ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರಿನಲ್ಲಿ ಅಕ್ರಮವಾಗಿ ಜೂಜಾಟದಲ್ಲಿ ತೊಡಗಿದ್ದ 10 ಜನರನ್ನು ವಶಕ್ಕೆ ಪಡೆದು ಅವರ ಬಳಿಯಿದ್ದ ನಗದನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಚಿಕ್ಕಮಗಳೂರಿನ ಪೊಲೀಸರು ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ : ಶೃಂಗೇರಿ : ಬಸ್ಟಾಂಡ್ ಸಮೀಪ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವಪತ್ತೆ
ಚಿಕ್ಕಮಗಳೂರು ನಗರದ ಕಲ್ಲುದೊಡ್ಡಿ ಹಾಗೂ ಸನ್ನೇನಹಳ್ಳಿ ವ್ಯಾಪ್ತಿಯ ಪೊಲೀಸರು ಪ್ರತ್ಯೇಕ ದಾಳಿ ನಡೆಸಿ ಅಕ್ರಮವಾಗಿ ಜೂಜಾಟದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸರ ಈ ಪ್ರತ್ಯೇಕ ದಾಳಿಯಲ್ಲಿ ಒಟ್ಟು 10 ಜನ ಆರೋಪಿಗಳು ಸೆರೆ ಸಿಕ್ಕಿದ್ದು ಬಂಧಿತ ಆರೋಪಿಗಳಿಂದ 11,330 ರೂಪಾಯಿ ನಗದನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆಯ ಕುರಿತಂತೆ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು ಪೊಲೀಸರು ಆರೋಪಿಗಳ ತನಿಖೆಯನ್ನು ಮುಂದುವರಿಸಿದ್ದಾರೆ. ಹಾಗೂ ಈ ರೀತಿಯ ಚಟುವಟಿಕೆಗಳಲ್ಲಿ ಸಾರ್ವಜನಿಕರು ಭಾಗಿಯಾಗದಂತೆ ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆಯೂ ಕೂಡ ಕಾಫಿನಾಡಿನ ಪೊಲೀಸರು ಚಿಕ್ಕಮಗಳೂರು ಜಿಲ್ಲೆಯ ವಿವಿಧ ಕಡೆಗಳಲ್ಲಿ ಪ್ರತ್ಯೇಕ ದಾಳಿಗಳನ್ನು ನಡೆಸಿ ಆರೋಪಿಗಳನ್ನು ಸೆರೆ ಹಿಡಿದಿದ್ದರು ಹಾಗೂ ಅವರಿಂದ ನಗದನ್ನು ವಶಕ್ಕೆ ಪಡೆದಿದ್ದರು.
ಬಸ್ ಇಳಿಯಲು ತಡವಾದ ಕಾರಣಕ್ಕೆ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಕೆ.ಎಸ್.ಆರ್.ಟಿ.ಸಿ ಬಸ್ ನಿರ್ವಾಹಕ
ಕೊಪ್ಪ / ಬೆಂಗಳೂರು : ತನ್ನ ಪುಟ್ಟ ಮಕ್ಕಳೊಂದಿಗೆ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ತೆರಳುತ್ತಿದ್ದ ಮಹಿಳೆಯ ಮೇಲೆ ಬಸ್ ಕಂಡಕ್ಟರ್ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಿಂದ ಬೆಂಗಳೂರಿನ ಯಶವಂತಪುರಕ್ಕೆ ಕೆ.ಎಸ್. ಆರ್.ಟಿ.ಸಿ ಬಸ್ಸಿನ ಮೂಲಕ ತೆರಳುತ್ತಿದ್ದ ಸಿರಾಜ್ ಉನ್ನೀಸಾ ಎಂಬ ಮಹಿಳೆಯ ಮೇಲೆ ಬೆಳಗ್ಗಿನ ಜಾವ ಬಸ್ ನಿರ್ವಾಹ ರವಿಕುಮಾರ್ ಹಲ್ಲೆ ಮಾಡಿದ್ದಾರೆ ಎಂಬ ಆರೋಪವನ್ನು ಹಲ್ಲೆಗೀಡಾದ ಮಹಿಳೆ ಮಾಡಿದ್ದಾರೆ.
