ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಬಹಿರ್ದೆಸೆಗೆಂದು ತೆರಳಿದ್ದ ವ್ಯಕ್ತಿಯೋರ್ವ ಆಯತಪ್ಪಿ ಬಾವಿಗೆ ಬಿದ್ದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಇದನ್ನೂ ಓದಿ : ವ್ಯಕ್ತಿ ನಾಪತ್ತೆ ; ಕಂಡಲ್ಲಿ ತಿಳಿಸುವಂತೆ ಕುಟುಂಬಸ್ಥರ ಮನವಿ
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹೊಸಬಾಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಎನ್. ದೊಡ್ಡೇರಿ ಗ್ರಾಮದ ಹನುಮಂತಪ್ಪ ಎಂಬ 48 ವರ್ಷ ಪ್ರಾಯದ ವ್ಯಕ್ತಿ ಆಯತಪ್ಪಿ 60 ಅಡಿ ಆಳವಿರುವ ಬಾವಿಗೆ ಬಿದ್ದ ವ್ಯಕ್ತಿ.
ಬಹಿರ್ದೆಸೆಗೆಂದು ತೆರಳಿದ್ದ ಅವರು ಕಾಲುಜಾರಿ ಬಾವಿಗೆ ಬಿದ್ದು ಏನೂ ಮಾಡಲಾರದ ಪರಿಸ್ಥಿತಿಯಲ್ಲಿ ಕೂಗಲಾರಂಭಿಸಿದರು, ಅವರ ಧ್ವನಿಯನ್ನು ಆಲಿಸಿದ ಸುತ್ತಮುತ್ತಲಿನ ಗ್ರಾಮಸ್ಥರು ಅಗ್ನಿಶಾಮಕ ಇಲಾಖೆಗೆ ಕರೆ ಮಾಡಿ ಈ ಕುರಿತು ಮಾಹಿತಿ ನೀಡಿದ್ದಾರೆ, ಕೂಡಲೇ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಆರಂಭಿಸಿದ ಅಗ್ನಿಶಾಮಕದಳದ ಸಿಬ್ಬಂದಿಗಳು ಸತತವಾಗಿ ಎರಡು ಗಂಟೆಗಳ ಕಾರ್ಯಾಚರಣೆ ನಡೆಸಿ ವ್ಯಕ್ತಿಯನ್ನು ಬಾವಿಯಿಂದ ಮೇಲಕ್ಕೆತ್ತುವಲ್ಲಿ ಸಫಲರಾಗಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಮಹಾಬಲೇಶ್ವರ, ಚಾಲಕ ಪ್ರಶಾಂತ್, ಸಿಬ್ಬಂದಗಳಾದ ಮಂಜುನಾಥ, ಪ್ರದೀಪ್, ಪರಶುರಾಮಪ್ಪ, ಪ್ರಸನ್ನ ಕುಮಾರ್ ಪಾಲ್ಗೊಂಡು ಬಾವಿಯಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಮೇಲಕ್ಕೆತ್ತುವಲ್ಲಿ ಸಹಾಯ ಮಾಡಿದ್ದಾರೆ. ತಮ್ಮನ್ನು ಸುರಕ್ಷಿತವಾಗಿ ಬಾವಿಯಿಂದ ಮೇಲಕ್ಕೆ ತಂದ ಇಲಾಖೆಯ ಅಧಿಕಾರಿವರ್ಗ ಹಾಗೂ ಸಿಬ್ಬಂದಿಗಳಿಗೆ ಹನುಮಂತಪ್ಪ ಕೃತಜ್ಞತೆಗಳನ್ನು ಸಲ್ಲಿಸಿದರು.




0 Comments