ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಮನೆಯಲ್ಲಿರಿಸಿದ್ದ ಚಿನ್ನಾಭರಣ ಹಾಗೂ ನಗದನ್ನು ಕಳ್ಳತನ ಮಾಡಿದ್ದ ಇಬ್ಬರು ಚಾಲಾಕಿ ಕಳ್ಳರನ್ನು ಪತ್ತೆಹಚ್ಚಿ ಸೆರೆ ಹಿಡಿಯುವಲ್ಲಿ ಅಜ್ಜಂಪುರ ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಸಮೀಪದ ಹೂಲಿಹಳ್ಳಿ ಗ್ರಾಮದ ಮನೆಯೊಂದರಲ್ಲಿದ್ದ ಚಿನ್ನಾಭರಣ ಹಾಗೂ ಹಣವನ್ನು ಎಗರಿಸಿದ್ದ ಖದೀಮರನ್ನು ಕೇವಲ ಎರಡು ದಿನಗಳಲ್ಲಿ ಪತ್ತೆ ಹಚ್ಚುವಲ್ಲಿ ಅಜ್ಜಂಪುರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
6.23 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಮನೆಯಿಂದ ಕದ್ದಿದ್ದ ಕಳ್ಳರನ್ನು ಸೆರೆಹಿಡಿಯುವಲ್ಲಿ ಕಾರ್ಯಾಚರಣೆ ನಡೆಸಿ ಖದೀಮರು ಹೊತ್ತೊಯ್ದಿದ್ದ ಆಭರಣಗಳನ್ನು ಹಾಗೂ ನಗದನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ನಡೆಸಿದ ಕಾರ್ಯಚರಣೆ ಯಶಸ್ವಿಯಾಗಿದೆ.
ಕೇವಲ 48 ಗಂಟೆಯೊಳಗೆ 6.23 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಆರೋಪಿಗಳ ಸಮೇತ ಸೆರೆಹಿಡಿದ ಪೊಲೀಸ್ ಅಧಿಕಾರಿಗಳಿಗೆ ಮೇಲಧಿಕಾರಿಗಳು ಶ್ಲಾಘಿಸಿದ್ದಾರೆ. ಕಳ್ಳರ ಈ ಕೃತ್ಯದ ಕುರಿತಾಗಿ ಹಾಗೂ ಅವರು ನಡೆಸಿದ ಬೇರೆ ಕೃತ್ಯಗಳ ಕುರಿತಾಗಿನ ಮಾಹಿತಿ ಪೊಲೀಸರ ಸಂಪೂರ್ಣ ತನಿಖೆಯ ನಂತರವಷ್ಟೇ ತಿಳಿಯಬೇಕಿದೆ. ಈ ಕಾರ್ಯಾಚರಣೆಯಲ್ಲಿ ಅಜ್ಜಂಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಹಾಗೂ ಠಾಣಾ ಸಿಬ್ಬಂದಿಗಳು ಭಾಗವಹಿಸಿ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದ್ದಾರೆ.
ಅತಿಯಾದ ಪರಿಸರ ಮಾಲಿನ್ಯ, ತುಂಗಾ ನದಿ ನೀರು ಕುಡಿಯಲು ಯೋಗ್ಯವಲ್ಲ !
ಶೃಂಗೇರಿ : ಪ್ರಾಕೃತಿಕ ಸೊಬಗನ್ನು ಹೊಂದಿರುವ ಮಲೆನಾಡಿನಲ್ಲಿ ಸ್ವಚ್ಛಂದವಾಗಿ ಎಲ್ಲೆಡೆ ಹರಿಯುತ್ತಾ ತನ್ನದೇ ಆದ ಪಾವಿತ್ರ್ಯತೆಯನ್ನು ಹೊಂದಿದ್ದ ತುಂಗಾ ನದಿಯ ನೀರು ಅತಿಯಾದ ಪರಿಸರ ಮಾಲಿನ್ಯದಿಂದಾಗಿ ಇಂದು ಕುಡಿಯಲು ಸಾಧ್ಯವಾಗದ ಸ್ಥಿತಿಗೆ ತಲುಪಿದೆ.
ಇದನ್ನೂ ಓದಿ : ಚಿಕ್ಕಮಗಳೂರು : ಅರಣ್ಯ ನಾಶ ಮಾಡುವವರ ಜೀವನ ನಾಶವಾಗಲೆಂದು ಪುರದಮ್ಮ ದೇವರಲ್ಲಿ ಹರಕೆ ಹೊತ್ತ ಗ್ರಾಮಸ್ಥರು
ಅತಿಯಾದ ಮಾಲಿನ್ಯ, ಲಾಡ್ಜ್, ಚರಂಡಿ ಸೇರಿದಂತೆ ಅನೇಕ ಸ್ಥಳಗಳ ಕಲುಷಿತ ನೀರು, ಮಾಂಸದಂಗಡಿಗಳ ತ್ಯಾಜ್ಯ, ಶೌಚಾಲಯಗಳ ನೀರು ನೇರವಾಗಿ ತುಂಗಾ ನದಿಗೆ ಸೇರಿ ಇಂದು ನೀರು ಕುಡಿಯಲು ಸಾಧ್ಯವಾಗದ ಸ್ಥಿತಿಗೆ ತಲುಪಿದೆ. ಚಿಕ್ಕಮಗಳೂರು ಜಿಲ್ಲೆಯ ಪವಿತ್ರ ಧಾರ್ಮಿಕ ಕ್ಷೇತ್ರವಾದ ಶೃಂಗೇರಿಗೆ ಸಹಸ್ರಾರು ಸಂಖ್ಯೆಯಲ್ಲಿ ಪ್ರತಿದಿನ ಪ್ರವಾಸಿಗರು ಆಗಮಿಸುತ್ತಾರೆ, ಅವರು ಗಾಂಧೀ ಮೈದಾನದ ಸುತ್ತ ಮುತ್ತಲಿನ ಸ್ಥಳದಲ್ಲಿ ಗಲೀಜು ಮಾಡುವುದು ಕೂಡ ನದಿಯು ಕಲುಷಿತಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
