ಹರಿಹರಪುರ : (ನ್ಯೂಸ್ ಮಲ್ನಾಡ್ ವರದಿ) ಶ್ರೀ ಕ್ಷೇತ್ರ ಹರಿಹರಪುರ ಮಠದಲ್ಲಿ ವಿಜೃಂಭಣೆಯಿಂದ ಮಹಾಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮ ಆರಂಭವಾಗಿದ್ದು ನಿನ್ನೆ ಶ್ರೀ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳು ತಮ್ಮ ಅಮೃತ ಹಸ್ತದಿಂದ ಮಹಾ ಕುಂಭಾಭಿಷೇಕ ನೆರವೇರಿಸಿದರು.
ಇದನ್ನೂ ಓದಿ : ಜಯಪುರ : ಭೀಕರ ರಸ್ತೆ ಅಪಘಾತ ; ಓರ್ವ ಮಹಿಳೆ ಸಾವು ಇನ್ನೋರ್ವ ವ್ಯಕ್ತಿಯ ಸ್ಥಿತಿ ಗಂಭೀರ
ಮಲೆನಾಡಿನ ಪವಿತ್ರ ಧಾರ್ಮಿಕ ಕ್ಷೇತ್ರವಾದ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನೃಸಿಂಹ ಪೀಠದಲ್ಲಿ ಅತ್ಯಂತ ವೈಭವದಿಂದ ಮಹಾಕುಂಭಾಭಿಷೇಕದ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು ಅಂತೆಯೇ ಇಂದು ಶ್ರೀ ಲಕ್ಷ್ಮೀನೃಸಿಂಹ ದೇವರಿಗೆ ಸಹಸ್ರನಾಮ ಪಾರಾಯಣದ ಮೂಲಕ ಕೋಟಿ ತುಳಸಿ ಅರ್ಚನೆ ನಡೆಯಿತು ಹಾಗೂ ಶ್ರೀ ಲಕ್ಷ್ಮೀ ನರಸಿಂಹ ಮಹಾಯಾಗ ನಡೆಯಿತು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಅನೇಕ ಭಕ್ತರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡು ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳ ಹಾಗೂ ಲಕ್ಷ್ಮೀ ನೃಸಿಂಹ ದೇವರ ಕೃಪೆಗೆ ಪಾತ್ರರಾದರು.
ಈ ಬೃಹತ್ ಕುಂಭಾಭಿಷೇಕ ಮಹೋತ್ಸವಕ್ಕೆ ಆಗಮಿಸುವ ಸರ್ವರಿಗೂ ಶ್ರೀ ಮಠದ ವತಿಯಿಂದ ಅಗತ್ಯವಾದ ಎಲ್ಲಾ ಸೌಕರ್ಯಗಳನ್ನು ಕಲ್ಪಿಸಲಾಗಿದ್ದು ಬೆಳಗ್ಗೆ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹಾಗೂ ಸಂಜೆಯ ವೇಳೆಯಲ್ಲಿ ನಡೆಯುವ ಸಾಂಸ್ಕತಿಕ ಕಾರ್ಯಕ್ರಮಗಳಲ್ಲೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸುತ್ತಮುತ್ತಲಿನ ಊರುಗಳ ಜನರು, ಸ್ಥಳೀಯರು ಭಾಗವಹಿಸಿ ಕಾರ್ಯಕ್ರಮದ ಸಂಪೂರ್ಣ ಯಶಸ್ಸಿಗೆ ಸಹಕರಿಸುತ್ತಿದ್ದಾರೆ.
