ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ವೃದ್ಧೆಯ ತಲೆ ಓಡೆದಿದ್ದ ರಾಜೇಂದ್ರ ಎಂಬ ಆರೋಪಿಯು ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವಿಗೆ ಶರಣಾಗಿದ್ದಾನೆ. 

ಬಾಡಿಗೆ ಹಣವನ್ನು ಪಡೆಯುವ ನೆಪದಲ್ಲಿ ತೆರಳಿ ಮನೆಯಲ್ಲಿದ್ದ ವೃದ್ಧೆಯ ಮೇಲೆ ಸ್ಪ್ಯಾನರ್ ನಿಂದ ತಲೆಗೆ ಹಲ್ಲೆ ಮಾಡಿ ಆಕೆಯ ಸರ ಕಳ್ಳತನ ನಡೆಸಿದ್ದ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮೃತ ರಾಜೇಂದ್ರ ಅತಿಯಾಗಿ ಜೂಜಾಟದ ಅಭ್ಯಾಸವನ್ನು ಹೊಂದಿ ಲಕ್ಷಾಂತರ ರೂಪಾಯಿ ಹಣವನ್ನು ಕಳೆದುಕೊಂಡಿದ್ದ. ಅನೇಕರ ಬಳಿ ಸಾಲ ಮಾಡಿದ್ದ ಆತ ಒಂದೆಡೆ ಸಾಲಗಾರರಿಗೆ ಹಣ ಹಿಂದಿರುಗಿಸಲಾಗದೇ ಇನ್ನೊಂದೆಡೆ ಕಳೆದುಕೊಂಡ ಹಣವನ್ನು ಪಡೆಯಲಾರದೇ ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದ ಈ ಹಿನ್ನೆಲೆ ಕಳ್ಳತನವನ್ನು ಕೂಡ ಮಾಡಿದ್ದ.

ಹಣ ಒಡವೆ ನೀಡುವಂತೆ ಹೆಂಡತಿಯ ಮೇಲೆ ಕೂಡ ಒತ್ತಡ ಹಾಕಿದ್ದ ಎನ್ನಲಾಗಿದೆ. ವಯೋ ವೃದ್ಧರ 48 ಗ್ರಾಂ ಸರವನ್ನು ಕದ್ದಿದ್ದ ಆತನ ಕೃತ್ಯದ ಕುರಿತಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದರು. ಆತನ ಬಂಧನಕ್ಕೆಂದು ಪೊಲೀಸರು ಮುಂದಾದ ಸಂದರ್ಭದಲ್ಲಿ ಆರೋಪಿ ರಾಜೇಂದ್ರ ಲಾಡ್ಜ್ ನಲ್ಲಿ ನೇಣಿಗೆ ಶರಣಾಗಿರುವ ಘಟನೆ ತಿಳಿದಿದೆ. 

ಪೊಲೀಸರು ಈ ಸಂಬಂಧ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದು ಹೆಚ್ಚಿನ ಮಾಹಿತಿಗಳು ಸಂಪೂರ್ಣ ತನಿಖೆಯ ನಂತರವಷ್ಟೇ ಲಭ್ಯವಾಗಬೇಕಿದೆ.