ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿಯ ಮಕ್ಕಿಮನೆ ಸಮೀಪ ರಸ್ತೆ ಅವಘಡ ಸಂಭವಿಸಿದ್ದು ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಟೆಲಿಫೋನ್ ಕಂಬಕ್ಕೆ ಗುದ್ದಿರುವ ಘಟನೆ ನಡೆದಿದೆ. 

ಇದನ್ನೂ ಓದಿ :  ಪೊಲೀಸರಿಗೆ ಸವಾಲೆಸೆದಿದ್ದ ನರಸಿಂಹರಾಜಪುರ ತಾಲೂಕು ಕಛೇರಿ ಸಿಬ್ಬಂದಿ ಅಂದರ್

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಸಮೀಪದ ಮಕ್ಕಿಮನೆ ಓಂಕಾರೇಶ್ವರ ದೇವಸ್ಥಾನದ ಬಳಿ ಈ ಅವಘಡ ಸಂಭವಿಸಿದ್ದು ಚಾಲಕನ ನಿಯಂತ್ರಣ ತಪ್ಪಿ ಕಾರು ಟೆಲಿಫೋನ್ ಕಂಬಕ್ಕೆ ಗುದ್ದಿದ ಪರಿಣಾಮ ವಾಹನದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರನ್ನು ಶೃಂಗೇರಿ ಮೂಲದ ಚಾಲಕ ಚಾಲನೆ ನಡೆಸುತ್ತಿದ್ದರು ಎನ್ನಲಾಗಿದೆ. 

ಕಾರ್ ಚಾಲನೆ ಮಾಡುತ್ತಿದ್ದ ಚಾಲಕನಿಗೆ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಟೆಲಿಫೋನ್ ಕಂಬ ಸಹ ಸಂಪೂರ್ಣ ಜಖಂಗೊಂಡಿದ್ದು ಸ್ಥಳೀಯರು ಘಟನಾ ಸ್ಥಳಕ್ಕೆ ಧಾವಿಸಿ ಆತನನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ಸಹಕಾರ ನೀಡುತ್ತಿದ್ದಾರೆ. ವಾಹನ ರಸ್ತೆ ಮಧ್ಯವಿದ್ದ ಕಾರಣ ಕೆಲಕಾಲ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.