ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಭಾರತೀಯ ಜನತಾ ಪಕ್ಷವನ್ನು ಹಣಿಯುವ ಉದ್ದೇಶದಿಂದ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಹಿಂದೂ ಬ್ರಿಗೇಡ್ ಸಂಸ್ಥೆ ಹುಟ್ಟಿಕೊಂಡಿದೆ ಈ ಸಂಸ್ಥೆಯು ವ್ಯವಸ್ಥಿತ ಸಂಚಿನ ಮೂಲಕ ಬಿಜೆಪಿಯನ್ನು ಹಣಿಯುವ ಸಂಚು ಮಾಡುತ್ತಿದೆ ಎಂದು ಚಿಕ್ಕಮಗಳೂರು ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಸಿ ಕಲ್ಮರುಡಪ್ಪ ಆರೋಪ ಮಾಡಿದರು.  

ಹಿಂದೂ ಬ್ರಿಗೇಡ್ ಸಂಘಟನೆಯ ಕುರಿತು ಮಾತನಾಡಿದ ಅವರು ಬಿಜೆಪಿಗೆ ತೊಂದರೆ ಕೊಡುತ್ತೇವೆಂದುಕೊಂಡು ಕಾಂಗ್ರೆಸ್ ಪಕ್ಷದ ಕೃಪೆಯನ್ನು ಪಡೆದು ಬಿಜೆಪಿಯ ವಿರುದ್ಧ ಸಂಚು ರೂಪಿಸಿರುವ ಸಂಘಟನೆ ಹಿಂದೂ ಬ್ರಿಗೇಡ್ ಆಗಿದ್ದು ನಮ್ಮ ಬಿಜೆಪಿ ಪಕ್ಷಕ್ಕೆ ಸಂಬಂಧ ಇಲ್ಲದೇ ಇರುವ ಕೆಲವರು ಈ ಕೆಲಸಕ್ಕೆ ಮುಂದಾಗಿದ್ದಾರೆ ಎಂದರು. 
ಅಭ್ಯರ್ಥಿಗಳು ಈ ಕೆಳಕಂಡ ಲಿಂಕ್ ಮೂಲಕ ರಿಜಿಸ್ಟರ್ ಆಗಬಹುದು https://forms.gle/PvypXpJerzDzsrfE9
ಶೃಂಗೇರಿ ವಿಧಾನಸಭಾ ಕ್ಷೇತ್ರದ ಮತದಾರರು ಪ್ರಬುದ್ಧರಾಗಿದ್ದು ಪ್ರತಿಯೊಂದು ವಿಚಾರವನ್ನೂ ಗಮನಿಸಿ ವಿಚಾರ ಮಾಡಿ ನಂತರದಲ್ಲಿ ಅವರಿಗೆ ಸ್ಥಾನ ನೀಡುತ್ತಾರೆ. ಯಾವುದೇ ಕುತಂತ್ರಗಳು ಬಿಜೆಪಿಯನ್ನು ಏನೂ ಮಾಡಲು ಆಗುವುದಿಲ್ಲ ಎಂದರು. ಹಾಗೂ ಬಿಜೆಪಿಯ ಹೆಸರನ್ನು ಹೇಳಿಕೊಂಡು ಬಿಜೆಪಿಯನ್ನು ಹೆಣೆಯುವ ಇವರ ತಂತ್ರಗಾರಿಕೆ ಎಂದಿಗೂ ಸಫಲವಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಪ್ರವೀಣ್ ಖಾಂಡ್ಯ ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿಯನ್ನು ಸೋಲಿಸುವುದೇ ನಮ್ಮ ಗುರಿ ಎಂದು ಹೇಳಿಕೊಂಡು ಬಂದಿದ್ದರು ಹಾಗೂ ರವಿಶಂಕರ್ ಜಿಲ್ಲಾ ಕಾಂಗ್ರೆಸ್ ವಕ್ತಾರರಾಗಿ ಬಿಎಸ್ಪಿ ಅಭ್ಯರ್ಥಿಯಾಗಿ ಹಾಗೂ ಜೆಡಿಎಸ್ ತಾಲೂಕು ಅಧ್ಯಕ್ಷರಾಗಿ ಎಲ್ಲಾ ಪಕ್ಷವನ್ನು ನೋಡಿಕೊಂಡು ಬಂದವರು ಇಂದು ಬಿಜೆಪಿಯನ್ನು ಮಟ್ಟ ಹಾಕಲು ಯತ್ನಿಸುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪ ಮಾಡಿದರು.

ಇದಲ್ಲದೇ ಬೆಂಡೆಹಕ್ಲು ನಾರಾಯಣ ಅವರು ಡಿಸಿಸಿ ಬ್ಯಾಂಕ್ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ನ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿಯ ವಿರುದ್ದ ಪರಾಭವ ಹೊಂದಿದರು ಹಾಗೂ ಟಿ.ಎ.ಪಿ.ಸಿ.ಎಂ ಚುನಾವಣೆಯಲ್ಲೂ ಸೋಲನ್ನು ಹೊಂದಿದವರು ಇಂದು ಬಿಜೆಪಿ ಎಂದು ಹೇಳುತ್ತಿದ್ದಾರೆ ಒಟ್ಟಾರೆ ಬಿಜೆಪಿಯನ್ನು ಸೋಲಿಸುವುದು ಅವರ ಉದ್ದೇಶವಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಜನರು ಈ ತಂತ್ರಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಈ ತಂತ್ರಕ್ಕೆ ಯಶಸ್ಸು ಲಭಿಸುವುದಿಲ್ಲ ಎಂದರು. ಈ ಸಂದರ್ಭದಲ್ಲಿ ಕೊಪ್ಪ ಮಂಡಲದ ಅಧ್ಯಕ್ಷ ಸತೀಶ್ ಅದ್ದಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ, ಎನ್.ಆರ್.ಪುರದ ಬಿಜೆಪಿ ಅಧ್ಯಕ್ಷ ಅರುಣ್, ಕಾರ್ಯದರ್ಶಿ ಮಂಜುನಾಥ್, ಶೃಂಗೇರಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ನೂತನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.