ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಅನಾರೋಗ್ಯದ ಕಾರಣದಿಂದಾಗಿ ರೈತ ಚಳುವಳಿಯ ನಾಯಕರಾಗಿದ್ದ ಆರ್.ಆರ್ ಮಹೇಶ್ ಅವರು ನಿನ್ನೆ ನಿಧನ ಹೊಂದಿದ್ದಾರೆ.

ಇದನ್ನು ಓದಿ : ಜಿಲ್ಲಾಧ್ಯಕ್ಷರ ದೂರಿನನ್ವಯ ನಾಲ್ವರು ಕಾಂಗ್ರೆಸ್ಸಿಗರು ಅಮಾನತು

ರೈತ ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ರೈತರ ಹಿತಕ್ಕಾಗಿ ಒಂದಿಲ್ಲೊಂದು ಕಾಯಕಗಳಲ್ಲಿ ಮಗ್ನರಾಗಿರುತ್ತಿದ್ದ ಆರ್. ಆರ್ ಮಹೇಶ್ (46) ಅನಾರೋಗ್ಯ ಹೊಂದಿ ಆಸ್ಪತ್ರೆಗೆ ದಾಖಲಾಗಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.

ಮೃತ ಮಹೇಶ್ ಗ್ರಾಮ ಪಂಚಾಯಿತಿ ಸದಸ್ಯರಾಗಿಯೂ ಕೂಡ ಜನಪರ ಕಾಳಜಿಯನ್ನು ಹೊಂದಿ ಕೆಲಸ ಮಾಡಿದ್ದಾರೆ, ಅಪಾರವಾದ ಸ್ನೇಹಿತವರ್ಗ, ಕುಟುಂಬಸ್ಥರು ಹಾಗೂ ಪತ್ನಿಯನ್ನು ಮಹೇಶ್ ಅಗಲಿದ್ದು ಇಂದು ಹೊಸಕೋಟೆ ರಾಮನ ಹಳ್ಳಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಬುದ್ದಿ ಹೇಳಿದವನಿಗೆ ಕತ್ತಿ, ದೊಣ್ಣೆಯಿಂದ ಹಲ್ಲೆ ನಡೆಸಿದ ಮೂವರು ಕಾರ್ಮಿಕರು

ಬಾಳೆಹೊನ್ನೂರು : ಕೆಲಸ ಬಿಟ್ಟು ಹೋಗದಂತೆ ಬುದ್ದಿ ಹೇಳಿದ ಕಾರ್ಮಿಕನ ಮೇಲೆ ಸಹ ಕಾರ್ಮಿಕರು ಕತ್ತಿ, ದೊಣ್ಣೆಯಿಂದ ಹಲ್ಲೆ ಮಾಡಿ ಆತನನ್ನು ಗಾಯಗೊಳಿಸಿರುವ ಘಟನೆ ಬಾಳೆಹೊನ್ನೂರಿನಲ್ಲಿ ವರದಿಯಾಗಿದೆ.

ಬಾಳೆಹೊನ್ನೂರಿನ ಬನ್ನೂರು ಶಿವಣ್ಣ ಗೌಡ ಎಂಬುವವರ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಕಾರ್ಮಿಕರು ಅಂದಿನ ಕೆಲಸ ಮುಗಿಸಿ ರಾತ್ರಿ ಮದ್ಯಪಾನ ಮಾಡುವ ಸಂದರ್ಭದಲ್ಲಿ ಕಾರ್ಮಿಕನ ಮೇಲೆ ಹಲ್ಲೆಯಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ. 

ರಾತ್ರಿ ಮದ್ಯಪಾನ ಮಾಡುತ್ತಾ ಕುಳಿತಿದ್ದಾಗ ಮಣಿ, ಶಿವಕುಮಾರ್, ಕೃಷ್ಣ ಈ ತೋಟದ ಕೆಲಸ ಬಿಟ್ಟು ಬೇರೆ ಕಡೆಗೆ ಹೋಗೋಣ ಎಂದಿದ್ದಾರೆ. ಆದರೆ ಏಕಾಏಕಿ ಹೀಗೆ ಮಾಡುವುದು ಸಮಂಜಸವಲ್ಲ , ಕೆಲಸ ಬಿಡುವ ವಿಚಾರ ಮಾಲೀಕರಿಗೆ ತಿಳಿಸೋಣ ಎಂದು ಹಲ್ಲೆಗೀಡಾದ ರವಿ ಹೇಳಿದ್ದಾನೆ, ಇಷ್ಟಕ್ಕೇ ಕೋಪಗೊಂಡ ಮಣಿ, ಶಿವಕುಮಾರ್‌, ಕೃಷ್ಣ ಎಂಬ ಕಾರ್ಮಿಕರು ಕತ್ತಿ, ದೊಣ್ಣಿಯಿಂದ ರವಿ ಮೇಲೆ ಹಲ್ಲೆ ನಡೆಸಿದ್ದಾರೆ. 

ಗಾಯಾಳು ರವಿಗೆ ಬಾಳೆಹೊನ್ನೂರು ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಮಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಘಟನಾ ಸಂಬಂಧ ಬಾಳೆಹೊನ್ನೂರು ಠಾಣೆಯಲ್ಲಿ ದೂರು ದಾಖಲಾಗಿದೆ.