ನರಸಿಂಹರಾಜಪುರ : (ನ್ಯೂಸ್ ಮಲ್ನಾಡ್ ವರದಿ) ವಿಷ ಸೇವಿಸಿ ಮಹಿಳೆಯೋರ್ವರು ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ನರಸಿಂಹರಾಜಪುರದಲ್ಲಿ ಬೆಳಕಿಗೆ ಬಂದಿದೆ.

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಆಡುವಳ್ಳಿ ಗ್ರಾಮದ ಸಂಪಿಗೆಮನೆಯ ಸತ್ಯವತಿ ಎಂಬ 56 ವರ್ಷ ಪ್ರಾಯದ ಮಹಿಳೆ ಆತ್ಮಹತ್ಯೆಗೆ ಶರಣಾದ ದುರ್ದೈವಿ.


ತೋಟಕ್ಕೆ ಹೋಗಿ ಬರುತ್ತೇನೆಂದು ತೆರಳಿದ್ದ ಸತ್ಯವತಿ ಅವರು ಹೊತ್ತು ಕಳೆದರೂ ಮನೆಗೆ ಹಿಂದಿರುಗಿ ಬಂದಿರಲಿಲ್ಲ, ಈ ಹಿನ್ನೆಲೆ ಮನೆಯವರು ಅನೇಕ ಕಡೆಗಳಲ್ಲಿ ಹುಡುಕಿದ್ದಾರೆ, ಆದರೆ ಸತ್ಯವತಿ ಅವರು ಎಲ್ಲೂ ದೊರೆಯಲಿಲ್ಲ ಬಳಿಕ ಕಾಫಿ ತೋಟದಲ್ಲಿನ ಕಾಫಿ ಗಿಡದ ಅಡಿಯಲ್ಲಿ ಅವರ ಶವ ದೊರೆತಿದೆ. 

ಕಳೆದ ಅನೇಕ ದಿನಗಳಿಂದ ಸತ್ಯವತಿ ಅವರು ಹೊಟ್ಟೆ ನೋವಿನಿಂದ ಬಳಲುತ್ತಿದ್ದರು ಈ ಸಂಬಂಧ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪತಿ ಗಣಪಯ್ಯ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.