದ್ಯೋಗ ನೀಡುವ ಸಲುವಾಗಿ ಅಮ್ಮ ಫೌಂಡೇಶನ್ ನ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಸುಧಾಕರ್ ಎಸ್ ಶೆಟ್ಟಿ, ಉದ್ಯೋಗದಾತ ಸಂಸ್ಥೆ, ಪೀಣ್ಯ ಇಂಡಸ್ಟ್ರಿಯಲ್ ಅಸೋಸಿಯೇಷನ್ ಸೇರಿದಂತೆ ಅನೇಕ ಸಂಸ್ಥೆಗಳ ಸಹಕಾರದೊಂದಿಗೆ ಬೃಹತ್ ಉದ್ಯೋಗ ಮೇಳದ ಆಯೋಜನೆಯು ಮೇ 08 ರ ಭಾನುವಾರದಂದು ಕೊಪ್ಪದ ವೆಂಕಟೇಶ್ವರ ವಿದ್ಯಾಮಂದಿರ (B.G.S) ಇಲ್ಲಿ ಆಯೋಜನೆಗೊಂಡಿದ್ದು ಬೆಳಗ್ಗೆ 9.30 ರಿಂದ ಈ ಬೃಹತ್ ಉದ್ಯೋಗ ಮೇಳವು ಆರಂಭಗೊಳ್ಳುತ್ತದೆ. 

ಅಭ್ಯರ್ಥಿಗಳು ಈ ಕೆಳಕಂಡ ಲಿಂಕ್ ಮೂಲಕ ರಿಜಿಸ್ಟರ್ ಆಗಬಹುದು : https://forms.gle/PvypXpJerzDzsrfE9

ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವವರಿಗೆ ಅವಶ್ಯವಿರುವ ವ್ಯಕ್ತಿತ್ವವಿಕಸನ ತರಬೇತಿಯನ್ನು ಇನ್ಫೋಸಿಸ್ ಸಂಸ್ಥೆಯ ಹಿರಿಯ HRD ಆದ ಶ್ರೀಮತಿ ಇಂದು ರಾವ್ ಇವರು ನಾಳೆ ದಿನಾಂಕ 30.04.2022 ರಂದು ನೀಡಲಿದ್ದಾರೆ. ಈ ಪೂರ್ವ ತಯಾರಿ ಹಾಗೂ ವ್ಯಕ್ತಿತ್ವ ವಿಕಸನ ತರಬೇತಿಯು ಶೃಂಗೇರಿಯ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಬೆಳಗ್ಗೆ 10 ರಿಂದ 11.30 ರ ವರೆಗೆ ನಡೆಯಲಿದ್ದು, ಕೊಪ್ಪದ ಪುರಭವನದಲ್ಲಿ 12.30 ರಿಂದ ಮಧ್ಯಾಹ್ನ 02 ರ ವರೆಗೆ ನಡೆಯಲಿದೆ ಹಾಗೂ ನರಸಿಂಹರಾಜಪುರದ ಹಳೇಪೇಟೆ ಗುರುಭವನದಲ್ಲಿ ಸಂಜೆ 04 ರಿಂದ 5.30 ರ ವರೆಗೆ ನಡೆಯಲಿದ್ದು ಅರ್ಹರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದ್ದಾರೆ. 

ಅಂತೆಯೇ ಮೇ ತಿಂಗಳ 08 ರಂದು ನಡೆಯುವ ಬೃಹತ್ ಉದ್ಯೋಗ ಮೇಳದಲ್ಲಿ 50 ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿದ್ದು ಎಸೆಸೆಲ್ಸಿ, ಪಿಯುಸಿ, ಯಾವುದೇ ಪದವಿ, ಸ್ನಾತಕೋತ್ತರ ಪದವಿ, ಐಟಿಐ, ಡಿಪ್ಲೋಮಾ, ಬಿಇ ಮುಗಿಸಿರುವ ಉದ್ಯೋಗಾಸಕ್ತರು ಈ ಬೃಹತ್ ಉದ್ಯೋಗ ಮೇಳದಲ್ಲಿ ಭಾಗವಹಿಸಿ ಉದ್ಯೋಗವನ್ನು ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

ಮಲೆನಾಡಿಗರಿಗೆ ಉದ್ಯೋಗ ಕಲ್ಪಿಸುತ್ತಿರುವ ಈ ಬೃಹತ್ ಉದ್ಯೋಗ ಮೇಳದ ಅಧಿಕೃತ ಮೀಡಿಯಾ ಪಾರ್ಟ್ನರ್ ಆಗಿ ನ್ಯೂಸ್ ಮಲ್ನಾಡ್ ಕಾರ್ಯನಿರ್ವಹಿಸಲಿದೆ