ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಬಸ್ ಹಾಗೂ ಬೈಕ್ ನಡುವೆ ಭೀಕರ ರಸ್ತೆ ಅಪಘಾತ ನಡೆದಿದ್ದು ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆಯಾಗಿದೆ.
ಇದನ್ನೂ ಓದಿ : ಜೀತ ಪದ್ಧತಿಯಿಂದ ಮುಕ್ತರಾದ 50 ಕ್ಕೂ ಅಧಿಕ ಕಾರ್ಮಿಕರು ; ಬೆಳ್ಳಂಬೆಳಗ್ಗೆ ದಾಳಿ ನಡೆಸಿ ಹಿಂಸೆಯಿಂದ ಮುಕ್ತಿ ನೀಡಿದ ಪೊಲೀಸರು
ಶೃಂಗೇರಿಯಿಂದ ಕಾರ್ಕಳ ಹಾಗೂ ಮಂಗಳೂರು ಭಾಗವನ್ನು ಸಂಪರ್ಕಿಸುವ ಅತೀ ಹೆಚ್ಚಿನ ತಿರುವು ಹಾಗೂ ಕಿರು ರಸ್ತೆಯನ್ನು ಹೊಂದಿರುವ ಕೆರೆಕಟ್ಟೆ ಹಾಗೂ ಎಸ್.ಕೆ ಬಾರ್ಡರ್ ಮಾರ್ಗದಲ್ಲಿ ಈ ಅಪಘಾತ ಸಂಭವಿಸಿದೆ.
ಬೈಕ್ ನಲ್ಲಿ ಇಬ್ಬರು ಸವಾರರಿದ್ದು ಇಬ್ಬರೂ ಕೂಡ ಗಾಯಗೊಂಡಿದ್ದಾರೆ, ಓರ್ವನಿಗೆ ಗಂಭೀರ ಗಾಯಗಳಾಗಿದ್ದು ಕೂಡಲೇ ಅಪಘಾತಕ್ಕೀಡಾದವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅತ್ಯಂತ ಕಿರಿದಾದ ರಸ್ತೆ ಹೊಂದಿರುವ ಈ ಮಾರ್ಗದಲ್ಲಿ ವಾಹನ ಸವಾರರು ಜಾಗರೂಕರಾಗಿ ವಾಹನ ಚಾಲನೆ ಮಾಡಬೇಕು. ಈ ಮಾರ್ಗದಲ್ಲಿರುವ ಸೇತುವೆಗಳೂ ಕೂಡ ಶಿಥಿಲಾವಸ್ಥೆಯನ್ನು ತಲುಪಿದ್ದು ಅತೀ ಹೆಚ್ಚಿನ ಗಮನವನ್ನು ರಸ್ತೆಯ ಮೇಲಿರಿಸಿ ವಾಹನ ಸವಾರರು ಸಾಗಬೇಕಿದೆ.
ಅಪಘಾತಕ್ಕೀಡಾದ ವ್ಯಕ್ತಿಗಳನ್ನು ಬಸ್ಸಿನಲ್ಲಿದ್ದ ಪ್ರಯಾಣಿಕರು ಹಾಗೂ ಚಾಲಕ, ನಿರ್ವಾಹಕರು ಆಸ್ಪತ್ರೆಗೆ ದಾಖಲು ಮಾಡಲು ಸಹಕಾರ ನೀಡಿದರು.





0 Comments