ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಯ ನಂತರದಲ್ಲಿ ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟಿನ ಸಂಚಲನ ಉಂಟಾಗಿದ್ದು ಈ ಪ್ರಕರಣದ ಪ್ರಮುಖ ಎ1 ಆರೋಪಿಯಾಗಿರುವ ಕೆ.ಎಸ್ ಈಶ್ವರಪ್ಪ ಅವರ ರಾಜೀನಾಮೆಗೆ ಈ ಹಿಂದೆ ಕಾಂಗ್ರೆಸ್ ಸೇರಿದಂತೆ ಅನೇಕ ಪಕ್ಷಗಳು ಆಗ್ರಹಿಸಿತ್ತು, ಪ್ರತಿಭಟನೆ ಹಾಗೂ ಹೈಕಮಾಂಡ್ ನ ಆದೇಶದ ಮೇರೆಗೆ ಕೆ ಎಸ್ ಈಶ್ವರಪ್ಪ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯಿಂದ  ಚಿಕ್ಕಮಗಳೂರಿನ ಉಸ್ತುವಾರಿ ಸ್ಥಾನವು ಮತ್ತೆ ತೆರವಾಗಿದೆ. 

ಹರಿಹರಪುರ : ಮೈಮೇಲೆ ವಾಹನ ಹರಿದು ನರಳಾಡಿ ಸಾವನ್ನಪ್ಪಿದ ಹೆಬ್ಬಾವು




ಪ್ರಸ್ತುತ ಸಚಿವ ಕೆ.ಎಸ್ ಈಶ್ವರಪ್ಪ ಅವರ ರಾಜೀನಾಮೆಯು ಜಿಲ್ಲೆಯ ಜನರಲ್ಲಿ ಅಸಹಜ ಸ್ಥಿತಿ ನಿರ್ಮಾಣವಾಗುವಂತೆ ಮಾಡಿದೆ. ಈ ಹಿಂದಿನಿಂದಲೂ ಕೂಡ ಇದೇ ಜಿಲ್ಲೆಯ ಯಾವುದಾದರೂ ಓರ್ವ ವ್ಯಕ್ತಿಯನ್ನು ಇಲ್ಲಿನ ಉಸ್ತುವಾರಿ ಮಂತ್ರಿ ಮಾಡಿದರೆ ಮಲೆನಾಡಿನ ಬಹುತೇಕ ಸಮಸ್ಯೆಗಳು ಅವರ ಅರಿವಿಗೆ ಬರುತ್ತಿತ್ತು ಆ ಕಾರಣದಿಂದಾಗಿ ಅತೀ ಶೀಘ್ರವಾಗಿ ಮಲೆನಾಡಿಗರ ಸಮಸ್ಯೆ ಪರಿಹಾರವಾಗುತ್ತಿತ್ತು ಎಂಬ ಧೃಢ ನಂಬಿಕೆ ಜನರಲ್ಲಿತ್ತು. ಅಂತೆಯೇ ಕೆ.ಎಸ್ ಈಶ್ವರಪ್ಪ ಅವರು ಜಿಲ್ಲಾ ಉಸ್ತುವಾರಿಗಳಾದಾಗ ಜಿಲ್ಲೆಯ ಜನರಲ್ಲಿ ಈ ವ್ಯಕ್ತಿಯಿಂದ ನಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ ಎಂಬ ಆಶಾಭಾವನೆ ಇತ್ತು ಆದರೆ ಪ್ರಸ್ತುತ ಅವರೂ ಕೂಡ ರಾಜೀನಾಮೆ ನೀಡಿರುವುದು ಮಲೆನಾಡಿನ ಜನರಿಗೆ ಉಸ್ತುವಾರಿ ಸಚಿವರಿಲ್ಲದೆ ಮಲೆನಾಡಿನ ಬಗೆಹರಿಯದ ಸಮಸ್ಯೆಗಳ ಕುರಿತು ಬೇಸರ ಮೂಡಿದೆ. ಅನೇಕ ಸಮಸ್ಯೆಗಳನ್ನು ಇನ್ನೂ ಪ್ರಸ್ತಾಪ ಮಾಡಲೂ ಸಾಧ್ಯವಾಗಿಲ್ಲ ಎಂಬ ಸಮಸ್ಯೆ ಒಂದೆಡೆಯಾದರೆ ಇನ್ನೊಂದೆಡೆ ಹಲವಾರು ಸಮಸ್ಯೆಗಳಿಗೆ ತಕ್ಕ ಪ್ರತ್ಯುತ್ತರ ಬಾರದೇ ಇರುವುದು ಜನರಲ್ಲಿ ಅಸಹಜ ಭಾವನೆ ಮೂಡಿಸಿದೆ. 


ಬಿಜೆಪಿ ಸರ್ಕಾರ ರಚನೆಯಾದ ನಂತರದಲ್ಲಿ ಇದೀಗ ನಾಲ್ವರು ಜಿಲ್ಲಾ ಉಸ್ತುವಾರಿ ಮಂತ್ರಿಗಳನ್ನು ಜಿಲ್ಲೆ ಕಂಡಿದೆ. ಪ್ರಥಮವಾಗಿ ಚಿಕ್ಕಮಗಳೂರಿನ ಶಾಸಕ ಸಿ.ಟಿ ರವಿ, ಅವರ ನಂತರದಲ್ಲಿ ಎಸ್ ಅಂಗಾರ, ಬಳಿಕ ಪ್ರಸ್ತುತ ಗೃಹ ಸಚಿವರಾಗಿರುವ ಆರಗ ಜ್ಞಾನೇಂದ್ರ ಹಾಗೂ ನಾಲ್ಕನೇಯವರಾಗಿ ಕೆ.ಎಸ್ ಈಶ್ವರಪ್ಪ ನೇಮಕಗೊಂಡಿದ್ದರು. 

