ರಾಜ್ಯ : ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ವಿಜಯನಗರದ ಹೊಸಪೇಟೆಯಲ್ಲಿ ನಡೆಯುತ್ತಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ತೆರಳುವ ಮಾರ್ಗ ಮಧ್ಯೆ ಅಪಘಾತದಕ್ಕೀಡಾದ ವ್ಯಕ್ತಿಗಳಿಗೆ ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ವಿಜಯನಗರದ ಹೊಸಪೇಟೆ ಗ್ರಾಮೀಣ ಭಾಗದ ಹೊರವಲಯದಲ್ಲಿ ಎರಡು ಕಾರುಗಳ ಮಧ್ಯೆ ಅಪಘಾತ ಸಂಭವಿಸಿದ ಕಾರಣ ಅನೇಕರು ಗಾಯಗೊಂಡಿದ್ದರು ಈ ಸಂದರ್ಭದಲ್ಲಿ ಅದೇ ಮಾರ್ಗದ ಮುಖಾಂತರ ಸಾಗುತ್ತಿದ್ದ ಸಚಿವೆ ಶೋಭಾ ಕರಂದ್ಲಾಜೆ ಅವರು ವಾಹನ ಸವಾರರ ಆರೋಗ್ಯದ ಕುರಿತು ವಿಚಾರಿಸಿ ಅವರಿಗಿದ್ದ ಆಸ್ಪತ್ರೆಯ ಕುರಿತಾದ ಅಗತ್ಯತೆಯನ್ನು ಮನಗಂಡು ಸ್ವತಃ ಅವರೇ ತಮ್ಮ ವಾಹನವನ್ನು ಬಿಟ್ಟು ಕೊಟ್ಟು ಮಾನವೀಯತೆ ಮೆರೆದಿದ್ದಾರೆ.
ರಾಜ್ಯ ಕಾರ್ಯಕಾರಿಣಿಗೆ ಬೇರೊಬ್ಬರ ಸಹಾಯದಿಂದ ಬೈಕ್ ನ ಮೂಲಕ ಸಾಮಾನ್ಯ ವ್ಯಕ್ತಿಗಳಂತೆ ತೆರಳಿರುವ ಸಂಸದೆಯ ಕುರಿತು ಇದೀಗ ಅನೇಕರಿಂದ ಶ್ಲಾಘನೆ ವ್ಯಕ್ತವಾಗಿದ್ದು ಸಹಾಯ ಹಸ್ತವನ್ನು ಚಾಚಿದ ಅವರಿಗೆ ಸ್ಥಳೀಯರೂ ಕೂಡ ವ್ಯಾಪಕವಾದ ಮೆಚ್ಚುಗೆ ವ್ಯಕ್ತಪಡಿಸಿದ್ದು, ತಮ್ಮ ವಾಹನ ಬಿಟ್ಟುಕೊಟ್ಟು ಬೈಕ್ ಮೂಲಕ ತೆರಳಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಸರಕಾರಿ ರಜೆಯ ನಿಮಿತ್ತ ಶೃಂಗೇರಿಗೆ ಹರಿದುಬಂದ ಜನಸಾಗರ :
ಶೃಂಗೇರಿ : ಎರಡು ದಿನಗಳಿಂದ ಪ್ರವಾಸಿಗರ ದಂಡೇ ಶೃಂಗೇರಿಗೆ ಹರಿದು ಬರುತ್ತಿದ್ದು ಅಲ್ಲಲ್ಲಿ ಕೆಲ ಸಮಸ್ಯೆಗಳು ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಎದುರಾಗಿದೆ.
ಇದನ್ನೂ ಓದಿ : ಹರಿಹರಪುರ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನೃಸಿಂಹ ಪೀಠದಲ್ಲಿ ವೈಭವದ ಮಹಾಕುಂಭಾಭಿಷೇಕ
ಪವಿತ್ರ ಧಾರ್ಮಿಕ ಕ್ಷೇತ್ರವಾದ ಶೃಂಗೇರಿಗೆ ರಾಜ್ಯದ ಮೂಲೆ ಮೂಲೆಗಳಿಂದ ಪ್ರವಾಸಿಗರ ದಂಡೇ ಹರಿದು ಬರುತ್ತಿದ್ದು ಪ್ರವಾಸಿಗರಿಗೆ ವಾಹನ ನಿಲ್ಲಿಸಲು ಹಾಗೂ ತಂಗಲು ಲಾಡ್ಜ್ ಗಳ ಸಮಸ್ಯೆ ಎದುರಾಗಿದೆ.
