ಕೊಡಗು : (ನ್ಯೂಸ್ ಮಲ್ನಾಡ್ ವರದಿ) ವಿದ್ಯುತ್ ಸ್ಪರ್ಶಿಸಿ ಗಂಡಾನೆಯೊಂದು ಸಾವನ್ನಪ್ಪಿರುವ ಘಟನೆ ಕೊಡಗಿನಲ್ಲಿ ನಡೆದಿದೆ. ಆನೆ ತೋಟಕ್ಕೆ ನುಗ್ಗಿದ ಸಂದರ್ಭದಲ್ಲಿ ವಿದ್ಯುತ್ ಕಂಬ ಬಿದ್ದ ಪರಿಣಾಮ ಆನೆಯು ಸಾವನ್ನಪ್ಪಿದೆ. 

ಇದನ್ನೂ ಓದಿ : ಹಾಸನ : ಮನೆ ಮುಂದೆ ನಿಲ್ಲಿಸಿದ್ದ ಸ್ಕಾರ್ಪಿಯೋ ಕಾರ್ ಕಳ್ಳತನ

ಕೊಡಗು ಜಿಲ್ಲೆಯ ಅತ್ತಿಮಂಗಲ ಗ್ರಾಮದಲ್ಲಿರುವ ವಿವೇಕ್ ಅಪ್ಪಯ್ಯ ಎಂಬುವವರಿಗೆ ಸೇರಿದ ಈ ತೋಟದಲ್ಲಿ, ಸಂಭವಿಸಿದ ಮಳೆ  ಗಾಳಿಗೆ ಹೈಟೆನ್ಷನ್ ವಿದ್ಯುತ್ ಲೈನ್ ಮೇಲೆ ಮರ ಬಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ. ಮರ ಬಿದ್ದ ಸಂದರ್ಭದಲ್ಲಿ ತೋಟವನ್ನು ಪ್ರವೇಶಿಸಿದ ಆನೆಗೆ ವಿದ್ಯುತ್ ತಗುಲಿ ಆನೆಯು ಸಾವನ್ನಪ್ಪಿದೆ. 

ಅಭ್ಯರ್ಥಿಗಳು ಈ ಕೆಳಕಂಡ ಲಿಂಕ್ ಮೂಲಕ ರಿಜಿಸ್ಟರ್ ಆಗಬಹುದು :  https://forms.gle/PvypXpJerzDzsrfE9

ಸಾವನ್ನಪ್ಪಿದ ಗಂಡಾನೆಯು 22 ವರ್ಷ ಪ್ರಾಯದ್ದಾಗಿದ್ದು ಈ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ ಹಾಗೂ ಮಾಹಿತಿ ಕಲೆಹಾಕುತ್ತಿದ್ದಾರೆ. 

ಈ ಭಾಗದಲ್ಲಿ ಆನೆಗಳು ಆಹಾರವನ್ನರಸಿ  ನಿರಂತರವಾಗಿ ಬರುತ್ತಿದ್ದು ಅಧಿಕಾರಿಗಳು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಕೋರಿದ್ದಾರೆ. ಇದಲ್ಲದೇ ಕೆಲ ತೋಟಗಳಿಗೆ ಹಿಂಡು ಹಿಂಡಾಗಿ ಪ್ರವೇಶಿಸುವ ಆನೆಗಳು ಬೆಳೆನಾಶ ಮಾಡುವುದಲ್ಲದೇ ಅನೇಕರನ್ನು ಬಲಿ ತೆಗೆದುಕೊಂಡಿದೆ.

ಕೊಪ್ಪ : ಗೃಹ ಸಚಿವರ ಇಲಾಖೆಯಲ್ಲೇ ಪಿಎಸೈ ನೇಮಕಾತಿ ಹಗರಣದ ನಡೆದಿದೆ 

ಕೊಪ್ಪ : ಗೃಹ ಸಚಿವ ಆರಗಜ್ಞಾನೇಂದ್ರ ಅವರು ಕೂಡಲೇ ಅವರ ಸ್ಥಾನಕ್ಕೆ ರಾಜೀನಾಮೆ ನೀಡಿ ಅವರ ಇಲಾಖೆಯಲ್ಲಿ ನಡೆದ ದೊಡ್ಡ ಮಟ್ಟದ ಹಗರಣದಲ್ಲಿ ಭಾಗಿಯಾದ ಆರೋಪಿಗಳಿಗೆ ಶಿಕ್ಷೆ ಜಾರಿಯಾಗುವಂತೆ ನೋಡಿಕೊಳ್ಳಬೇಕು ಅವರು ರಾಜೀನಾಮೆ ನೀಡಿದರೆ ಮಾತ್ರ ಪ್ರಾಮಾಣಿಕ ತನಿಖೆ ನಡೆಯುತ್ತದೆ ಎಂದರು.

