ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ರಕ್ತದಾನಿಗಳು ಶೃಂಗೇರಿ ಎಂಬ ವಾಟ್ಸಾಪ್ ಗ್ರೂಪ್ ನ್ನು ರಚಿಸಿ ಈ ಮೂಲಕ ತುರ್ತು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಇರುವ ರೋಗಿಗಳಿಗೆ ರಕ್ತದ ಪೂರೈಕೆ ನಡೆಸುತ್ತಿರುವ ಶೃಂಗೇರಿಯ ಯುವಕರ ಗುಂಪಿಗೆ ಇದೀಗ ಮೂರನೇ ವರ್ಷದ ಸಂಭ್ರಮಾಚರಣೆ. ಈ ನಿಟ್ಟಿನಲ್ಲಿ ನಾಳೆ ಬೃಹತ್ ರಕ್ತದಾನ ಶಿಬಿರದ ಆಯೋಜನೆಯನ್ನು ಬಳಗದ ವತಿಯಿಂದ ನಡೆಸಲಾಗಿದೆ.
ವಿದ್ಯುತ್ ಶಾಕ್ ಗೆ ಒಳಪಟ್ಟು ಅಸುನೀಗಿದ 4 ವರ್ಷದ ಬಾಲಕಿ
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲೂಕುಗಳ ಜನರಿಗೆ ಅಪಘಾತ ಅಥವಾ ಇನ್ನಾವುದೇ ತುರ್ತು ಸಂದರ್ಭಗಳಲ್ಲಿ ರಕ್ತದ ಅನಿವಾರ್ಯತೆ ಇದ್ದಾಗ ಅವರ ಅವಶ್ಯಕತೆಗೆ ಸ್ಪಂದಿಸುವ ಕೆಲಸವನ್ನು ರಕ್ತದಾನಿಗಳು ಶೃಂಗೇರಿ ಗ್ರೂಪ್ ನ ಮೂಲಕ ಶೃಂಗೇರಿಯ ಯುವಕರು ನಡೆಸುತ್ತಿದ್ದಾರೆ.
ರಕ್ತದಾನಿಗಳು ಶೃಂಗೇರಿ ಬಳಗದ ಪ್ರಶಾಂತ್ ಈ ವರೆಗೆ ಅನೇಕ ಬಾರಿ ರಕ್ತದಾನ ಮಾಡಿ, ರಕ್ತದ ಅವಶ್ಯಕತೆ ಇರುವವರಿಗೆ ಪೂರೈಕೆ ಮಾಡಿದ್ದಾರೆ. ಈ ಗ್ರೂಪ್ ನ ಮೂಲಕ ರಾಜ್ಯದ ಅನೇಕ ಜನರಿಗೆ ರಕ್ತದ ಸಹಾಯವನ್ನು ಈ ಬಳಗ ಮಾಡಿದೆ.
ಹೆಚ್ಚಿನದಾಗಿ ಉತ್ಸಾಹಿ ಯುವಕರನ್ನು ಹೊಂದಿರುವ ಈ ಗುಂಪು ಸದಾ ರಕ್ತದ ಅವಶ್ಯಕತೆ ಇರುವ ವ್ಯಕ್ತಿಗಳಿಗೆ ರಕ್ತವನ್ನು ಪೂರೈಕೆ ನಡೆಸುತ್ತಾ ಬಂದಿದೆ. ಇದುವರೆಗೆ 2,500 ಕ್ಕೂ ಅಧಿಕ ಯೂನಿಟ್ ರಕ್ತದ ಪೂರೈಕೆಯನ್ನು ನಡೆಸಿದ್ದು, ಮೂರನೇ ವರ್ಷದ ಸಂಭ್ರಮಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ಸಲುವಾಗಿ ನಾಳೆ ಬೃಹತ್ ರಕ್ತದಾನ ಶಿಬಿರದ ಆಯೋಜನೆಯನ್ನು ನಡೆಸಲಾಗಿದೆ.
ಈ ಶಿಬಿರವು ನಾಳೆ ಬೆಳಗ್ಗೆ 10 ಗಂಟೆಯಿಂದ ರಕ್ತದಾನ ಆರಂಭವಾಗಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಈ ಬೃಹತ್ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡುವ ಮೂಲಕ ತುರ್ತು ಸಂದರ್ಭದಲ್ಲಿ ರಕ್ತದ ಕೊರತೆಯನ್ನು ನೀಗಿಸುವಲ್ಲಿ ಸಹಕಾರ ನೀಡಬೇಕೆಂದು ಕೋರಿದ್ದಾರೆ.
