ಇದನ್ನೂ ಓದಿ : ಬುರ್ಕಾ ಧರಿಸಿ ಯುವಕರ ಡ್ಯಾನ್ಸ್ ; ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ
ಈ ಹಿಂದೆ ಸಾರ್ವಜನಿಕರು ಹಲವು ಬಾರಿ ಮನವಿ ಮಾಡಿದ್ದರೂ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಿಲ್ಲ, ಈ ನಿಟ್ಟಿನಲ್ಲಿ ಹೋರಾಟ ಕೈಗೆತ್ತಿಕೊಳ್ಳುವ ಮೂಲಕ ನ್ಯಾಯಕ್ಕಾಗಿ ಪಕ್ಷಾತೀತವಾಗಿ ಹೋರಾಟ ಮಾಡಲು ತೀರ್ಮಾನಿಸಲಾಗಿದೆ.
ಕಳೆದ ಅನೇಕ ವರ್ಷಗಳಿಂದ ನಿರಂತರವಾಗಿ ಜನಪ್ರತಿನಿಧಿಗಳಿಗೆ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವಂತೆ ಮನವಿ ಸಲ್ಲಿಸಿದರು ಕೂಡ ಯಾರು ಈ ಕುರಿತಾಗಿ ಗಂಭೀರ ಚಿಂತನೆಯನ್ನು ನಡೆಸಿಲ್ಲ, ಪಕ್ಷಾತೀತವಾಗಿ ಬಂದ್ ಗೆ ಕರೆ ನೀಡಲಾಗಿದೆ. ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವುದರಿಂದ ಈ ಭಾಗದ ಅನೇಕ ರೋಗಿಗಳಿಗೆ ಸುಲಭವಾಗಿ ಗುಣಮಟ್ಟದ ಚಿಕಿತ್ಸೆ ದೊರೆಯುತ್ತದೆ - ಅಂಬುಜ ಅಧ್ಯಕ್ಷರು, ಆಸ್ಪತ್ರೆ ಮೇಲ್ದರ್ಜೆಗಾಗಿ ಹೋರಾಟ ಸಮಿತಿ ಬಾಳೆಹೊನ್ನೂರು
ಶೃಂಗೇರಿ ಕ್ಷೇತ್ರದಲ್ಲಿ ವೈಟ್ ಕಾಲರ್ ರಾಜಕಾರಣಿಗಳ ಸಂತೆ, ಮೂಲಭೂತ ಸೌಕರ್ಯಕ್ಕಾಗಿ ಜನರು ಬೀದಿಗಿಳಿಯುವ ಪರಿಸ್ಥಿತಿ :
ಶೃಂಗೇರಿ ಕ್ಷೇತ್ರದಲ್ಲಿ ವೈಟ್ ಕಾಲರ್ ರಾಜಕಾರಣಿಗಳ ಸಂತೆಯಾಗಿದ್ದು ಹೆಚ್ಚಿನವರಿಗೆ ರಾಜಕಾರಣ ತಮ್ಮ ದವಲತ್ತು ತೋರಿಸಲು ಒಂದು ಆಯ್ಕೆಯೇ ಹೊರತು ಜನಸಾಮಾನ್ಯರ ಕಷ್ಟಗಳ ಬಗ್ಗೆ ಯಾವುದೇ ನೈಜ ಕಾಳಜಿ ಇಲ್ಲ. ಮಲೆನಾಡಿನ ಜನರನ್ನು ಕಿತ್ತು ತಿನ್ನುವ ಹತ್ತು ಹಲವು ಸಮಸ್ಯೆಗಳು ತಾಂಡವವಾಡುತ್ತಿದೆ, ಉತ್ತಮ ವೈದ್ಯಕೀಯ ಸೌಲಭ್ಯವಿಲ್ಲದೆ, ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿ ಜನರು ಬದುಕನ್ನು ನರಕ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಶೃಂಗೇರಿಯಲ್ಲಿ ನೂರು ಬೆಡ್ ಆಸ್ಪತ್ರೆಗಾಗಿ ಕಳೆದ ಮೂರು ವರ್ಷಗಳಿಂದ ಹೋರಾಟ ನಡೆಯುತ್ತಿದ್ದರೂ ಸಹ ತಮಗೂ ಜನರ ಸಮಸ್ಯೆಗಳಿಗೂ ಸಂಬಂಧವೇ ಇಲ್ಲ ಎಂಬಂತೆ ಶೃಂಗೇರಿಯ ಹಾಗೂ ಕ್ಷೇತ್ರದ ರಾಜಕಾರಣಿಗಳು ಬೇಸಿಗೆಯ ಕೆಸರಲ್ಲಿ ಎಮ್ಮೆಗಳು ಮಲಗಿದಂತೆ ಮಲಗಿರುವುದು ಸಾಮಾಜಿಕ ಜೀವನಕ್ಕೇ ನಾಚಿಗೆಗೇಡಿನ ಸಂಗತಿ ಎಂದು ಜನರೂ ಸಹ ಆಕ್ರೋಶ ಹೊರಹಾಕುತ್ತಿದ್ದಾರೆ. ಎಲ್ಲವನ್ನೂ ಜನರು ಹೋರಾಟದ ಮೂಲಕವೇ ಪಡೆಯುವುದಾದರೆ ಕ್ಷೇತ್ರದ ಜನಪ್ರತಿನಿಧಿಗಳು, ರಾಜಕೀಯ ಧುರೀಣರು ಇರುವುದು ಸರ್ಕಾರದ ಖಜಾನೆ ಖರ್ಚು ಮಾಡಲೇ ಎಂಬ ಪ್ರಶ್ನೆ ಮೂಡುತ್ತಿದೆ.
ಸೋಮವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಹೋರಾಟ ಸಮಿತಿ ರಚಿಸಲಾಗಿದ್ದು ಸಮಿತಿಯ ಅಧ್ಯಕ್ಷರಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಇರಲಿದ್ದು, ಸದಸ್ಯರಾಗಿ ಸಾರ್ವಜನಿಕರು ಜನಪ್ರತಿನಿಧಿಗಳು ಇರಲಿದ್ದಾರೆ. ಪ್ರತಿಭಟನೆ ಜೂನ್ 6ಕ್ಕೆ ಬೆಳಿಗ್ಗೆ 10 ಗಂಟೆಯಿಂದ ನಡೆಯಲಿದೆ.




0 Comments