ಮೂಡಿಗೆರೆ : (ನ್ಯೂಸ್ ಮಲ್ನಾಡ್ ವರದಿ) ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದು ಉರುಳಿರುವ ಘಟನೆ ನಡೆದಿದೆ.
ಇದನ್ನೂ ಓದಿ : ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು ಬಾಳೂರಿನ ಕಲ್ಲಕ್ಕಿ ಬಳಿ ಮರಕ್ಕೆ ಡಿಕ್ಕಿ ಹೊಡೆದು ಕಾರೊಂದು ಉರುಳಿದೆ.
ಅದೃಷ್ಟವಶಾತ್ ಕಾರಿನಲ್ಲಿದ್ದ ಇಬ್ಬರಿಗೂ ಯಾವುದೇ ಪ್ರಾಣಾಪಾಯಾಗಳು ಸಂಭವಿಸಿಲ್ಲ. ಕಾರು ಕೂವೆ ಕಡೆಯಿಂದ ಕಲ್ಮನೆ ಕಡೆಗೆ ತೆರಳುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಸಂಭವಿಸಿದ ಈ ಅವಘಡದಲ್ಲಿ ಕಾರಿನ ಮುಂಭಾಗ ಹಾಗೂ ಹಿಂಭಾಗ ಬಹುತೇಕ ಜಖಂಗೊಂಡಿದೆ.
ತನು ಕೊಟ್ಟಿಗೆಹಾರ, ವರದಿಗಾರರು.
ಶಿವಮೊಗ್ಗ : ಕಾಲುಜಾರಿ 60 ಅಡಿ ಆಳದ ಬಾವಿಯೊಳಗೆ ಸಿಲುಕಿದ ವ್ಯಕ್ತಿ
ಬಹಿರ್ದೆಸೆಗೆಂದು ತೆರಳಿದ್ದ ವ್ಯಕ್ತಿಯೋರ್ವ ಆಯತಪ್ಪಿ ಬಾವಿಗೆ ಬಿದ್ದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹೊಸಬಾಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಎನ್. ದೊಡ್ಡೇರಿ ಗ್ರಾಮದ ಹನುಮಂತಪ್ಪ ಎಂಬ 48 ವರ್ಷ ಪ್ರಾಯದ ವ್ಯಕ್ತಿ ಆಯತಪ್ಪಿ 60 ಅಡಿ ಆಳವಿರುವ ಬಾವಿಗೆ ಬಿದ್ದ ವ್ಯಕ್ತಿ.
ಬಹಿರ್ದೆಸೆಗೆಂದು ತೆರಳಿದ್ದ ಅವರು ಕಾಲುಜಾರಿ ಬಾವಿಗೆ ಬಿದ್ದು ಏನೂ ಮಾಡಲಾರದ ಪರಿಸ್ಥಿತಿಯಲ್ಲಿ ಕೂಗಲಾರಂಭಿಸಿದರು, ಅವರ ಧ್ವನಿಯನ್ನು ಆಲಿಸಿದ ಸುತ್ತಮುತ್ತಲಿನ ಗ್ರಾಮಸ್ಥರು ಅಗ್ನಿಶಾಮಕ ಇಲಾಖೆಗೆ ಕರೆ ಮಾಡಿ ಈ ಕುರಿತು ಮಾಹಿತಿ ನೀಡಿದ್ದಾರೆ, ಕೂಡಲೇ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಆರಂಭಿಸಿದ ಅಗ್ನಿಶಾಮಕದಳದ ಸಿಬ್ಬಂದಿಗಳು ಸತತವಾಗಿ ಎರಡು ಗಂಟೆಗಳ ಕಾರ್ಯಾಚರಣೆ ನಡೆಸಿ ವ್ಯಕ್ತಿಯನ್ನು ಬಾವಿಯಿಂದ ಮೇಲಕ್ಕೆತ್ತುವಲ್ಲಿ ಸಫಲರಾಗಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಮಹಾಬಲೇಶ್ವರ, ಚಾಲಕ ಪ್ರಶಾಂತ್, ಸಿಬ್ಬಂದಗಳಾದ ಮಂಜುನಾಥ, ಪ್ರದೀಪ್, ಪರಶುರಾಮಪ್ಪ, ಪ್ರಸನ್ನ ಕುಮಾರ್ ಪಾಲ್ಗೊಂಡು ಬಾವಿಯಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಮೇಲಕ್ಕೆತ್ತುವಲ್ಲಿ ಸಹಾಯ ಮಾಡಿದ್ದಾರೆ. ತಮ್ಮನ್ನು ಸುರಕ್ಷಿತವಾಗಿ ಬಾವಿಯಿಂದ ಮೇಲಕ್ಕೆ ತಂದ ಇಲಾಖೆಯ ಅಧಿಕಾರಿವರ್ಗ ಹಾಗೂ ಸಿಬ್ಬಂದಿಗಳಿಗೆ ಹನುಮಂತಪ್ಪ ಕೃತಜ್ಞತೆಗಳನ್ನು ಸಲ್ಲಿಸಿದರು.




0 Comments