ಕಡೂರು : (ನ್ಯೂಸ್ ಮಲ್ನಾಡ್ ವರದಿ) ಸಿಡಿಲು ಬಡಿದ ಪರಿಣಾಮ 18 ಕುರಿಗಳು ಸಾವನ್ನಪ್ಪಿರುವ ದುರ್ಘಟನೆ ಕಡೂರಿನಲ್ಲಿ ಸಂಭವಿಸಿದೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಹಿರೇನಲ್ಲೂರು ಬಳಿಯಲ್ಲಿ ಸಂಭವಿಸಿದ ಮಳೆಗೆ ಮನೆಗಳ ಛಾವಣಿ ಕುಸಿದು ಮನೆಗಳು ಹಾನಿಗೀಡಾಗಿದ್ದರೆ, ಗುಡುಗು ಸಿಡಿಲು ಸಂಭವಿಸಿದ ಪರಿಣಾಮ ಮೇಯುತ್ತಿದ್ದ ಕುರಿಗಳು ಸಿಡಿಲಿನ ಹೊಡೆತಕ್ಕೆ ಸಿಲುಕಿ ಬಲಿಯಾಗಿದೆ. ಸಿಡಿಲಿನ ಹೊಡೆತಕ್ಕೆ 13 ಕುರಿಗಳು ಹಾಗೂ 05 ಮೇಕೆಗಳು ಸಾವನ್ನಪ್ಪಿದೆ ಎಂಬ ಮಾಹಿತಿ ಲಭ್ಯವಾಗಿದೆ. 

ಇದನ್ನೂ ಓದಿ :  ಭೀಕರ ರಸ್ತೆ ಅಪಘಾತ ; ಚಿಕ್ಕಮಗಳೂರು ಮೂಲದ ಬೈಕ್ ಸವಾರ ಸಾವು

ಕುರಿಗಳನ್ನು ಮೇಯಿಸಲೆಂದು ಕರೆದುಕೊಂಡು ಹೋದಾಗ ಈ ಘಟನೆ ಸಂಭವಿಸಿದ್ದು ಅಜ್ಜಂಪುರ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ. ದೇವೇಂದ್ರಪ್ಪ ಹಾಗೂ ಪಶು ಇಲಾಖೆಯ ಇನ್ಸಪೆಕ್ಟರ್ ನಟರಾಜ್ ಸ್ಥಳ ಪರಿಶೀಲನೆ ನಡೆಸಿ ಮರಣೋತ್ತರ ಪರೀಕ್ಶೇ ನಡೆಸಿದರು ಹಾಗೂ ಇಲಾಖೆಗೆ ಈ ಸಂಬಂಧ ಮಾಹಿತಿ ನೀಡಲಾಗಿದೆ ಶೀಘ್ರವೇ ಪರಿಹಾರ ಕೂಡ ಲಭ್ಯವಾಗಲಿದೆ ಎಂದರು.

ಕಳೆದ ಕೆಲ ದಿನಗಳಿಂದ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಮಳೆಯು ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಅವಾಂತರ ಸೃಷ್ಟಿಮಾಡಿದೆ. ಇನ್ನೂ ಮೂರುದಿನಗಳ ಕಾಲ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಪೊಲೀಸರ ಮೇಲೆ ಹಲ್ಲೆಗೈದು ಠಾಣೆಯಿಂದ ಎಸ್ಕೇಪ್ ಆದ ಕಳ್ಳತನದ ಆರೋಪಿ

ಶಿವಮೊಗ್ಗ : ಕಳ್ಳತನದ ಆರೋಪದ ಮೇರೆಗೆ ಪೊಲೀಸರ ವಶದಲ್ಲಿದ್ದ ಕಳ್ಳ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಎಸ್ಕೇಪ್ ಆಗಿರುವ ಘಟನೆ ನಡೆದಿದೆ.

ಮನೆಯ ಮುಂದೆ ನಿಲ್ಲಿಸಿದ್ದ ಟ್ರಾಕ್ಟರ್ ನ್ನು ಕದ್ದಿದ್ದ ಆರೋಪ ಹೊಂದಿದ್ದ ಕಳ್ಳ ಶಿವಮೊಗ್ಗದ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪೊಲೀಸರಿಂದ ಬಂಧಿತನಾಗಿದ್ದ. ಈತ ಶೌಚಾಲಯಕ್ಕೆ ಹೋಗಿ ಬರುವುದಾಗಿ ತೆರಳಿ ಶೌಚಾಲಯದಿಂದ ಹೊರಬಂದ ಕೂಡಲೇ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪೊಲೀಸ್ ಠಾಣೆಯ ಕಾಂಪೌಂಡ್‌ ನ್ನು ಎಗರಿ ಎಸ್ಕೇಪ್ ಆಗಿದ್ದಾನೆ.

ಕೂಡಲೇ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು ಆರೋಪಿಯ ಪತ್ತೆಗಾಗಿ ಬಲೆಬೀಸಿದ್ದಾರೆ. ಆತನನ್ನು ಸೆರೆ ಹಿಡಿಯುವ ಸಲುವಾಗಿ ಕಾರ್ಯಾಚರಣೆ ಆರಂಭಿಸಿದ್ದು ಕಳ್ಳನ ಪತ್ತೆ ಕಾರ್ಯವನ್ನು ನಡೆಸುತ್ತಿದ್ದಾರೆ.