ಹಾಸನ : (ನ್ಯೂಸ್ ಮಲ್ನಾಡ್ ವರದಿ) ಮಹಿಳೆಯ ಸಾವಿಗೆ ಆಕೆಯ ಮನೆಯವರು ಅನುಮಾನ ವ್ಯಕ್ತಪಡಿಸಿ ಆಕೆಯದು ಕೊಲೆ ಎಂದು ಆರೋಪ ಮಾಡಿರುವ ಅನುಮಾನಾಸ್ಪದ ಘಟನೆ ಹಾಸನದಲ್ಲಿ ವರದಿಯಾಗಿದೆ.
ಹಾಸನ ನಗರದ ವಿದ್ಯಾನಗರ ಬಡಾವಣೆಯಲ್ಲಿ ರಂಜಿತಾ ಎಂಬುವವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಆದರೆ ಈ ಕುರಿತು ಅನುಮಾನ ವ್ಯಕ್ತಪಡಿಸಿರುವ ಆಕೆಯ ಕುಟುಂಬಸ್ಥರು ರಂಜಿತಾ ದಮಪತಿಗಳ ನಡುವೆ ಕೌಟುಂಬಿಕ ಕಲಹವಿದ್ದು ಆಕೆಯನ್ನು ಮನೆಯವರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ : ಇನ್ಮುಂದೆ ಕರ್ನಾಟಕದ ಚಿರಾಪುಂಜಿ ಆಗುಂಬೆ ಅಲ್ಲ, ಹಾಗಿದ್ರೆ ಅತಿ ಹೆಚ್ಚು ಮಳೆ ಬೀಳುವ ಸ್ಥಳ ಯಾವುದು ಗೊತ್ತಾ?
ರಂಜಿತಾ ಹಾಗೂ ಅಕ್ಷಯ್ ಎಂಬುವವರಿಗೆ ಕಳೆದ ಹತ್ತು ವರ್ಷಗಳ ಹಿಂದೆಯೇ ಮದುವೆಯಾಗಿದ್ದು ಮಕ್ಕಳಾಗಿರಲಿಲ್ಲ, ಈ ಕಾರಣವನ್ನೇ ನೆಪವಾಗಿಟ್ಟುಕೊಂಡು ಆಕೆಯ ಮೇಲೆ ಕುಟುಂಬಸ್ಥರು ಹಿಂಸೆ ನೀಡಿದ್ದಾರೆ, ಹಿಂಸೆ ನೀಡಿ ಆಕೆಯನ್ನು ಕೊಲೆ ಮಾಡಿ ನಂತರದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿರಿಸಲಾಗಿದೆ ಎಂದು ಮೃತ ರಂಜಿತಾಳ ಪೋಷಕರು ಆರೋಪಿಸಿದ್ದಾರೆ.
ರಂಜಿತಾಳ ಸಾವಿನ ಸುದ್ದಿಯು ತಿಳಿಯುತ್ತಿದ್ದಂತೆಯೇ ಗಂಡನ ಮನೆ ಎದುರು ಧಾವಿಸಿದ ಆಕೆಯ ಕುಟುಂಬಸ್ಥರು ಮನೆಯ ಮುಂದಿರಿಸಿದ್ದ ಹೂವಿನ ಪಾಟ್‌ಗಳನ್ನು ಒಡೆದು ಆಕ್ರೋಶ ಹೊರಹಾಕಿದ್ದಾರೆ. ಆಕೆಯದ್ದು ಆತ್ಮಹತ್ಯೆಯಲ್ಲ ಕೊಲೆ ಈ ಹಿಂದೆಯೂ ಯಾವುದೋ ವಿಚಾರಕ್ಕೆ ಆಕೆಯ ಮೇಲೆ ಹಲ್ಲೆ ನಡೆಸಲಾಗಿತ್ತು, ಈ ಘಟನೆಗೆ ಸಂಬಂಧಿಸಿದಂತೆ ದೂರು ಕೂಡ ದಾಖಲಾಗಿತ್ತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಘಟನಾ ಸಂಬಂಧಿತ ಎರಡೂ ಕುಟುಂಬಗಳ ನಡುವೆ ಕಲಹ ಉಂಟಾಯಿತು. ನಂತರದಲ್ಲಿ ಮಧ್ಯ ಪ್ರವೆಶಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸುವಲ್ಲಿ ಕಾರ್ಯನಿರ್ವಹಿಸಿದರು.
ಅಕ್ರಮವಾಗಿ ಸಾಗಾಟ ನಡೆಸುತ್ತಿದ್ದ ಶ್ರೀಗಂಧದ ತುಂಡುಗಳನ್ನು ವಶಕ್ಕೆ ಪಡೆದ ಪೊಲೀಸರು
ಕಡೂರು : ಅಕ್ರಮವಾಗಿ ಆಟೋರಿಕ್ಷಾದ ಮೂಲಕ ಶ್ರೀಗಂಧಧ ಮರದ ತುಂಡುಗಳನ್ನು ಸಾಗಾಟ ನಡೆಸುತ್ತಿದ್ದವರನ್ನು ಪತ್ತೆಮಾಡಿ ಮರದ ತುಂಡುಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಕಡೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಜೋಡಿಹೋಚಿಹಳ್ಳಿ ಗೇಟ್ ಬಳಿಯಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುವ ಸಂದರ್ಭದಲ್ಲಿ ಆಟೋರಿಕ್ಷಾದ ಮೂಲಕ ಬಂದ ಮೂವರು ಪೊಲೀಸರನ್ನು ಕಂಡು ಆಟೋವನ್ನು ಅಲ್ಲೇ ಬಿಟ್ಟು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.
ಪೊಲೀಸರು ಆಟೋವನ್ನು ಪರಿಶೀಲನೆ ನಡೆಸಿದಾಗ ಅದರಲ್ಲಿದ್ದ 70 ಕೆ.ಜಿ ತೂಕದ 15 ಶ್ರೀಗಂಧದ ತುಂಡುಗಳು ಪತ್ತೆಯಾಗಿದೆ. ಆಟೋರಿಕ್ಷಾವನ್ನು ಹಾಗೂ ಶ್ರೀಗಂಧದ ತುಂಡುಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಮೂವರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಅಂದಾಜು ಒಂದು ಲಕ್ಷ ಮೌಲ್ಯದ ಶ್ರೀ ಗಂಧದ ತುಂಡುಗಳು ಈ ಕಾರ್ಯಾಚರಣೆಯಲ್ಲಿ ಪೊಲೀಸರಿಗೆ ದೊರೆತಿದೆ.
ಘಟನೆಯ ಕುರಿತು ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಈ ಸಂಬಂಧ ತನಿಖೆ ಆರಂಭಿಸಿದ್ದಾರೆ.




0 Comments