ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಶಿವಮೊಗ್ಗದ ಸೋಗಾನೆ ಸಮೀಪದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಹೆಸರು ಇಡಲು ನಿರ್ಧರಿಸಿರುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯಾರ ಹೆಸರಿಡಬೇಕು ಎಂದು ಚರ್ಚೆಗೆ ಬಂದಾಗ ಬಹಳಷ್ಟು ಹೆಸರು ಮುನ್ನಲೆಗೆ ಬಂದಿದ್ದವು. ಮೊದಲ ರಾಷ್ಟ್ರಕವಿ ಕುವೆಂಪು, ಕಡಿದಾಳ್ ಮಂಜಪ್ಪ, ಬಂಗಾರಪ್ಪ ಸೇರಿದಂತೆ ಇನ್ನೂ ಅನೇಕರ ಹೆಸರುಗಳು ಕೇಳಿಬಂದಿದ್ದವು.
ಇದನ್ನೂ ಓದಿ : ಸಹಕಾರ ಸಾರಿಗೆ ಸಂಸ್ಥೆಯನ್ನು ಪುನಾರಾರಂಭಿಸುವಂತೆ ಮುಖ್ಯಮಂತ್ರಿಗಳಿಗೆ ಮಜ್ದೂರ್ ಸಂಘ ಹಾಗೂ ಸಾರಿಗೆ ಕಾರ್ಮಿಕರಿಂದ ಮನವಿ
ಶಿವಮೊಗ್ಗ ಸಹ್ಯಾದ್ರಿ ತಪ್ಪಲಿನಲ್ಲಿ ಇರುವುದರಿಂದ ಸಹ್ಯಾದ್ರಿ ವಿಮಾನ ನಿಲ್ದಾಣ ಎಂಬ ಹೆಸರನ್ನು ಇಡುವಂತೆ ಸಹ ಕೂಗು ಕೇಳಿತ್ತು. ಇದೆಲ್ಲದರ ಜೊತೆಗೆ ಯಡಿಯೂರಪ್ಪನವರ ಹೆಸರು ಇಡಬೇಕೆಂಬ ಕೂಗು ಸಹ ಕೇಳಿಬಂದಿತ್ತು. ಈ ಗೊಂದಲಕ್ಕೆ ಸಿಎಂ ಇದೀಗ ಸಿಎಂ ಬಸವರಾಜ ಬೊಮ್ಮಾಯಿ ತೆರೆ ಎಳೆದಿದ್ದಾರೆ.
ಆದರೆ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆ, ಟ್ರೋಲ್ ಮಾಡಲಾಗುತ್ತಿದ್ದು ಈ ಹಿಂದೆ ಕಾಂಗ್ರೆಸ್ ಹಲವು ಯೋಜನೆಗಳಿಗೆ ತಮ್ಮ ನಾಯಕರ ಹೆಸರುಗಳನ್ನು ಇಟ್ಟಿದ್ದರು, ಕಾಂಗ್ರೆಸ್ ವ್ಯಕ್ಯಿಪೂಜೆ ಮಾಡುತ್ತದೆ ಎಂದು ಬಿಜೆಪಿ ಸಾಕಷ್ಟು ಟೀಕೆ ಮಾಡಿಕೊಂಡೇ ಬಂದಿತ್ತು. ಆದರೆ ಇದೀಗ ಯಡಿಯೂರಪ್ಪ ಹೆಸರನ್ನು ಏರ್ಪೋರ್ಟ್ ಗೆ ಇಡುವುದು ವ್ಯಕ್ತಿಪೂಜೆ ಅಲ್ಲವೇ ಎಂದು ಟೀಕೆ ವ್ಯಕ್ತವಾಗುತ್ತಿದೆ.
ಅದರಲ್ಲಿ ಕೆಲವು:
ಯಡಿಯೂರಪ್ಪ ಹೆಸರನ್ನು ಅವರು ಇದ್ದ ಜೈಲಿಗೆ ಇಡಿ: ಯಡಿಯೂರಪ್ಪ ಹೆಸರನ್ನು ಅವರು ಭ್ರಷ್ಟಾಚಾರದ ಆರೋಪದ ಮೇಲೆ ಬಂಧನವಾದಾಗ ಇದ್ದ ಜೈಲಿಗೆ ಇಡುವುದು ಸೂಕ್ತ, ಏರ್ಪೋರ್ಟ್ ಗೆ ಬೇಡ ಎಂಬ ಟ್ರೋಲ್ ಮಾಡಲಾಗಿದೆ.
ಅಪ್ಪ ಮಕ್ಕಳ ಹೆಸರನ್ನು ಒಂದೊಂದಕ್ಕೆ ಇಡಿ: ಏರ್ಪೋರ್ಟ್ ಗೆ ಯಡಿಯೂರಪ್ಪ, ಬಸ್ ನಿಲ್ದಾಣಕ್ಕೆ ಈಶ್ವರಪ್ಪ, ರೈಲ್ವೇ ಸ್ಟೇಷನ್ ಗೆ ಯಡಿಯೂರಪ್ಪ ಮಗ ವಿಜಯೇಂದ್ರ ಹಾಗೂ ಈಶ್ವರಪ್ಪ ಮಗ ಕಾಂತೇಶ್ ಹೆಸರಿಡಿ
ಎಲ್ಲರೂ ಕಳ್ಳರು ಹಾಗಾಗಿ ಯಾರೂ ಪ್ರಶ್ನೆ ಮಾಡುವುದಿಲ್ಲ:
ಶಿವಮೊಗ್ಗ ವಿಮಾನ ನಿಲ್ದಾಣದ ಹೆಸರಿನ ಬಗ್ಗೆ ಯಾವುದೇ ರಾಜಕಾರಣಿಗಳು ಯಡಿಯೂರಪ್ಪನ ನವರ ಹೆಸರು ಇಡಬಾರದು ಎಂದು ಹೋರಾಟ ಮಾಡುವುದಿಲ್ಲ ಯಾಕೆ ಗೊತ್ತಾ ಎಲ್ಲಾ ರಾಜಕಾರಣಿಗಳು ಒಂದೇ ಕರ್ನಾಟಕದ ಕಳ್ಳರು ಅದಕ್ಕೆ.
ಸಮರ್ಥನೆ: ಯಡಿಯೂರಪ್ಪ ಏರ್ ಪೋರ್ಟ್, ಕಾಂಗ್ರೆಸ್ ನವ್ರು ಮಾಡಿದ್ರೆ ಚಮಚ. ನಾವು ಮಾಡೋದೆಲ್ಲ ಸಾಚಾ.(ಈ ತರ ಸಮರ್ಥನೆ ಮಾಡೋಕೆ ಬರೋರು ಲುಚ್ಛಗಳು) ಇನ್ನೂ ಅನೇಕ ಟೀಕೆ ಹಾಗೂ ಟ್ರೋಲ್ ವ್ಯಕ್ತವಾಗುತ್ತಿದೆ


.jpeg)


.jpeg)
.jpeg)
.jpeg)

.jpeg)
.jpeg)
.jpeg)
.jpeg)

0 Comments