ಆದರೆ ಅವರು ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಆತ್ಮಹತ್ಯೆಗೆ ಕಾರಣರಾಗಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾರಣ ಪುನಃ ಚಿಕ್ಕಮಗಳೂರಿನ ಉಸ್ತುವಾರಿ ಸ್ಥಾನ ಪುನಃ ತೆರವುಗೊಂಡಿದೆ. 

ತೆರವುಗೊಂಡ ಸ್ಥಾನಕ್ಕೆ ಇನ್ನೆಷ್ಟು ದಿನಗಳ ಬಳಿಕ ಬೇರೊಬ್ಬ ಸಚಿವರ ನೇಮಕವಾಗುವುದೋ ಯಾವಾಗ ಅವರು ಮಲೆನಾಡಿಗರ ಸಮಸ್ಯೆಯನ್ನು ಬಗೆಹರಿಸುವರೋ ಎಂಬೆಲ್ಲಾ ಪ್ರಶ್ನೆಗಳು ಜಿಲ್ಲೆಯ ಜನತೆಯಲ್ಲಿ ಮೂಡಿದೆ.

ಬಾಳೆಹೊನ್ನೂರು : ಅಕ್ರಮವಾಗಿ ಗೋವನ್ನು ಕಡಿದು ಸಂಗ್ರಹಿಸಿದ್ದ ಒಂದು ಕ್ವಿಂಟಾಲ್ ಗೋಮಾಂಸವನ್ನು ವಶಕ್ಕೆ ಪಡೆದ ಪೊಲೀಸರು 

ಬಾಳೆಹೊನ್ನೂರು : ಅಕ್ರಮವಾಗಿ ಗೋವುಗಳನ್ನು ಕಡಿದು  ಮಾಂಸ ಮಾಡುತ್ತಿದ್ದ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿ ಗೋಮಾಂಸವನ್ನು ವಶಕ್ಕೆ ಪಡೆದಿರುವ ಘಟನೆ ಕಳೆದ ರಾತ್ರಿ ನಡೆದಿದೆ. 

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ವ್ಯಾಪ್ತಿಯ ಸ್ಥಿರೂರು ಗ್ರಾಮದ ಕಕ್ಕುಡುಗೆಯಲ್ಲಿ ಅಕ್ರಮವಾಗಿ ಗೋವುಗಳನ್ನು ಕೊಂದು ಮಾಂಸ ಮಾಡುತ್ತಿದ್ದ ಕಿಡಿಗೇಡಿಗಳ ಮೇಲೆ ದಾಳಿ ನಡೆಸಿದ ಬಾಳೆಹೊನ್ನೂರು ಪೊಲೀಸರು ಸರಿ ಸುಮಾರು ಒಂದು ಕ್ವಿಂಟಾಲ್ ಗೋಮಾಂಸವನ್ನು ವಶಕ್ಕೆ ಪಡೆದಿದ್ದಾರೆ. 


ಪೊಲೀಸರು ದಾಳಿ ನಡೆಸುವ ಸಂದರ್ಭದಲ್ಲಿ ಎಸ್ಕೇಪ್ ಆಗುವ ಸಲುವಾಗಿ ಪೊಲೀಸರನ್ನೇ ತಳ್ಳಾಡಿ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಮಾಂಸವನ್ನು ಕಡಿಯುವ ಸಲುವಾಗಿ ಕತ್ತಿ ಮುಂತಾದ ಮಾರಕಾಸ್ತ್ರಗಳನ್ನು ಹೊಂದಿದ್ದ ಅವರು ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಅಲ್ಲಿಂದ ಅವರನ್ನು ತಳ್ಳಿ ಎಸ್ಕೇಪ್ ಆಗಿದ್ದಾರೆ. 

ಬಾಳೆಹೊನ್ನೂರು ವೃತ್ತ ನಿರೀಕ್ಷಕರ ಮಾರ್ಗದರ್ಶನದೊಂದಿಗೆ ನಡೆದ ಈ ಕಾರ್ಯಾಚರಣೆಯಲ್ಲಿ ಬಾಳೆಹೊನ್ನೂರು ಪಿಎಸೈ ಹಾಗೂ  ಠಾಣೆಯ ಸಿಬ್ಬಂದಿಗಳು ಭಾಗವಹಿಸಿ ಅಕ್ರಮವಾಗಿ ಗೋವುಗಳನ್ನುಕೊಂದು ಮಾಡುತ್ತಿದ್ದ ಮಾಂಸವನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.


ಈ ಘಟನೆಯ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು ರಾಜ್ಯದಲ್ಲಿ ಗೋಹತ್ಯೆಯ ವಿರುದ್ಧವಾಗಿ ಬಲವಾದ ಕಾನೂನುಗಳು ಜಾರಿಯಲ್ಲಿದ್ದರೂ ಕೂಡ ಈ ರೀತಿಯ ಘಟನೆಗಳು ಮಲೆನಾಡಿನಲ್ಲಿ ನಡೆಯುತ್ತಿರುವುದು ಅತ್ಯಂತ ಖಂಡನೀಯ ಈ ಕುರಿತು ಅಧಿಕಾರಿಗಳು ಹೆಚ್ಚಿನ ಗಮನವಹಿಸಿ ಆರೋಪಿಗಳ ವಿರುದ್ದ ಕಾನೂನಿನ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.