ಅಂಬೇಡ್ಕರ್ ಜಯಂತಿ, ಮಹಾವೀರ ಜಯಂತಿ, ಗುಡ್ ಫ್ರೈಡೇ ನಿಮಿತ್ತ ಸಾಲು ಸಾಲು ರಜೆಗಳು ಒಂದೆಡೆ ದೊರೆತಿದ್ದು ಇನ್ನೊಂದೆಡೆ ಶಾಲಾ ಮಕ್ಕಳಿಗೆ ಬೇಸಿಗೆ ರಜೆ ಆರಂಭವಾದ ಹಿನ್ನೆಲೆ ಅನೇಕ ಸಂಖ್ಯೆಯಲ್ಲಿ ಪ್ರವಾಸಿಗರು ತಮ್ಮ ವಾಹನಗಳ ಮೂಲಕ ಪ್ರಸಿದ್ದ ಧಾರ್ಮಿಕ ಕ್ಷೇತ್ರವಾದ ಶೃಂಗೇರಿಗೆ ಆಗಮಿಸುತ್ತಿದ್ದಾರೆ.
ವಾಹನ ಪಾರ್ಕಿಂಗ್ ಫುಲ್ ರಶ್ :
ಶೃಂಗೇರಿಯ ಗಾಂಧೀ ಮೈದಾನದಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು ಪ್ರವಾಸಿಗರು ತಮ್ಮ ವಾಹನಗಳನ್ನು ದೇವಾಲಯದ ಮುಂಭಾಗದ ರಸ್ತೆಯಾದ ಭಾರತೀ ಬೀದಿಯಲ್ಲಿ ನಿಲುಗಡೆ ಮಾಡುತ್ತಿದ್ದರೆ ಈ ಕಾರಣದಿಂದಾಗಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು ನಡೆದುಕೊಂಡು ಸಾಗುವ ಪಾದಚಾರಿಗಳಿಗೂ ಕೂಡ ಸಮಸ್ಯೆ ಉಂಟಾಗಿದೆ.
ಪಟ್ಟಣದಲ್ಲಿರುವ ಆಂಜನೇಯನ ದೇವಾಲಯಗಳಲ್ಲಿ ರಾಮನವಮಿ, ಹನುಮ ಜಯಂತಿಯ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು ಪ್ರತಿದಿನ ರಾತ್ರಿ ವೇಳೆಯಲ್ಲಿ ಸಾಗುವ ಉತ್ಸವದ ಸಂದರ್ಭದಲ್ಲೂ ಕೂಡ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಇನ್ನು ಮಧ್ಯರಾತ್ರಿಯ ವರೆಗೂ ಕೂಡ ಪ್ರವಾಸಿಗರು ಶೃಂಗೇರಿಗೆ ಆಗಮಿಸುತ್ತಿದ್ದು ಎಲ್ಲೆಡೆ ತಂಗಲು ರೂಂಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಒಂದೆಡೆಯಿಂದ ಇನ್ನೊಂದೆಡೆಗೆ ಸಂಚರಿಸುತ್ತಾ ದಾರಿಯಲ್ಲಿ ಓಡಾಡುವ ಸ್ಥಳೀಯ ವ್ಯಕ್ತಿಗಳಲ್ಲಿ ರೂಂ ಕುರಿತಾಗಿ ವಿಚಾರ ಮಾಡುವುದು ಹೆಚ್ಚಾಗಿ ಕಂಡುಬಂತು.
ಪ್ರವಾಸಿಗರು ಒನ್ ವೆ ಮುಖಾಂತರವೇ ದೇವಾಲಯವನ್ನು ಪ್ರವೇಶ ಮಾಡುತ್ತಿರುವ ಕಾರಣ ಪಟ್ಟಣದ ಭಾರತೀ ಬೀದಿ ಹಾಗೂ ಹಿಂಭಾಗದ ಬೈಪಾಸ್ ರಸ್ತೆಯಲ್ಲೂ ಕೂಡ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿದೆ. ರಸ್ತೆ ಅಗಲೀಕರಣ ಹಾಗೂ ಸಮರ್ಪಕವಾದ ಪಾರ್ಕಿಂಗ್ ವ್ಯವಸ್ಥೆಯ ಮೂಲಕವಷ್ಟೇ ಈ ಸಮಸ್ಯೆಗಳು ಬಗೆಹರಿಯಲಿದೆ.




.jpeg)




.jpeg)

0 Comments