ಮಡಿಕೇರಿ : (ನ್ಯೂಸ್ ಮಲ್ನಾಡ್ ವರದಿ) ಜೆಸಿಬಿ ವಾಹನದ ಬ್ರೇಕ್ ವಿಫಲಗೊಂಡ ಪರಿಣಾಮ ಕಾರ್ಮಿಕ ವಾಹನದ ಅಡಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿರುವ ದುರ್ಘಟನೆ ವರದಿಯಾಗಿದೆ. 

ಮಡಿಕೇರಿಯ ಕೂಟುಹೊಳೆ ಸಮೀಪ ಈ ದುರ್ಘಟನೆ ಸಂಭವಿಸಿದ್ದು ಸಂತೋಷ್ (22)  ಎಂಬ ಕಾರ್ಮಿಕ ಜೆಸಿಬಿ ಅಡಿಭಾಗಕ್ಕೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ್ದಾನೆ. ಜೆಸಿಬಿ ಬ್ರೇಕ್ ವಿಫಲಗೊಂಡ ಪರಿಣಾಮ ಚಾಲಕನ ನಿಯಂತ್ರಣಕ್ಕೆ ವಾಹನ ದೊರೆಯದೆ ಹಿಮ್ಮುಖವಾಗಿ ಇಳಿಜಾರಿನಲ್ಲಿ ಚಲಿಸಿ ಯುವಕನನ್ನು ಬಲಿ ಪಡೆದುಕೊಂಡಿದೆ. 

ಇದನ್ನೂ ಓದಿ : ಗುಂಡೇಟಿಗೆ ಬಲಿಯಾದ ಗಂಡಾನೆ ; ತೋಟದಲ್ಲಿ ಆನೆಯ ಶವಪತ್ತೆ

ವಾಹನ ಚಲಿಸಿದ ತೀವ್ರತೆಗೆ ಮೃತ ಯುವಕನ ಒಂದು ಕಾಲು ದೇಹದಿಂದ ಬೇರ್ಪಟ್ಟಿದೆ. ಯುವಕನು ಹಾಸನ ಮೂಲದ ಸಂತೋಷ್ ಎನ್ನಲಾಗಿದ್ದು ಈ ಅವಘಡದಲ್ಲಿ ಯುವಕ ದಾರುಣವಾಗಿ ಅಂತ್ಯ ಕಂಡಿದ್ದಾನೆ. 

ಘಟನೆಯ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು  ಈ ಸಂಬಂಧ ಹೆಚ್ಚಿನ ಮಾಹಿತಿ ಪಡೆಯುತ್ತಿದ್ದಾರೆ.

ಬಾಳೆಹೊನ್ನೂರು : ಭೀಕರ ರಸ್ತೆ ಅಪಘಾತ ; ಬೈಕ್ ಸವಾರ ಸಾವು

ಬಾಳೆಹೊನ್ನೂರು : ಬೈಕ್ ಚಾಲನೆ ಮಾಡುವ ಸಂದರ್ಭದಲ್ಲಿ ಹಸು ಅಡ್ಡ ಬಂದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. 

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ರೇಣುಕನಗರದ ಮಣಿಕಂಠ (33) ಮೃತ ದುರ್ದೈವಿ. ನರಸಿಂಹರಾಜಪುರ - ಶಿವಮೊಗ್ಗ ಮಾರ್ಗವಾಗಿ ಬೈಕ್ ನಲ್ಲಿ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದ್ದು ರಸ್ತೆಗೆ ಅಡ್ಡಬಂದ ಹಸುವನ್ನು ಬಚಾವ್ ಮಾಡುವ ಸಲುವಾಗಿ ಬೈಕ್ ಸವಾರ ಬ್ರೇಕ್ ಹೊಡೆದಿದ್ದು ಈ ಸಂದರ್ಭದಲ್ಲಿ ಬೈಕ್ ಸ್ಕಿಡ್ ಆದ ಪರಿಣಾಮ ಸವಾರ ರಸ್ತೆಗೆ ಬಿದ್ದಿದ್ದಾನೆ. ಈ ಸಂದರ್ಭದಲ್ಲಿ ಆತನ ತಲೆಯ ಭಾಗಕ್ಕೆ ತೀವ್ರವಾಗಿ ಪೆಟ್ಟಾದ ಪರಿಣಾಮ ಸವಾರ ಸಾವನ್ನಪ್ಪಿದ್ದಾನೆ.

ಅಪಘಾತದ ಕುರಿತಾಗಿ ಮೃತ ಮಣಿಕಂಠ ಅವರ ಸಹೋದರ ರಂಜಿತ್ ಅವರು ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಘಟನೆಗೆ ಸಂಬಂಧಿಸಿದಂತೆ ಯುವಕನನ್ನು ಕಳೆದುಕೊಂಡಿರುವ  ಕುಟುಂಬಸ್ಥರು ಹಾಗೂ ಸ್ನೇಹಿತರು ದುಃಖ ವ್ಯಕ್ತಪಡಿಸಿದ್ದಾರೆ.