ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರುಗಳ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿರಿಸಿ ನಡೆಯುತ್ತಿರುವ ಶ್ರೀ ಕೃಷ್ಣಮೂರ್ತಿ ಅವರಿಗೆ ಭಾರತೀ ತೀರ್ಥ ದಾಸ ಎಂಬ ಬಿರುದನ್ನು ಜಗದ್ಗುರುಗಳು ನೀಡಿ ಸನ್ಮಾನಿಸಿದರು.
ಇದನ್ನೂ ಓದಿ : ಬಾಳೆಹೊನ್ನೂರು : ಅರಣ್ಯ ಪ್ರದೇಶದಲ್ಲಿ ಪ್ರತ್ಯಕ್ಷವಾದ ಎರಡು ಹುಲಿಗಳ ಸಂಚಾರ
ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶೃಂಗೇರಿ ಶಾರದೆಯ ಸನ್ನಿಧಾನದಲ್ಲಿ ಉಭಯ ಜಗದ್ಗುರುಗಳ ಸೇವೆಗಾಗಿ ಸದಾ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಕೃಷ್ಣಮೂರ್ತಿ ಅವರಿಗೆ ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾ ಸ್ವಾಮಿಗಳ ಸಮ್ಮುಖದಲ್ಲಿ ಭಾರತಿ ತೀರ್ಥ ದಾಸ ಎಂಬ ಬಿರುದನ್ನು ನೀಡಿ ಸನ್ಮಾನಿಸಲಾಯಿತು.
ಅಭ್ಯರ್ಥಿಗಳು ಈ ಕೆಳಕಂಡ ಲಿಂಕ್ ಮೂಲಕ ರಿಜಿಸ್ಟರ್ ಆಗಬಹುದು : https://forms.gle/PvypXpJerzDzsrfE9
ಕಳೆದ ಅನೇಕ ವರ್ಷಗಳಿಂದ ಗುರುಗಳ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಗುರುಗಳ ಅಪ್ತಸಹಾಯಕರಾಗಿ ನಿಷ್ಕಲ್ಮಶ ಸೇವೆ ಸಲ್ಲಿಸುತ್ತಿರುವ ಅವರ ಜೀವನ ಅತ್ಯಂತ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಶ್ರೀಗಳು ಆಶೀರ್ವದಿಸಿದರು.
ಮಠದ ಎಲ್ಲಾ ಕಾರ್ಯಗಳಲ್ಲೂ ಸಕ್ರಿಯವಾಗಿ ಭಾಗವಹಿಸಿ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ ಹಾಗೂ ಅದರ ಯಶಸ್ಸಿಗೆ ಅವರು ನೀಡುವ ಸಲಹೆ ಹಾಗೂ ಸೇವೆ ಅಪಾರವಾದುದು. ಅವರು ಶ್ರದ್ದೆಯಿಂದ ನಡೆಸುವ ಗುರುಸೇವೆಯು ಸದಾ ಮುಂದುವರೆಯಲಿ ಎಂದು ಕೃಷ್ಣಮೂರ್ತಿ ಅವರ ಆಪ್ತರು ಹಾಗೂ ಪರಿಚಯಸ್ಥರು ತುಂಬು ಮನಸ್ಸಿನಿಂದ ಹಾರೈಸಿದ್ದಾರೆ.





0 Comments