ತರೀಕೆರೆ : (ನ್ಯೂಸ್ ಮಲ್ನಾಡ್ ವರದಿ) ಅಕ್ರಮವಾಗಿ ಜೂಜಾಟದಲ್ಲಿ ತೊಡಗಿದ್ದ 10 ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಅವರ ತನಿಖೆ ಆರಂಭಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಎಂಸಿ ಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಜೂಜಾಟದಲ್ಲಿ ತೊಡಗಿದ್ದ 10 ಜನರನ್ನು ಪಿಎಸ್ಐ CEN ಕ್ರೈಂ ಪೊಲೀಸ್ ಠಾಣೆ ಅವರೊಂದಿಗೆ ಠಾಣೆಯ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ವಶಕ್ಕೆ ಪಡೆದ ಪೊಲೀಸರು ಅವರ ಬಳಿ ಇದ್ದ 15,250 ರೂಪಾಯಿ ನಗದನ್ನು ವಶಕ್ಕೆ ಪಡೆದುಕೊಂಡು ತನಿಖೆ ಆರಂಭಿಸಿದ್ದಾರೆ. ಈ ಕುರಿತು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿರುವ ಪೊಲೀಸರು ಈ ರೀತಿಯ ಜೂಜಾಟದಲ್ಲಿ ಯಾರು ಕೂಡ ಭಾಗಿಯಾದದಂತೆ ತಿಳಿಸಿದ್ದಾರೆ ಹಾಗೂ ಈ ರೀತಿಯ ಚಟುವಟಿಕೆಗಳು ಕಂಡುಬಂದಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದು ಸೂಕ್ತ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸ್ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿ ವರ್ಗದವರನ್ನು ಇಲಾಖೆಯ ಅಧಿಕಾರಿಗಳು ಪ್ರಶಂಸಿಸಿದ್ದು, ಘಟನೆಯ ಕುರಿತು ತರಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಬಾಳೆಹೊನ್ನೂರು : ಶೃಂಗೇರಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಬೆಂಬಲಿಗರು ಗಬ್ಬಾನೆ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡುವಂತೆ ಪರೋಕ್ಷವಾಗಿ ಡಿ.ಎನ್ ಜೀವರಾಜ್ ಅವರಿಗೆ ಪ್ರವೀಣ್ ಖಾಂಡ್ಯ ಪಂಥಾಹ್ವಾನ ನೀಡಿದ್ದಾರೆ.

ಈ ಕುರಿತು ಬಾಳೆಹೊನ್ನೂರಿನಲ್ಲಿ ಮಾತನಾಡಿರುವ ಅವರು ಮೇ 28 ನೇ ತಾರೀಖಿನಂದು ಗಬ್ಬಾನೆಯ ದೇವಸ್ಥಾನಕ್ಕೆ ಮಾಜಿ ಶಾಸಕರು ಹಾಗೂ ಬೆಂಬಲಿಗರು ಬಂದು ನಾನು ಕಳೆದ ಚುನಾವಣೆಯಲ್ಲಿ ಹಣ ತೆಗೆದುಕೊಂಡಿರುವುದಾಗಿ ನಡೆಸುತ್ತಿರುವ ಆರೋಪವನ್ನು ಸತ್ಯ ಎಂದು ಪ್ರಮಾಣ ಮಾಡಬೇಕೆಂದು ಪಂಥಾಹ್ವಾನ ನೀಡಿದ್ದಾರೆ.

2018 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 3 ಕೋಟಿ ರೂ ಹಣ ಹಾಗೂ 2023 ರಲ್ಲಿ ನಡೆಯುವ ಚುನಾವಣೆಯಲ್ಲಿ ಪ್ರವೀಣ್ ಖಾಂಡ್ಯ ಹಾಗೂ ಇತರರು ಕಾಂಗ್ರೆಸ್ ಪಕ್ಷದಿಂದ ಹಣ ಪಡೆದು ಬಂಡಾಯ ಚಟುವಟಿಕೆ ಮಾಡುತ್ತಿದ್ದಾರೆ ಎಂದು ಸುಳ್ಳು ಆರೋಪ ಮಾಡುತ್ತಿರುವ ಮಾಜಿ ಶಾಸಕರು ಹಾಗೂ ಅವರ ತಂಡದ ನಾಲ್ವರು ದೇವರ ಮುಂದೆ ಈ ಕುರಿತು ಆಣೆ ಮಾಡುವಂತೆ ದೇವಸ್ಥಾನಕ್ಕೆ ಕರೆದಿದ್ದಾರೆ.

ಎನ್. ಆರ್.ಪುರದ ನಾಯಕ ಹಾಗೂ ಆತನ ಸಹಚರರು ಭೂತರಾಯನ ಮುಂದೆ ಬಂದು ಆಣೆ ಪ್ರಮಾಣ ಮಾಡಲಿ ಯಾರು ತಪ್ಪೆಸಗಿದ್ದಾರೆ ಅವರಿಗೆ ದೇವರೇ ಸರಿಯಾದ ಶಿಕ್ಷೆ ನೀಡಲಿ ಎಂದು ನಾವು ಅಂದೇ ದೇವರಲ್ಲಿ ಹರಕೆ ಹೇಳಿಕೊಳ್ಳುತ್ತೇವೆ ಎಂದು  ಸವಾಲೆಸೆದಿದ್ದಾರೆ.

ಏನಿದು ವಿವಾದ: ಕೆಲ ದಿನಗಳ ಹಿಂದೆ ಹಿಂದೂ ಬ್ರಿಗೇಡ್ ಸಂಘಟನೆ ಪತ್ರಿಕಾಗೋಷ್ಠಿ ನಡೆಸಿ ಶೃಂಗೇರಿ ಕ್ಷೇತ್ರದಲ್ಲಿ ಹಿಂದೂ ನಾಯಕರ ಅವಶ್ಯಕತೆ ಇದೆ, ಆದಕಾರಣ ಹಿಂದೂ ಸಂಘಟನೆಗಳಿಗೆ ಬೆಂಬಲವಾಗಿ ನಿಲ್ಲುವ ಹಿಂದೂ ನಾಯಕರನ್ನು ಆರಿಸುವ ಬಗ್ಗೆ ಹೇಳಿಕೆ ನೀಡಿದ್ದರು.

ಆ ನಂತರ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಕಲ್ಮರುಡಪ್ಪ ಹಾಗೂ ಶೃಂಗೇರಿ ಕ್ಷೇತ್ರದ ಬಿಜೆಪಿ ಮುಖಂಡರು ಹಿಂದೂ ಬ್ರಿಗೇಡ್ ಎಂಬುದು ಶೃಂಗೇರಿಯಲ್ಲಿ ಬಿಜೆಪಿ ಹಣಿಯಲು ಸಂಚು ರೂಪಿಸಿ ಹುಟ್ಟಿರುವ ಕಾಂಗ್ರೆಸ್ ನ ಬಿ ಟೀಂ ಎಂದೂ, ಕಳೆದ ಚುನಾವಣೆಯಲ್ಲಿ ಪ್ರವೀಣ್ ಖಾಂಡ್ಯ ಕಾಂಗ್ರೆಸ್ ನ ಟಿ.ಡಿ ರಾಜೇಗೌಡರಿಂದ ಹಣ ಪಡೆದು ಚುನಾವಣೆಯಲ್ಲಿ ಬಂಡಾಯ ನಿಂತಿದ್ದಾಗಿಯೂ ಆರೋಪಿಸಿದ್ದರು.