ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಪ್ರಥಮ ಪಿಯುಸಿ ವಿದ್ಯಾಭ್ಯಾಸ ನಡೆಸುತ್ತಿದ್ದ ವಿದ್ಯಾರ್ಥಿನಿ ಮನೆಯಿಂದ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ : ಮೂಡಿಗೆರೆ : ಉನ್ನತ ಪದವಿ ಎಂ.ಕಾಂ ನಲ್ಲಿ ಐದನೇ ಸ್ಥಾನ ಪಡೆದು ಮಲೆನಾಡಿಗೆ ಕೀರ್ತಿ ತಂದ ವಿದ್ಯಾರ್ಥಿನಿ
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ನೆಮ್ಮಾರು ಗ್ರಾಮದ ನಿವಾಸಿಯಾದ ತೇಜಸ್ವಿನಿ ಎಂಬ ಪ್ರಥಮ ಪಿಯುಸಿ ವಿದ್ಯಾಭ್ಯಾಸ ನಡೆಸುತ್ತಿದ್ದ ವಿದ್ಯಾರ್ಥಿನಿ ಮನೆಯಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾಳೆ. ಕಳೆದ ಕೆಲ ದಿನಗಳ ಹಿಂದಷ್ಟೇ ಪರೀಕ್ಷೆ ಮುಗಿದಿದ್ದು ಎಂದಿನಂತೆ ತಮ್ಮನೊಂದಿಗೆ ಮನೆಯಲ್ಲಿದ್ದ ಯುವತಿ, ಪಾತ್ರೆ ತೊಳೆಯುವ ಸಲುವಾಗಿ ಗ್ರಾವಿಟಿ ನೀರು ನೋಡಿಕೊಂಡು ಬರುತ್ತೇನೆಂದು ಹೋದವಳು ಮನೆಗೆ ಹಿಂದಿರುಗಿಲ್ಲ ಎಂದು ಪೋಷಕರು ತಿಳಿಸಿದ್ದಾರೆ.
ಮಧ್ಯಾಹ್ನ ತೆರಳಿದ ಯುವತಿ ಸಂಜೆಯಾದರೂ ಬಾರದಿರುವುದನ್ನು ಕಂಡು ಪೋಷಕರು ಹಾಗೂ ಸ್ಥಳೀಯರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದ್ದಾರೆ ಆದರೂ ಯುವತಿ ಸಿಗದ ಕಾರಣ ಶೃಂಗೇರಿ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ.
ನಾಪತ್ತೆಯಾಗಿರುವ ಮಗಳ ಸುಳಿವು ದೊರೆತಲ್ಲಿ ತಿಳಿಸುವಂತೆ ಪೋಷಕರು ಕೋರಿದ್ದಾರೆ. ಘಟನೆಯ ಕುರಿತಾಗಿ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಈ ಸಂಬಂಧ ತನಿಖೆ ಆರಂಭಿಸಿದ್ದಾರೆ.
ಅಭ್ಯರ್ಥಿಗಳು ಈ ಕೆಳಕಂಡ ಲಿಂಕ್ ಮೂಲಕ ರಿಜಿಸ್ಟರ್ ಆಗಬಹುದು : https://forms.gle/PvypXpJerzDzsrfE9
ಯುವತಿ ನಾಲ್ಕು ಅಡಿ ಎತ್ತರವಿದ್ದು, ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಬಟ್ಟೆ ಧರಿಸಿರುತ್ತಾಳೆ ಹಾಗೂ ಬಿಳಿ ಮೈಬಣ್ಣವನ್ನು ಹೊಂದಿರುತ್ತಾಳೆ ಎಂದು ಪೋಷಕರು ತಿಳಿಸಿದ್ದು ಯುವತಿಯು ಕಂಡು ಬಂದಲ್ಲಿ 8277571672 ಈ ನಂಬರ್ ಗೆ ಕರೆ ಮಾಡಿ ತಿಳಿಸಬೇಕೆಂದು ಕೋರಿದ್ದಾರೆ.





0 Comments