ಹಾಸನ : (ನ್ಯೂಸ್ ಮಲ್ನಾಡ್ ವರದಿ) ಹಾಸನದಲ್ಲಿ ನಿನ್ನೆ ರಾತ್ರಿ ಜೆಸಿಬಿಗಳು ಭಾರೀ ಮಟ್ಟದಲ್ಲಿ ಸದ್ದು ಮಾಡಿದ್ದು ಹಾಸನದ ತಾಲೂಕು ಕಛೇರಿಯ ಹಳೇ ಕಟ್ಟಡವನ್ನು ನೆಲಸಮಗೊಳಿಸಿದೆ.
ತಾಲೂಕು ಕಛೇರಿಯ ಹಳೆ ಕಟ್ಟಡದ ತೆರವು ಕಾರ್ಯಾಚರಣೆಯ ಕುರಿತಾಗಿ ಹಾಸನದ ಬಿಜೆಪಿ ಶಾಸಕ ಪ್ರೀತಂಗೌಡ ಹಾಗೂ ಮಾಜಿ ಸಚಿವ ಹೆಚ್.ಡಿ ರೇವಣ್ಣ ನಡುವೆ ವಾಗ್ವಾದ ನಡೆದಿತ್ತು. ಈ ಕಟ್ಟಡವನ್ನು ನೆಲಸಮಗೊಳಿಸಲು ಬಿಡುವುದಿಲ್ಲ ಎಂದು ರೇವಣ್ಣ ಎಚ್ಚರಿಸಿದ್ದರು, ಆದರೆ ಯಾವುದೇ ಎಚ್ಚರಿಕೆಗೆ ಬಗ್ಗದೇ ರಾತ್ರೋ ರಾತ್ರಿ ಜೆಸಿಬಿಗಳು ಘರ್ಜನೆ ನಡೆಸಿದೆ.
ಕಟ್ಟಡದ ಕಿಟಕಿ ಹಾಗೂ ಬಾಗಿಲನ್ನು ಸಹ ತೆರವು ಮಾಡದೇ ಜೆಸಿಬಿಗಳು ತಾಲೂಕು ಕಛೇರಿ ಕಟ್ಟಡವನ್ನು ನೆಲಸಮಗೊಳಿಸಿದೆ.
ಈ ಹಿಂದೆ ಟ್ರಕ್ ಟರ್ಮಿನಲ್ ಗೆ ಸಂಬಂಧಪಟ್ಟಂತೆ ರೇವಣ್ಣ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು ಈ ಸಂದರ್ಭದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಎಂಎಲ್ಸಿ ಸೂರಜ್ ರೇವಣ್ಣ ಸ್ಥಳಕ್ಕೆ ಧಾವಿಸಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದರು. ಪೊಲೀಸರು ಬಿಜೆಪಿಯವರ ಕೈಗೊಂಬೆ ಯಾಗಿದ್ದಾರೆ ಎಂದು ಆರೋಪಿಸಿ ವಾಗ್ವಾದಕ್ಕಿಳಿದಿದ್ದರು.
ಯಾವುದನ್ನೂ ಲೆಕ್ಕಿಸದೇ ರಾತ್ರೋ ರಾತ್ರಿ ಜೆಸಿಬಿಗಳು ಕಟ್ಟಡವನ್ನು ನೆಲಸಮಗೊಳಿಸಿದೆ ಈ ಕುರಿತು ಜೆಡಿಎಸ್ ನಾಯಕರ ಮುಂದಿನ ನಡೆಯನ್ನು ಕಾದುನೋಡಬೇಕಿದೆ.
ಕಳಸ : ಭದ್ರಾ ನದಿಯಲ್ಲಿ ಮುಳುಗಿ ದುರ್ಮರಣ ಹೊಂದಿದ 19 ವರ್ಷದ ಯುವಕ
ಪ್ರವಾಸಕ್ಕೆಂದು ಕಳಸಕ್ಕೆ ಬಂದಿದ್ದ ಚಿತ್ರದುರ್ಗ ಮೂಲದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ಕಳಸ ಹಾಗೂ ಹೊರನಾಡು ದೇವಾಲಯಗಳ ದರ್ಶನಕ್ಕೆ ಬಂದಿದ್ದ ಚಿತ್ರದುರ್ಗ ಮೂಲದ ಯುವಕ ಹೆಬ್ಬಾಳೆಯಲ್ಲಿನ ಭದ್ರಾ ನದಿಗೆ ಸ್ನಾನಕ್ಕೆಂದು ತೆರಳಿದ್ದ, ಈ ವೇಳೆ ಆಯತಪ್ಪಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಮೃತ ಯುವಕನನ್ನು ಚಿತ್ರದುರ್ಗ ಮೂಲದ ಅಶೋಕ್ ಎಂದು ಗುರುತಿಸಲಾಗಿದೆ.
ಅಶೋಕ್ (19) ತನ್ನ ಕುಟುಂಬ ವರ್ಗದವರೊಡನೆ ದೇವಾಲಯಗಳ ದರ್ಶನಕ್ಕೆಂದು ಆಗಮಿಸಿದ್ದ ಎನ್ನಲಾಗಿದೆ. ನದಿಯಲ್ಲಿ ಆಯತಪ್ಪಿದ ಪರಿಣಾಮ ಈ ದುರ್ಘಟನೆ ನಡೆದಿದ್ದು ಯುವಕನು ನದಿಯಲ್ಲಿ ಕೊನೆಯುಸಿರೆಳೆದಿದ್ದಾನೆ.
ಕುಟುಂಬದ ಸದಸ್ಯನನ್ನು ಕಳೆದುಕೊಂಡಿರುವ ಪೋಷಕರು ಅತೀವ ದುಃಖವನ್ನು ಹೊರಹಾಕಿದ್ದು, ಶವವನ್ನು ಕಳಸದ ಹೆಬ್ಬಾಳೆ ನದಿಯಿಂದ ಮೇಲಕ್ಕೆತ್ತಲಾಗಿದೆ. ಈ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





0 Comments