ಮೂಡಿಗೆರೆ : (ನ್ಯೂಸ್ ಮಲ್ನಾಡ್ ವರದಿ) ಅಕ್ರಮವಾಗಿ ಗಾಂಜಾ ಸಾಗಾಟ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಕಾರ್ಯಾಚರಣೆಯ ಮೂಲಕ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ : ಭೀಕರ ರಸ್ತೆ ಅಪಘಾತ ; ಶೃಂಗೇರಿ ಯುವಕನ ದುರ್ಮರಣ
ಉಜಿರೆಯಿಂದ ಮೂಡಿಗೆರೆಗೆ ಕ್ವಾಲಿಸ್ ಕಾರ್ ನ ಮೂಲಕ ಕೋಕಂ ಜ್ಯೂಸ್ ಮಾರಾಟ ಮಾಡುವ ನೆಪದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದವರನ್ನು ಮೂಡಿಗೆರೆಯ ಮುತ್ತಿಗೆಪುರದಲ್ಲಿ ಪೊಲೀಸರು ಸೆರೆ ಹಿಡಿದಿದ್ದಾರೆ. ಬೆಳ್ತಂಗಡಿ ತಾಲೂಕಿನ ಕಡುರುದ್ಯಾವರ ಗ್ರಾಮದ ಕುಕ್ಕಾವು ನಿವಾಸಿ ಅಬೂಬಕ್ಕರ್ ಸಿದ್ದಿಕ್(31) , ಮೂಡಿಗೆರೆಯ ಅಮೃತ್ ಬಿಜುವಳ್ಳಿ , ಮೂಡಿಗೆರೆ ಟೌನ್ ನಿವಾಸಿ ರಿಷಬ್ ರಾಜ್ ಬಂಧಿತರು.
ಬೆಳ್ತಂಗಡಿಯ ಅಬೂಬಕ್ಕರ್ ಸಿದ್ದಿಕ್ ಗೆ ಸೇರಿದ ಕ್ವಾಲಿಸ್ ಕಾರಿನಲ್ಲಿ 250 ಗ್ರಾಂ ಗಾಂಜಾ ಪತ್ತೆಯಾಗಿದ್ದು ಒಂದು ಬೈಕ್ ನ್ನು ಹಾಗೂ ಕಾರನ್ನು ವಶಕ್ಕೆಪಡೆದುಕೊಂಡಿರುವ ಪೊಲೀಸರು, ಮೂವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಯುವಕರು ಹೆಚ್ಚಿನದಾಗಿ ನಶೆಭರಿತ ವಸ್ತುಗಳ ಹಿಂದೆ ಬಿದ್ದು ದುಶ್ಚಟಗಳಿಗೆ ದಾಸರಾಗುತ್ತಿದ್ದು ಈ ರೀತಿಯ ಕೃತ್ಯಗಳಲ್ಲಿ ಯಾರಾದರೂ ಭಾಗಿಯಾಗಿರುವುದು ಕಂಡು ಬಂದಲ್ಲಿ ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು ಎಂಬ ಎಚ್ಚರಿಕೆಯನ್ನು ಅಧಿಕಾರಿಗಳು ನೀಡಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಮೂಡಿಗೆರೆ ವೃತ್ತ ನಿರೀಕ್ಷಕ ಸೋಮಶೇಖರ್, ಗಿರೀಶ್,ಸುರೇಶ್, ಜಯಕುಮಾರ್, ಪ್ರದೀಪ್, ಉಮೇಶ್, ಮನುಕುಮಾರ್, ಭಾಗವಹಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತನು ಕೊಟ್ಟಿಗೆಹಾರ, ವರದಿಗಾರರು.




0 Comments