ಬಾಳೆಹೊನ್ನೂರು : (ನ್ಯೂಸ್ ಮಲ್ನಾಡ್ ವರದಿ) ಬಾಳೆಹೊನ್ನೂರು ಸಮೀಪದ ಬಸವನಕೋಟೆ ಅರಣ್ಯ ಪ್ರದೇಶದಲ್ಲಿ ಅಳವಡಿಕೆ ಮಾಡಲಾಗಿದ್ದ ಕ್ಯಾಮೆರಾದಲ್ಲಿ ಹುಲಿಯು ಅತ್ತಿಂದಿತ್ತ ಸಂಚಾರ ಮಾಡುವ ದೃಶ್ಯಾವಳಿಗಳು ಸೆರೆಯಾಗಿದೆ.
ಇದನ್ನೂ ಓದಿ : ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಬೈಕ್ ಸ್ಥಳದಲ್ಲೇ ಓರ್ವನ ಸಾವು ; ಇನ್ನೋರ್ವನ ಸ್ಥಿತಿ ಗಂಭೀರ
ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಸುತ್ತಮುತ್ತಲಿನ ಹಲವು ಅರಣ್ಯ ಪ್ರದೇಶಗಳ ಎರಡು ಪ್ರತ್ಯೇಕ ಜಾಗಗಳಲ್ಲಿ ಹುಲಿಗಳ ಸಂಚಾರ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹುಲಿ ಗಣತಿಯ ಸಲುವಾಗಿ ಅರಣ್ಯ ಪ್ರದೇಶಗಳಲ್ಲಿ ಅಳವಡಿಸಲಾಗಿದ್ದ ಕ್ಯಾಮರಾದಲ್ಲಿ ಬಾಳೆಹೊನ್ನೂರು ಭಾಗದಲ್ಲಿ ಎರಡು ಹುಲಿ ಸಂಚಾರ ನಡೆಸುವುದು ಕಂಡುಬಂದಿದ್ದು ಸ್ಥಳೀಯರು ಹಾಗೂ ಗ್ರಾಮಸ್ಥರು ಆತಂಕ - ಭಯಪಡುವ ಅಗತ್ಯವಿಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಅಭ್ಯರ್ಥಿಗಳು ಈ ಕೆಳಕಂಡ ಲಿಂಕ್ ಮೂಲಕ ರಿಜಿಸ್ಟರ್ ಆಗಬಹುದು https://forms.gle/PvypXpJerzDzsrfE9ಬಾಳೆಹೊನ್ನೂರು ಅರಣ್ಯ ಇಲಾಖೆಯ ವ್ಯಾಪ್ತಿಯ ಬಸವನಕೋಟೆ ಹಾಗೂ ಸಾರಗೋಡು ಬಳಿಯಲ್ಲಿ ಹುಲಿಯ ಸಂಚಾರವು ಕಂಡುಬಂದಿದ್ದು ಈ ದೃಶ್ಯಾವಳಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ದಾಖಲಾತಿಗಾಗಿ ಕಂಪ್ಯೂಟರ್ ಗೆ ವರ್ಗಾವಣೆ ಮಾಡಿ ಈ ಕುರಿತು ಹೆಚ್ಚಿನ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.
ಸ್ವಾಭಾವಿಕವಾಗಿ ನಾವು ಜೀವನ ನಡೆಸುವಂತೆ ಅರಣ್ಯ ಪ್ರದೇಶದಲ್ಲಿ ಹುಲಿಗಳು ತಮ್ಮ ಆಹಾರವನ್ನು ಹುಡುಕುತ್ತಾ ಅದನ್ನು ಸೇವಿಸಿ ಪ್ರಾಕೃತಿಕವಾಗಿ ಜೀವನ ನಡೆಸುತ್ತಿದೆ. ದಟ್ಟ ಅರಣ್ಯ ಭಾಗಗಳಲ್ಲಿ ಹುಲಿಗಳ ಸಂಚಾರವಿದ್ದು ಜನರು ಭಯಪಡಬೇಕಾದ ಅಗತ್ಯವಿಲ್ಲ ಜನರ ಸುರಕ್ಷತೆಯನ್ನು ಕಾಪಾಡಲು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸದಾ ಕಾರ್ಯನಿರ್ವಹಿಸುತ್ತಾರೆ ಎಂದು ಸಾರ್ವಜನಿಕರಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.





0 Comments