ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಕಳೆದ ವಾರ ಮನೆಯಿಂದ ನಾಪತ್ತೆಯಾಗಿದ್ದ ಯುವಕನೊಬ್ಬನ ಶವ ಪತ್ತೆಯಾಗಿದೆ. ಸ್ಮಶಾನದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಯು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ ನಡೆದಿದೆ.

ಇದನ್ನೂ ಓದಿ : ಕಿಕ್ಕೇರಿಸಿಕೊಂಡು ಯುವಕ ಯುವತಿಯರು ಜೀಪಿನ ಟಾಪ್ ಮೇಲೆ ಸವಾರಿ, ಪೊಲೀಸರ ಕಡಕ್ ಆಕ್ಷನ್

ಚನ್ನಗಿರಿ ತಾಲೂಕಿನ ಕಾಗತ್ತೂರು ಗ್ರಾಮದ ಎಂ.ಕೆ.ಸ್ವಾಮಿ(27) ಮೃತ ವ್ಯಕ್ತಿ. ಈತ ಆಗುಂಬೆ ಗ್ರಾಮದ ಸ್ಮಶಾನದಲ್ಲಿ ನೇಣಿಗೆ ಶರಣಾಗಿದ್ದಾನೆ.

ವಾರದ ಹಿಂದೆ ಈತ ನಾಪತ್ತೆಯಾಗಿದ್ದ. ಈತನಿಗೆ ಇನ್ನೂ ಮದುವೆ ಆಗಿರಲಿಲ್ಲ, ಪೋಷಕರು ಮಗ ಕಾಣೆಯಾದ ಬಗ್ಗೆ  ಠಾಣೆಯಲ್ಲಿ ದೂರು ನೀಡಿದ್ದರು. ಈತ ಸ್ಮಶಾನದಲ್ಲಿ ಡೆತ್​ನೋಟ್​ ಬರೆದಿಟ್ಟು ದುರಂತ ಅಂತ್ಯ ಕಂಡಿದ್ದಾನೆ. 

ಅಪ್ಪ ಅಣ್ಣ ನನ್ನನ್ನು ಕ್ಷಮಿಸಿ ಎಂದು ಸ್ವಾಮಿಯ ಡೆತ್​ನೋಟ್​ನಲ್ಲಿದೆ. ತಿರ್ಥಹಳ್ಳಿಯ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.