ಜಯಪುರ : (ನ್ಯೂಸ್ ಮಲ್ನಾಡ್ ವರದಿ) ಕಾಡಾನೆಗಳ ದಾಳಿಗೆ ಕೃಷಿಕರ ಅಡಿಕೆ ಹಾಗೂ ಬಾಳೆತೋಟ ಹಾನಿಗೀಡಾಗಿರುವ ಘಟನೆ ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹೇರೂರು ಗ್ರಾಮ ಪಂಚಾಯತ್ ನ ದೇವಗೋಡು ಗ್ರಾಮದ ಮಕ್ಕಿಮನೆ ಭಾಗದಲ್ಲಿ ಕಾಡಾನೆಗಳ ಹಿಂಡು ತೋಟಕ್ಕೆ ನುಗ್ಗಿ ಅನೇಕ ಪ್ರಮಾಣದಲ್ಲಿ ಬಾಳೆ ಹಾಗೂ ಅಡಿಕೆ ಗಿಡಗಳನ್ನು ನಾಶಮಾಡಿವೆ.
ಇದನ್ನೂ ಓದಿ : ತೀರ್ಥಹಳ್ಳಿ : ಮಹಿಳೆಯನ್ನು ಬೆತ್ತಲೆಗೊಳಿಸಿ ಅತ್ಯಾಚಾರದ ಆರೋಪ ; ನಾಲ್ವರ ಮೇಲೆ ಪ್ರಕರಣ ದಾಖಲು
ಹೇರೂರಿನ ದೇವಗೋಡು, ಮಕ್ಕಿಮನೆ, ಹಾಡುಗಾರು, ನೀರುಕಟ್ಟು, ಭಾಗಗಳಲ್ಲಿ ಅನೆಯಹಿಂಡು ದಾಳಿ ನಡೆಸಿದ್ದು ಪ್ರಶಾಂತ ಎಂಬುವವರ ಒಂದು ಎಕರೆ ತೋಟದ ಪ್ರದೇಶಲ್ಲಿದ್ದ ಬಾಳೆಗಿಡಗಳನ್ನು ಸಂಪೂರ್ಣವಾಗಿ ನಾಶಮಾಡಿದೆ ಹಾಗೂ ನೂರಕ್ಕೂ ಅಧಿಕ ಅಡಿಕೆ ಮರಗಳು ಆನೆದಾಳಿಯಿಂದ ನಾಶಗೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ವೆಂಕಟರಮಣ ಭಟ್ ಎಂಬುವವರ ತೋಟಕ್ಕೆ ನುಗ್ಗಿದ ಆನೆಗಳು ಕೆರೆಯಲ್ಲಿ ಈಜಾಡಿ ಕೆರೆಯ ದಂಡೆಯನ್ನು ಹಾಳುಗೆಡವಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಸುಬ್ರಮಣ್ಯ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಸರ್ಕಾರ ಹಾಗೂ ಅಧಿಕಾರಿಗಳು ಶೀಘ್ರವಾಗಿ ಈ ಕುರಿತು ಗಮನಹರಿಸಿ ಉಂಟಾಗಿರುವ ನಷ್ಟಕ್ಕೆ ತುರ್ತಾಗಿ ಪರಿಹಾರ ಒದಗಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.




0 Comments