ಮಹಿಳೆ ಬಸ್ಸಿನಿಂದ ಇಳಿಯುವ ಸಂದರ್ಭದಲ್ಲಿ ಆಕೆಯ ಬಳಿ ಲಗೇಜ್ ಹಾಗೂ ಪುಟ್ಟ ಮಕ್ಕಳು ಮಲಗಿದ್ದ ಕಾರಣ ಮತ್ತು ಸೀಟಿನ ಕೆಳಭಾಗದಲ್ಲಿ ಅವರ ಚಪ್ಪಲಿಗಳು ಸಿಲುಕಿಕೊಂಡಿದ್ದರಿಂದ ಇಳಿಯುವುದು ತಡವಾಗಿದೆ ಈ ಸಂದರ್ಭದಲ್ಲಿ ಕಂಡಕ್ಟರ್ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂಬುದಾಗಿ ನೊಂದ ಮಹಿಳೆ ಆರೋಪಿಸಿದ್ದಾರೆ.
ಬಸ್ಸಿನಿಂದ ಕೆಳಗೆ ಇಳಿದು ತಮ್ಮ ಬಸ್ಸಿನ ಡಿಕ್ಕಿಯಲ್ಲಿಟ್ಟಿದ್ದ ತಮ್ಮ ಲಗೇಜ್ ನ್ನು ಪಡೆದುಕೊಳ್ಳುವ ವೇಳೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಸ್ಸಿನ ಮೇಲೆ ಹತ್ತಿ ಬೂಟು ಕಾಲಿನಿಂದ ಆಕೆಯ ಹೊಟ್ಟೆಗೆ ಒದ್ದು ಆಕೆಯ ಮುಖಕ್ಕೂ ಒದ್ದಿದ್ದಾನೆ ಎಂದು ಹಲ್ಲೆಗೀಡಾದ ಮಹಿಳೆ ತಿಳಿಸಿದ್ದಾರೆ.
ಘಟನೆ ನಡೆಯುತ್ತಿದ್ದಂತೆಯೆ ಆಟೋ ಚಾಲಕರು, ಹೂ ಮಾರುವವರು ಸ್ಥಳಕ್ಕೆ ಬಂದು ಬಸ್ಸನ್ನು ಬದಿಗೆ ಹಾಕಿಸಿದರು ಈ ಸಂದರ್ಭದಲ್ಲಿ ನಾನು ನಿರ್ವಾಹಕನ ಬಳಿಯಿದ್ದ ಮಿಷನ್ ಅನ್ನು ಕಿತ್ತುಕೊಂಡೆ ನಂತರದಲ್ಲಿ ಪೊಲೀಸರು ಆಗಮಿಸಿದಾಗ ಅವರಿಗೆ ನೀಡಿರುವುದಾಗಿ ತಿಳಿಸಿದರು.
ಒಬ್ಬಂಟಿಯಾಗಿ ಮಹಿಳೆಯರು ಪ್ರಯಾಣ ನಡೆಸುವುದು ಸುರಕ್ಷಿತವೇ ಎಂಬ ಪ್ರಶ್ನೆ :
ಇಂತಹ ಒರಟಾಗಿ ವ್ಯವಹರಿಸುವ, ತಾಳ್ಮೆಯೇ ಇಲ್ಲದ ನಿರ್ವಾಹಕರು ಇರುವಾಗ ಒಬ್ಬಂಟಿ ಮಹಿಳೆಯರು ಮಕ್ಕಳೊಂದಿಗೆ ಪ್ರಯಾಣ ಮಾಡಲು ಭಯವಾಗುತ್ತದೆ, ಈ ಘಟನೆ ನಡೆಯುವವರೆಗೂ ನಾನು ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಸುರಕ್ಷಿತ ಎಂದೆನಿಸಿಕೊಂಡಿದ್ದೆ, ಆದರೆ ಈ ಘಟನೆಯ ಬಳಿಕ ಬಸ್ಸಿನಲ್ಲಿ ಸಂಚಾರ ನಡೆಸುವುದು ಅತ್ಯಂತ ಕಷ್ಟಕರವಾಗಿದೆ ಎಂಬ ಭಾವನೆಯನ್ನು ಹಲ್ಲೆಗೀಡಾದ ಮಹಿಳೆ ವ್ಯಕ್ತಪಡಿಸಿದ್ದಾರೆ.
ಘಟನಾ ಸಂಬಂಧ ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಈ ಸಂಬಂಧ ತನಿಖೆ ಆರಂಭಿಸಿದ್ದಾರೆ. ಸಂಪೂರ್ಣ ತನಿಖೆಯ ನಂತರ ಈ ಕುರಿತಾದ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.




0 Comments