ವಿಶೇಷವಾಗಿ ಈ ಕುಂಭಾಭಿಷೇಕ ಮಹೋತ್ಸವದಲ್ಲಿ ಪ್ರತಿದಿನ 11 ಗಂಟೆಯ ಸಮಯದಲ್ಲಿ ಧಾರ್ಮಿಕ ಸಭೆಯು ಆಯೋಜನೆಗೊಂಡಿದ್ದು ಈ ಸಭೆಯಲ್ಲಿ ಭಕ್ತರು ಭಾಗವಹಿಸಿ ಹಿಂದೂ ಸನಾತನ ಧರ್ಮದ ಮಹತ್ವದ ಕುರಿತು ತಿಳಿಸುವ ವಿಚಾರಗಳನ್ನು ಮನನ ಮಾಡಿಕೊಳ್ಳುತ್ತಿದ್ದಾರೆ. ನಿನ್ನೆ ಸಂಜೆ ಪ್ರಖ್ಯಾತ ಕಲಾವಿದರಾದ ವಿದ್ವಾನ್ ಶ್ರೀ ಸತ್ಯನಾರಾಯಣ ರಾಜು ಮತ್ತು ತಂಡದ ವತಿಯಿಂದ ನೃತ್ಯ ರೂಪಕ ನಡೆಯಿತು. ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನರು ಅತ್ಯಂತ ಆಕರ್ಷಣೀಯವಾಗಿದ್ದ ಈ ಕಾರ್ಯಕ್ರಮವನ್ನು ಸವಿದರು.
ಹರಿಹರಪುರ ಶ್ರೀಮಠದ ಮಹಾ ಕುಂಭಾಭಿಷೇಕ ಕಾರ್ಯಕ್ರಮಕ್ಕೆ ಬ್ಯಾನರ್ ಹಾಕಿ ಸ್ವಾಗತ ಕೋರಿದ ಮುಸ್ಲೀಮರು :
ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನೃಸಿಂಹ ಪೀಠಮ್ ಹರಿಹರಪುರದಲ್ಲಿ ವೈಭವದಿಂದ ನಡೆಯುತ್ತಿರುವ ಮಹಾ ಕುಂಭಾಭಿಷೇಕ ಮಹೋತ್ಸವಕ್ಕೆ ಮಸೀದಿಯ ಮುಂದೆ ಮುಸಲ್ಮಾನರು ಸ್ವಾಗತ ಕೋರುವ ಬ್ಯಾನರ್ ಗಳನ್ನು ಅಳವಡಿಸಿ ಶುಭ ಕೋರಿದ್ದಾರೆ.
ರಾಜ್ಯಾದ್ಯಂತ ಹೈಕೋರ್ಟ್ ನೀಡಿದ ಹಿಜಾಬ್ ತೀರ್ಪಿನ ನಂತರದಲ್ಲಿ ಧರ್ಮಗಳ ನಡುವೆ ಸಂಘರ್ಷ ಉಂಟಾಗಿ ಅನ್ಯಧರ್ಮೀಯರೊಂದಿಗಿನ ವ್ಯಾಪಾರ ವಹಿವಾಟಿಗೆ ನಿಷೇಧ ಹೇರಬೇಕು ಹಿಂದೂಗಳ ಜಾತ್ರೆಯಲ್ಲಿ ಮುಸಲ್ಮಾನರ ಅಂಗಡಿಗಳಿಗೆ ನಿಷೇಧ ಹೇರಬೇಕು ಎಂಬೆಲ್ಲಾ ಅಭಿಯಾನಗಳು ಆರಂಭವಾಗಿತ್ತು. ಆದರೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಮಠದಲ್ಲಿ ನಡೆಯುತ್ತಿರುವ ಮಹಾಕುಂಭಾಭಿಷೇಕ ಕಾರ್ಯಕ್ರಮಕ್ಕೆ ಮಸೀದಿಯ ವತಿಯಿಂದ ಶುಭಾಶಯ ಕೋರುವ ಬ್ಯಾನರ್ ಹಾಕಲಾಗಿದೆ. ಈ ಮೂಲಕ ಸಮಾಜದಲ್ಲಿನ ಬಿರುಕು ಅಲ್ಪವಾಗಿ ಕ್ಷೀಣಗೊಂಡಂತೆ ತೋರುತ್ತಿದೆ.
ಏಪ್ರಿಲ್ 10 ನೆಯ ತಾರೀಖಿನಿಂದ ಶ್ರೀ ಮಠದಲ್ಲಿ ಆರಂಭವಾದ ಈ ಮಹಾಕುಂಭಾಭಿಷೇಕ ಕಾರ್ಯಕ್ರಮವು ಏಪ್ರಿಲ್ 24 ರ ವರೆಗೆ ನಡೆಯಲಿದೆ. ಜಯಪುರ ಮಸೀದಿ ಕಮಿಟಿಯವರು ಅಳವಡಿಸಿರುವ ಈ ಬ್ಯಾನರ್ ನಲ್ಲಿ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಶ್ರೀಗಳ ಫೋಟೋ ಅಳವಡಿಸಿ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಸ್ವಾಗತ ಕೋರಿದ್ದಾರೆ. ಇದೀಗ ಈ ಕುರಿತಾದ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದ್ದು ಫೋಟೋ ಹರಿದಾಡುತ್ತಿದೆ.
.jpeg)
.jpg)


.jpeg)

.jpeg)

.jpg)
.jpeg)

0 Comments