ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಮಲೆನಾಡಿನಲ್ಲಿ ಅನೇಕ ವರ್ಷಗಳಿಂದ ನಿರಂತರವಾಗಿ ಕೃಷಿ ಕಾರ್ಯ ಮಾಡಿಕೊಂಡು ಗೋಮಾಳದ ಜಾಗದಲ್ಲಿ ಮನೆ ಕಟ್ಟಿಕೊಂಡು ಜೀವನ ನಿರ್ವಹಣೆ ಮಾಡುತ್ತಿರುವ ಜನರಿಗೆ ಸೊಪ್ಪಿನ ಬೆಟ್ಟ, ಡೀಮ್ಡ್ ಫಾರೆಸ್ಟ್ ಸೇರಿದಂತೆ ಅನೇಕ ಸಮಸ್ಯೆಗಳು ಹಕ್ಕುಪತ್ರದ ವಿತರಣೆಗೆ ಅಡ್ಡಿಯುಂಟುಮಾಡಿದ್ದು ಈ ಸಮಸ್ಯೆಗೆ ಸರ್ಕಾರ ಶೀಘ್ರವಾಗಿ ಪರಿಹಾರ ಒದಗಿಸಬೇಕೆಂದು ಶಾಸಕ ಟಿ.ಡಿ ರಾಜೇಗೌಡ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಮುಂದಿನ ಐದು ದಿನಗಳ ಕಾಲ ಮಳೆಯಾಗುವ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ
ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರ ಅವಧಿಯಲ್ಲಿ 10 ಎಕರೆಗೂ ಅಧಿಕ ಒತ್ತುವರಿ ಮಾಡಿದ್ದವರು ಲೀಸ್ ನ ಮೇಲೆ ಭೂಮಿ ಪಡೆಯುವಂತಹ ಯೋಜನೆಯನ್ನು ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು ನಂತರದಲ್ಲಿ ಈ ವಿಚಾರವು ವಿಧಾನಸಭೆ, ವಿಧಾನ ಪರಿಷತ್ ನಲ್ಲಿ ಕೂಡ ಅಂಗೀಕೃತಗೊಂಡು ಎಕರೆ ಭೂಮಿಗೆ ಹಣ ನಿಗದಿಪಡಿಸಬೇಕಿತ್ತು ಆದರೆ ಈ ಕುರಿತು ಇನ್ನೂ ಬೆಳವಣಿಗೆಯಾಗಬೇಕಿದೆ ಈ ಕುರಿತಾಗಿ ಸರ್ವಪಕ್ಷ ನಿಯೋಗದ ಬಳಿ ವೈಯುಕ್ತಿಕವಾಗಿ ಶಾಸಕರೇ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.
ಇದಲ್ಲದೇ ಮಲೆನಾಡಿನ ಅಭಿವೃದ್ಧಿಗೆ ಅರಣ್ಯ ಇಲಾಖೆಯ ಕೆಲ ಸಮಸ್ಯೆಗಳು ತಲೆದೋರಿದ್ದು ಒಂದೆಡೆ ಪ್ರಾಣಿಗಳ ಉಪಟಳವಾದರೆ ಇನ್ನೊಂದೆಡೆ ಅರಣ್ಯ ಕಾಯ್ದೆಗಳು ಜನರಿಗೆ ಸಮಸ್ಯೆಯುಂಟುಮಾಡುತ್ತಿದೆ ಈ ಕುರಿತು ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಚಿವರು ಸೂಕ್ತ ನಿರ್ಣಯ ಕೈಗೊಂಡು ಸಮಸ್ಯೆ ಪರಿಹರಿಸಬೇಕು ಎಂದರು.
ಅಭ್ಯರ್ಥಿಗಳು ಈ ಕೆಳಕಂಡ ಲಿಂಕ್ ಮೂಲಕ ರಿಜಿಸ್ಟರ್ ಆಗಬಹುದು : https://forms.gle/PvypXpJerzDzsrfE9
ಭೂಮಿಯನ್ನು ಹೊಂದಿರದ ಬಡ ಕುಟುಂಬಗಳಿಗೆ ಹಕ್ಕುಪತ್ರ ನೀಡಲು ಸರಕಾರ ಅವಕಾಶ ಕಲ್ಪಿಸಬೇಕು. ಸೆಕ್ಷನ್ 4(1) ಅಧಿಸೂಚನೆಗೂ ಮುನ್ನ ಒತ್ತುವರಿ ಮಾಡಿಕೊಂಡವರಿಗೆ 94ಸಿ, 94ಸಿಸಿ ಹಾಗೂ ಬಾಕಿ ಇರುವ ಫಾರಂ 53,57 ರಲ್ಲಿ ಅಕ್ರಮ ಸಕ್ರಮದಡಿ ಹಕ್ಕುಪತ್ರ ಕೊಡಲು ಅವಕಾಶ ಕಲ್ಪಿಸಬೇಕು ಎಂದು ಈ ಸಂದರ್ಭದಲ್ಲಿ ಮಾತನಾಡಿದರು.
ಸರ್ಕಾರ ಈ ಭಾಗದ ರೈತರ ರಕ್ಷಣೆಗೆ ಮುಂದಾಗಬೇಕು ಅವರ ಸಮಸ್ಯೆಗಳಿಗೆ ಪೂರಕವಾದ ಸ್ಪಂದನೆ ಹಾಗೂ ಮುಂದಾಗಬೇಕಾದ ಕಾರ್ಯಗಳ ಕುರಿತು ಸಮಗ್ರ ಚಿಂತನೆ ನಡೆಸಿ ಈ ಭಾಗದ ರೈತರ, ಬಡವರ್ಗದ ಜನರ ಕಷ್ಟಗಳನ್ನು ದೂರಮಾಡಬೇಕು ಎಂದರು.





0 Comments