ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ವಾಹನವೊಂದು ರಭಸವಾಗಿ ಹೆಬ್ಬಾವಿನ ಮೇಲೆ ಹರಿದ ಪರಿಣಾಮ ಹಾವು ನರಳಾಡಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. 

ಇದನ್ನೂ ಓದಿ : ಶೃಂಗೇರಿಯಿಂದ ಮಂಗಳೂರಿಗೆ ತೆರಳುತ್ತಿದ್ದ ನಿಶ್ಮಿತ ಬಸ್ ಪಲ್ಟಿ ! 20 ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯ

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಹಾಗೂ ಶೃಂಗೇರಿ ಮಾರ್ಗದ ಸಮೀಪ ಹೆಬ್ಬಾವು ರಸ್ತೆ ದಾಟುವ ಸಮಯದಲ್ಲಿ ಯಾವುದೋ ವಾಹನವು ರಭಸವಾಗಿ ಹರಿದ ಪರಿಣಾಮ ಹಾವು ನರಳಾಡಿ ಮರಣವನ್ನಪ್ಪಿದೆ. 

ನಿನ್ನೆ ತಡರಾತ್ರಿಯವರೆಗೂ ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಾಗಿದ್ದು, ಈ ಮಧ್ಯೆ ಯಾರೋ ಹೆಬ್ಬಾವಿನ ಮೇಲೆ ವಾಹನ ಹತ್ತಿಸಿ ಅದನ್ನು ಘಾಸಿಗೊಳಿಸಿ ಹಾವು ಸಾವನ್ನಪ್ಪುವಂತೆ ಮಾಡಿದ್ದಾರೆ. ಹರಿಹರಪುರ ಶ್ರೀ ಮಠದಲ್ಲಿ ಮಹಾಕುಂಭಾಭಿಷೇಕ ಕಾರ್ಯಕ್ರಮವಿರುವ ಕಾರಣ ಈ ಭಾಗದಲ್ಲಿ ವಾಹನಗಳ ಸಂಚಾರ ಹೆಚ್ಚಾಗಿದ್ದು ಈ ಅವಘಡ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. 

ರಸ್ತೆಯ ಪಕ್ಕದಲ್ಲೇ ಹಾವು ಒದ್ದಾಡಿ ಸಾವನ್ನಪ್ಪಿದೆ. ಮಲೆನಾಡು ಭಾಗದಲ್ಲಿ ರಾತ್ರಿಯ ವೇಳೆ ಸಂಚಾರ ಮಾಡುವವರು ಕಾಡು ಪ್ರಾಣಿಗಳಿಗೆ ತೊಂದರೆಯಾಗದಂತೆ ನಿಧಾನವಾಗಿ ವಾಹನವನ್ನು ಚಾಲನೆ ಮಾಡಬೇಕೆಂದು ತಿಳಿಸಿದ್ದಾರೆ.