ಈ ಕುರಿತು ಮಾತನಾಡಿದ ಅವರು ಬಿಜೆಪಿ ಸರ್ಕಾರ ಕೋಮು ಸೌಹಾರ್ದ ಕಪಡುವುದನ್ನು ಬಿಟ್ಟು ಕೇವಲ ಪ್ರಚೋದನೆಗಳಿಗೆ ಜನರನ್ನು ಒಳಪಡಿಸಿ ಆಡಳಿತ ನಡೆಸುತ್ತಿದೆ. ಕಾಂಗ್ರೆಸ್ ಪಕ್ಷ ಮಾತ್ರ ದೇಶದ ಸರ್ವ ಜನಾಂಗದವರನ್ನು ಒಗ್ಗೂಡಿಸಿ ಆಡಳಿತ ನಡೆಸಲು ಶಕ್ತವಾಗಿದೆ ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರವು ವಿಫಲವಾಗಿದೆ ಎಂದರು.

ಕೋಮುಗಳ ನಡುವೆ ವಿಷಬೀಜ ಬಿತ್ತಿ ಮತ ಪಡೆಯುವುದು ಇವರ ರಾಜಕೀಯ ಲಾಭವಾಗಿದೆ, ನ್ಯಾಯಯುತವಾಗಿ ಚುನಾವಣೆ ಎದುರಿಸಿದಲ್ಲಿ ಬಿಜೆಪಿ ಜನರಿಂದ ತಿರಸ್ಕೃತಗೊಳ್ಳಲಿದೆ ಎಂದು ವಾಗ್ದಾಳಿ ನಡೆಸಿದರು. ಅಧಿಕಾರದಲ್ಲಿದ್ದು ಎಲ್ಲಾವರ್ಗದ, ಎಲ್ಲಾ ಜಾತಿಯ, ಧರ್ಮದ ಜನರನ್ನು ಒಂದು ಉತ್ತಮ ಹಾದಿಯೆಡೆಗೆ ಕೊಂಡೊಯ್ಯುವುದನ್ನು ಬಿಟ್ಟು ಧರ್ಮಾಧಾರಿತ ರಾಜಕಾರಣ ಬಿಜೆಪಿ ನಡೆಸುತ್ತಿದೆ ಎಂದರು. 

ಪ್ರಸ್ತುತ ಬೆಳಕಿಗೆ ಬಂದಿರುವ ಪಿಎಸೈ ನೇಮಕಾತಿ ಹಗರಣದಲ್ಲಿ ಗೃಹ ಸಚಿವರ ಮೇಲೂ ಆರೋಪ ಕೇಳಿ ಬಂದಿದೆ, ಈ ನಿಟ್ಟಿನಲ್ಲಿ ಅವರು ರಾಜೀನಾಮೆ ನೀಡಿ ಕೂಲಂಕುಷ ತನಿಖೆ ನಡೆಸಲು ಅಧಿಕಾರಿಗಳಿಗೆ ಮುಕ್ತ ಅವಕಾಶ ನೀಡಬೇಕು, ಅವರು ಆ ಸ್ಥಾನದಿಂದ ಕೆಳಗಿಳಿದರೆ ತನಿಖೆ ನಡೆಸಲು ಯಾವುದೇ ಅಡೆತಡೆಗಳು ಉಂಟಾಗುವುದಿಲ್ಲ ಎಂದರು. 

ಈ ಸಂದರ್ಭದಲ್ಲಿ ಕೊಪ್ಪ ಬ್ಲಾಕ್  ಕಾಂಗ್ರೆಸ್ ನ ಅಧ್ಯಕ್ಷರಾದ ಸುಧೀರ್ ಕುಮಾರ್ ಮೂರೊಳ್ಳಿ, ಎಸ್. ವಿಶ್ವನಾಥ್ ಶೆಟ್ಟಿ, ನುಗ್ಗಿ ಮಂಜುನಾಥ್, ನಾರ್ವೆ ಅಶೋಕ್, ಪ್ರಶಾಂತ್, ಅನಿಲ್ ಹೊಸಕೊಪ್ಪ ಸೇರಿದಂತೆ ಅನೇಕರು ಇದ್ದರು.