ಶೃಂಗೇರಿಯಲ್ಲಿ ನಾಳೆ ಮಲೆನಾಡು ಪ್ರಾಂತ್ಯ ಪ್ರಥಮ ಸಮ್ಮೇಳನ
ಶೃಂಗೇರಿ : ಮಲೆನಾಡು ಭಾಗದ ಜನರು ನಿರಂತರವಾಗಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತಾದ ಸವಿಸ್ತಾರ ಚರ್ಚೆ ಹಾಗೂ ಗಂಭೀರ ಸಮಸ್ಯೆಗಳ ಕುರಿತಾದ ಚಿಂತನ ಮಂಥನ ಕುರಿತಾಗಿ ಮಲೆನಾಡು ಪ್ರಾಂತ್ಯದ ಪ್ರಥಮ ಸಮ್ಮೇಳನ ನಾಳೆ ಶೃಂಗೇರಿಯಲ್ಲಿ ನಡೆಯಲಿದೆ.
ಮಲೆನಾಡು ಭಾಗವಾದ ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯ ಜನರನ್ನೊಳಗೊಂಡ ಸಮ್ಮೇಳನ ಇದಾಗಿದ್ದು ಕಾರ್ಮಿಕರ ದಿನಾಚರಣೆಯ ದಿನವಾದ ಮೇ 1 ರಂದು (ನಾಳೆ) ಈ ಸಮ್ಮೇಳನವು ಶೃಂಗೇರಿಯ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 3.30 ರ ವರೆಗೆ ನಡೆಯಲಿದೆ. ಈ ಸಭೆಯ ಆಯೋಜನೆಯನ್ನು ಜನಶಕ್ತಿ ಸಂಘಟನೆ ಮಾಡಿದೆ.
ಈ ಸಭೆಯಲ್ಲಿ ಮುಖ್ಯವಾಗಿ ಅನೇಕ ಸಮಯಗಳಿಂದ ಮಲೆನಾಡು ಭಾಗದ ಜನರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಾದ ಹುಲಿ ಯೋಜನೆ, ಕಸ್ತೂರಿ ರಂಗನ್ ವರದಿ, ಜಮೀನು ಹಾಗೂ ಸಾಗುವಳಿ ಚೀಟಿ ನೀಡಲು ಆಗುತ್ತಿರುವ ವಿಳಂಬ, ಗೋಮಾಳವನ್ನು ಖಾಸಗೀಯವರಿಗೆ ನೀಡಲು ಆಗುತ್ತಿರುವ ವಿಳಂಬದ ಕುರಿತು ಹಾಗೂ ಇನ್ನಿತರ ಮುಖ್ಯ ಸಮಸ್ಯೆಗಳ ಕುರಿತು ಚರ್ಚೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಈ ಸಮ್ಮೇಳನದ ಮುಖ್ಯ ಅತಿಥಿಗಳಾಗಿ ನಿವೃತ್ತ ಜಿಲ್ಲಾಧಿಕಾರಿಗಳಾದ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಶಶಿಕಾಂತ್ ಸೆಂದಿಲ್, ಪ್ರಖ್ಯಾತ ಚಿಂತಕರಾದ ಶಿವಸುಂದರ್, ಮಾಜಿ ಸಚಿವರು ಮತ್ತು ಸಾಮಾಜಿಕ ಹೋರಾಟಗಾರರಾದ ಬಿ.ಟಿ ಲಲಿತಾನಾಯಕ್, ಜನಶಕ್ತಿ ಸಂಘಟನೆಯ ರಾಜ್ಯ ಗೌರವಾಧ್ಯಕ್ಷರಾದ ಗೌರಿ, ಪರಿಸರ ಹೋರಾಟಗಾರರಾದ ಕಲ್ಕುಳಿ ವಿಠ್ಠಲ್ ಹೆಗ್ಡೆ, ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿಯಾದ ಕೆ.ಎಲ್ ಅಶೋಕ್, ರಾಜ್ಯ ಗೌರವಾಧ್ಯಕ್ಷರಾದ ಗೌಸ್ ಮೊಹಿದ್ದೀನ್ ಆಗಮಿಸಲಿದ್ದಾರೆ.




0 Comments