ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಹೆಚ್ಚಿನ ಆಸಕ್ತಿಯನ್ನು ಉಪಗ್ರಹದ ಕುರಿತಾಗಿ ಹೊಂದಿ ಏನಾದರೊಂದು ಸಾಧನೆಯನ್ನು ಮಾಡಬೇಕೆಂಬ ಧೃಢ ಸಂಕಲ್ಪವನ್ನು ಹೊಂದಿ ತನ್ನ ಆಸಕ್ತಿಯ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ್ದಾನೆ ಮಲೆನಾಡಿನ ಯುವಕ. 

ಇದನ್ನೂ ಓದಿ : ಕಿಗ್ಗಾ ಜಾತ್ರೆ; ಸರ್ವಧರ್ಮೀಯರಿಗೆ ಅಂಗಡಿ ಇಡಲು ಗ್ರೀನ್ ಸಿಗ್ನಲ್

ಚಿಕ್ಕಮಗಳೂರು ಜಿಲ್ಲೆಯ ಆಲ್ದೂರಿನ ಯುವಕ ಆವೇಜ್ ಅಹಮದ್ ಇಡೀ ದೇಶವೇ ಮೆಚ್ಚುವಂತಹ ಸಾಧನೆಯನ್ನು ಮಾಡಿ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಆಲ್ದೂರಿನ ರಾಯಲ್ ಮೆಡಿಕಲ್ ಮಾಲೀಕರಾದ ನದೀಮ್ ಅಹಮದ್ ಅವರ ಪುತ್ರ ಆವೇಜ್ ಅಹಮದ್ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಆಲ್ದೂರಿನಲ್ಲಿ ಮುಗಿಸಿ ಸ್ಪೇಸ್ ಎಕ್ಸ್ ನಿಂದ ಪ್ರಭಾವಿತರಾಗಿ ಇಂದು ಈ ಸಾಧನೆಯನ್ನು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 

ಎಂ.ಎಸ್ಸಿ ಮ್ಯಾಥಮ್ಯಾಟಿಕ್ಸ್ ಓದಿದ ಅವರು ಅಮೆರಿಕದ ಸ್ಪೇಸ್ ಎಕ್ಸ್ ನಿಂದ ತಮ್ಮ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿ ಮಲೆನಾಡಿನ ಕೀರ್ತಿಯನ್ನು ಹೆಚ್ಚಿಸಿದ ಗರಿಮೆ ಆಲ್ದೂರಿನ ಆವೇಜ್ ಅವರದ್ದು.

ಭಾರತದ ಇಸ್ರೋ ದಿಂದ ತಮ್ಮ ಮೊದಲ ಉಪಗ್ರಹವನ್ನು ಉಡಾವಣೆ ಮಾಡಬೇಕೆಂಬ ಅಗಾಧವಾದ ಕನಸು ದಿನಾಂಕ ದೊರೆಯದ ಕಾರಣ ಕನಸಾಗಿಯೇ ಉಳಿದಿದೆ. ತಾವೇ ನಿರ್ಮಾಣ ಮಾಡಿದ ಶಕುಂತಲಾ ಎಂಬ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದಾರೆ. ಈ ಕುರಿತು ಊರಿನ ಅನೇಕ ಸ್ಥಳೀಯರು ಅಭಿನಂದನೆಗಳ ಮಹಾ ಪೂರವನ್ನೇ ಹರಿಸಿದ್ದು ಇನ್ನಷ್ಟು ಹೆಚ್ಚಿನ ಉತ್ತಮ ಕಾರ್ಯಗಳು ಈ ಪ್ರತಿಭಾನ್ವಿತ ಯುವಕನಿಂದ ಈಡೇರಲಿ ದೇಶದ ಹಾಗೂ ರಾಜ್ಯದ ಗರಿಮೆಯನ್ನು ಇನ್ನಷ್ಟು ಹೆಚ್ಚಿಸುವಂತಾಗಲಿ ಎಂದು ಸಾರ್ವಜನಿಕರು ಆಶಿಸಿದ್ದಾರೆ.