ಮೂಡಿಗೆರೆ : (ನ್ಯೂಸ್ ಮಲ್ನಾಡ್ ವರದಿ) ಎಂ.ಕಾಂ ಉನ್ನತಪದವಿಯಲ್ಲಿ 5 ನೆಯ ರ್ಯಾಂಕ್ ಪಡೆಯುವ ಮೂಲಕ ಮಲೆನಾಡಿನ ಕೀರ್ತಿಯನ್ನು ಹೆಚ್ಚಿಸಿದ್ದಾಳೆ ದೇವನಗೂಲ್ ಗ್ರಾಮದ ರಕ್ಷಾ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ವ್ಯಾಪ್ತಿಯ ದೇವನಗೂಲ್ ಗ್ರಾಮದ ನಿವಾಸಿ ಎಸ್.ವಿ ರಕ್ಷಾ ಇವರು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಎಂ.ಕಾಂ ವಿದ್ಯಾಭ್ಯಾಸ ನಡೆಸಿದ ಅವರು ಶೇಕಡಾ 8.33 ಅಂಕವನ್ನು ಗಳಿಸುವುದರ ಮೂಲಕ ಐದನೇ ರ್ಯಾಂಕ್ ಪಡೆದು ಊರಿಗೆ ಹಾಗೂ ಪೋಷಕರಿಗೆ ಹೆಮ್ಮೆಯನ್ನುಂಟು ಮಾಡಿದ್ದಾರೆ. 

ಓದಿನಲ್ಲಿ ಧೃಢ ನಂಬಿಕೆ ಹಾಗೂ ಆಸಕ್ತಿಯನ್ನಿಟ್ಟುಕ್ಕೊಂಡು ಕಷ್ಟಪಟ್ಟು ಓದಿದ ಫಲವಾಗಿ ರ್ಯಾಂಕ್ ಪಡೆಯಲು ಸಾಧ್ಯವಾಗಿದೆ ಎಂದು ಆಕೆಯ ಪೋಷಕರು ಮಗಳ ಕುರಿತಾಗಿ ತಿಳಿಸಿದ್ದಾರೆ. ರಕ್ಷಾ ತಂದೆ ವೀರಪ್ಪಗೌಡ ಹಾಗೂ ತಾಯಿ ಪುಷ್ಪ ಅವರು ಮಗಳ ಸಾಧನೆಯ ಕುರಿತು ಹರ್ಷ ವ್ಯಕ್ತಪಡಿಸಿದ್ದಾರೆ. 
ಅಭ್ಯರ್ಥಿಗಳು ಈ ಕೆಳಕಂಡ ಲಿಂಕ್ ಮೂಲಕ ರಿಜಿಸ್ಟರ್ ಆಗಬಹುದು : 

ಸ್ಥಳೀಯರು ಹಾಗೂ ಗ್ರಾಮಸ್ಥರು ಯುವತಿಯನ್ನು ಪ್ರಶಂಸಿಸಿದ್ದಾರೆ. ಮಲೆನಾಡು ಭಾಗದ ವಿದ್ಯಾರ್ಥಿಗಳು ಎಲ್ಲಾ ಕ್ಷೇತ್ರಗಳಲ್ಲಿಯೂ ಒಂದಿಲ್ಲೊಂದು ಸಾಧನೆ ಮಾಡುವ ಮೂಲಕ ಮಲೆನಾಡಿನ ಹೆಸರನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಿರುವುದು ಹರ್ಷ ಉಂಟುಮಾಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. 
ತನು ಕೊಟ್ಟಿಗೆಹಾರ, ವರದಿಗಾರರು