ಅನೇಕ ಬಾರಿ ಊರಿನ ಬಗ್ಗೆ ಕಾಳಜಿ ಹೊಂದಿರುವವರು, ಸಾಮಾಜಿಕ ಕಾರ್ಯಕರ್ತರು ಈ ಕುರಿತಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪತ್ರಮುಖೇನ ಸಮಸ್ಯೆಯ ಕುರಿತು ತಿಳಿಸಿದ್ದರೂ ಕೂಡ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ನದಿಯ ಉಳಿವಿಗಾಗಿ ಶೃಂಗೇರಿಯಲ್ಲಿ ತುಂಗಾ ನದಿ ಉಳಿಸಿ ಎಂಬ ಸಮಿತಿಯು ಕಾರ್ಯರೂಪಕ್ಕೆ ಬಂದು ಅನೇಕ ಸಭೆಗಳನ್ನು ನಡೆಸಿ, ಸಾರ್ವಜನಿಕರ ಅಭಿಪ್ರಾಯಗಳನ್ನು ಸಂಗ್ರಹಿಸಿ ಅಪವಿತ್ರಗೊಂಡಿರುವ ನದಿಯನ್ನು ಮಾಲಿನ್ಯಮುಕ್ತ ಮಾಡುವ ಸಲುವಾಗಿ ಕಾರ್ಯಾರಂಭಿಸಿದೆ. ಈ ಸಮಿತಿಯು ಪಟ್ಟಣದ ನಾಲ್ಕು ಜಾಗದಲ್ಲಿ ನೀರಿನ ಮಾದರಿಯನ್ನು ಸಂಗ್ರಹಣೆ ಮಾಡಿ ವರದಿಗಾಗಿ ಪರೀಕ್ಷಾಲಯಕ್ಕೆ ಕಳುಹಿಸಿತ್ತು.
ನೀರಿನ ಪರಿಶೀಲನೆಯ ನಂತರದಲ್ಲಿ ಬಂದ ವರದಿಯ ಪ್ರಕಾರ ಶೃಂಗೇರಿಯ ಕಟ್ಟೆಬಾಗಿಲು ಬೈಪಾಸ್ ರಸ್ತೆ ಬಳಿಯಲ್ಲಿ ಹರಿಯುವ ನೀರು ಕುಡಿಯಲು ಯೋಗ್ಯವಾಗಿಲ್ಲ ಹಾಗೂ ಮೆಣಸೆ ಸೇತುವೆಯ ಕೆಳಭಾಗದ ನೀರು ಕೂಡ ಕುಡಿಯಲು ಯೋಗ್ಯವಾಗಿಲ್ಲ ಎಂದು ಶೃಂಗೇರಿ ತಾಲೂಕಿನ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ನೀರಿನ ಮಾದರಿಯ ಆಧಾರದ ಮೇಲೆ ತಿಳಿಸಿದೆ.
ದಟ್ಟ ಅರಣ್ಯ ಪ್ರದೇಶದ ಸುತ್ತಮುತ್ತಲಿನ ಪ್ರದೇಶದಿಂದ ಔಷಧೀಯ ಗುಣಗಳನ್ನು ಹೊಂದಿ ಹರಿಯುವ ತುಂಗಾ ನದಿಯ ನೀರು ಸಿಹಿ ಹಾಗೂ ಸತ್ವಯುತವಾದದ್ದು ಆದರೆ ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಪರಿಸರಮಾಲಿನ್ಯ, ಹಲವೆಡೆಯ ಕಲುಷಿತ ನೀರನ್ನು ನೇರವಾಗಿ ಹೊಳೆಗೆ ಬಿಡುವುದು ಸೇರಿದಂತೆ ಅನೇಕ ರೀತಿಯ ಮಾಲಿನ್ಯದಿಂದ ನದಿಯು ಇಂದು ಈ ಸ್ಥಿತಿಯನ್ನು ಬಂದು ತಲುಪಿದೆ.
ತಮ್ಮ ಜವಾಬ್ದಾರಿಯನ್ನು ಮರೆತಿರುವ ಜನರು ಇನ್ನಾದರೂ ಎಚ್ಚೆತ್ತು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಡುವಲ್ಲಿ ಗಮನಹರಿಸಬೇಕು. ನದಿಗೆ ಎಸೆಯುತ್ತಿರುವ ಪ್ಲಾಸ್ಟಿಕ್ ಕವರ್ ಗಳಿಗೆ ಇನ್ನಾದರೂ ಬ್ರೇಕ್ ಬೀಳಬೇಕಿದೆ. ಮಲೆನಾಡು ಸೇರಿದಂತೆ ವಿವಿಧೆಡೆಯ ಜನರ ಮತ್ತು ಜೀವಸಂಕುಲದ ಜೀವನಾಡಿಯಾಗಿರುವ ತುಂಗೆಯ ಉಳಿವಿಗೆ ಹಾಗೂ ಪರಿಶುದ್ಧತೆಗೆ ಜನರು ಸಹಕರಿಸಬೇಕು.

.jpeg)
.jpeg)
.jpeg)
.jpeg)

.jpeg)

.jpeg)
.jpeg)
.jpeg)

0 Comments